ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಆಫೀಸಿಗೆ ಹೋಗಿ ದುಡಿಯುವುದು ಕಷ್ಟ. ಕುಟುಂಬ ನಿರ್ವಹಣೆ ಅಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡ ಹೆಣ್ಣು ಮಕ್ಕಳು ಅದಕ್ಕೆ ಮೊದಲನೇ ಪ್ರಾಧಾನ್ಯತೆ ಕೊಡುತ್ತಾರೆ. ಇದರ ಜೊತೆ ಮನೆಯಲ್ಲಿಯೇ ಮಾಡಬಹುದಾದ ಯಾವುದಾದರೂ ಸಣ್ಣ ಪುಟ್ಟ ಕೆಲಸ ಆದರು ಸಾಕು ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬೇಕಾದಷ್ಟು ಹಣ ಸಿಗುವಂತ ಕೆಲಸ ಆದರೆ ಸಾಕು ಎಂದು ಬಯಸುತ್ತಿರುತ್ತಾರೆ.
ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ಹೆಣ್ಣು ಮಕ್ಕಳು ಇಷ್ಟಕ್ಕೆ ನಮ್ಮ ಜೀವನ ನಿಂತು ಹೋಯ್ತಾ ಇನ್ನು ಮುಂದೆ ಖರ್ಚಿಕಾಗಿ ಮತ್ತೊಬ್ಬರ ಹಣದ ಮೇಲೆ ಅವಲಂಬಿತವಾಗಬೇಕಾ ಎಂದು ಕೊರಗುಬೀಕಿಲ್ಲ. ಕೆಲವು ಕೆಲಸಗಳನ್ನು ಕಲಿಯುವುದರಿಂದ ಕೂಡ ಅವರು ಆರ್ಥಿಕವಾಗಿ ಸದೃಢವಾಗಬಹುದು. ಅಂತಹ ಆಸಕ್ತಿ ಇರುವ ಎಲ್ಲರಿಗೂ ಈಗ ಸುವರ್ಣ ಅವಕಾಶ.
ಯಾಕೆಂದರೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ನೀಡಲು ನಿರ್ಧರಿಸಿದೆ. ಇದರ ಬಗ್ಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರಾದ ಪ್ರವೀಣ್ ಬಸವರಾಜು ಅವರೇ ಮಾಹಿತಿ ತಿಳಿಸಿದ್ದಾರೆ. ಆಸಕ್ತರು ಯಾವ ರೀತಿ ಅರ್ಜಿ ಸಲ್ಲಿಸಬೇಕು, ಎಲ್ಲಿ ಈ ತರಬೇತಿ ಆರಂಭ ಮಾಡಲಾಗಿದೆ ಮತ್ತು ಯಾರೆಲ್ಲಾ ಈ ತರಬೇತಿ ಪಡೆಯಲು ಅರ್ಹರು ಎಂಬಿತ್ಯಾದಿ ವಿವರಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಈ ಉಪಯುಕ್ತ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಿ ಹಾಗೂ ನಿಮ್ಮ ಕುಟುಂಬದಲ್ಲಿರುವ ಇತರ ಹೆಣ್ಣು ಮಕ್ಕಳ ಜೊತೆಗೂ ಕೂಡ ಈ ವಿಷಯವನ್ನು ಹಂಚಿಕೊಳ್ಳಿ.
ತರಬೇತಿ ನೀಡುವ ಸಂಸ್ಥೆ:- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ.
ಸ್ಥಳ:- ಬಳ್ಳಾರಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
● ಬಳ್ಳಾರಿ ಜಿಲ್ಲೆಯ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
● ಕನಿಷ್ಠ ಏಳನೇ ತರಗತಿ ಪಾಸ್ ಆಗಿರಬೇಕು
● 20 ರಿಂದ 45 ಒಳಗಿನ ವಯೋಮಾನದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
● ತರಬೇತಿ ಬಗ್ಗೆ ಪ್ರಾಥಮಿಕ ಮಾಹಿತಿ ಹೊಂದಿದವರಿಗೆ ಮೊದಲನೆಯ ಆದ್ಯತೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು:-
● ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ
● ರೇಷನ್ ಕಾರ್ಡ್ ಪ್ರತಿ
● ಆಧಾರ್ ಕಾರ್ಡ್ ಪ್ರತಿ
ಅರ್ಜಿ ಸಲ್ಲಿಕೆಗೆ ಕುರಿತಾದ ಪ್ರಮುಖ ಸಂಗತಿಗಳು:-
● ಇಂದು ಬಿಳಿ ಹಾಳೆಯಲ್ಲಿ ಸ್ವ-ವಿವರಗಳನ್ನು ಒಳಗೊಂಡ ಅರ್ಜಿ ಬರೆದು ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಸಂಬಂಧ ಪಟ್ಟ ದಾಖಲೆಗಳನ್ನು ಲಗತ್ತಿಸಿ ಅ ಅರ್ಜಿಯನ್ನು ಕಡೆ ದಿನಾಂಕದೊಳಗೆ ಬಳ್ಳಾರಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ಸಲ್ಲಿಸಬೇಕು.
● 35 ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಈ ಅವಕಾಶ ಸಿಗುತ್ತದೆ.
● ಹೆಚ್ಚಿನ ಅರ್ಜಿಗಳು ಬಂದಲ್ಲಿ ಸಂದರ್ಶನ ನಡೆಸಿ 35 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
● ಊಟ ವಸತಿ ಜೊತೆ ತರಬೇತಿ ಉಚಿತ ಆಗಿರುತ್ತದೆ ಆದರೆ ತರಬೇತಿಗೆ ಪಾಲ್ಗೊಳ್ಳಲು ತಗಲುವ ಪ್ರಯಾಣ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕು
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ 20 ಏಪ್ರಿಲ್, 2023
● ತರಬೇತಿಗಳು ಆರಂಭವಾಗುವ ದಿನಾಂಕ 24 ಏಪ್ರಿಲ್, 2023
ಹೆಚ್ಚಿನ ಮಾಹಿತಿಗಾಗಿ ವಿಳಾಸ ಮತ್ತು ದೂರವಾಣಿ ಸಂಖ್ಯೆ:-
ನಿರ್ದೇಶಕರ ಕಛೇರಿ,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ,
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ,
ಡಿ ಐ ಸಿ ಕಾಂಪೌಂಡ್, ಬಳ್ಳಾರಿ.
ದೂ.ಸಂಖ್ಯೆ: 08392-299117
ಮೊ.ಸಂಖ್ಯೆ: 9663770207