ಬಡವರು, ಸಾಮಾನ್ಯರು ಮತ್ತು ಶ್ರೀಮಂತರಿಗೆ ಎಲ್ಲಾ ವರ್ಗದವರಿಗೂ ಕೂಡ ಇಷ್ಟವಾದ ಪ್ರಯಾಣ ರೈಲು ಪ್ರಯಾಣ ದೂರದ ಊರಿನ ಪ್ರವಾಸಕ್ಕೆ, ಕುಟುಂಬದ ಎಲ್ಲರೂ ಒಟ್ಟಾಗಿ ಹೋಗುವಾಗ ಮನೆಯಲ್ಲಿ ಇರುವಂತಹ ಅನುಭವ ನೀಡುವ ಕಾರಣಕ್ಕಾಗಿ ಜೊತೆಗೆ ಟಿಕೆಟ್ ದರ ಕಡಿಮೆ ಇರುವುದರಿಂದ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವವರು ಸಹ ರೈಲು ಪ್ರಯಾಣವನ್ನೇ ಬಯಸುತ್ತಾರೆ.
ಒಂದು ರೀತಿಯಲ್ಲಿ ರೈಲು ಪ್ರಯಾಣ ಎಲ್ಲಾ ರೀತಿಯಲ್ಲೂ ಅನುಕೂಲಕರವಾದ. ಪ್ರಯಾಣದ ಟಿಕೆಟ್ ದರ ಕಡಿಮೆ ಇರುವುದು, ಅತಿ ವೇಗವಾಗಿ ನಾವು ತಲುಪಬೇಕಾಗಿರುವ ಸ್ಥಳಕ್ಕೆ ತಲುಪುವುದು, ಮತ್ತು ಪ್ರಯಾಣವು ಸುಖಕರವಾಗಿರುವುದು ಇನ್ನು ಮುಂತಾದ ಎಲ್ಲಾ ಕಾರಣಕ್ಕಾಗಿ ಹೆಚ್ಚಿನ ಮಂದಿ ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ, ಹೆಚ್ಚಾಗಿ ರೈಲಿನಲ್ಲಿಯೇ ಪ್ರಯಾಣಿಸುತ್ತಾರೆ.
ಸಧ್ಯಕ್ಕೆ ಈಗ ರೈಲು ಸಾರಿಗೆ ವ್ಯವಸ್ಥೆಯು ದೇಶದಾದ್ಯಂತ ಆವರಿಸಿದ್ದು ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಇಲಾಖೆಯೂ ಆಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಈಗ ರೈಲಿನಲ್ಲಿ ಪ್ರಯಾಣಿಸಲು ಆನ್ಲೈನಲ್ಲೂ ಕೂಡ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆದರೆ ಹೆಚ್ಚಿನವರು ಈ ರೀತಿ ಕಾಯ್ದಿರಿಸುವ, ಆನ್ಲೈನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಬದಲು ರೈಲ್ವೆ ನಿಲ್ದಾಣಕ್ಕೆ ಹೋಗಿ ಟಿಕೆಟ್ ಪಡೆದು ಪ್ರಯಾಣಿಸಲು ಹೋಗುತ್ತಾರೆ.
ಎಲ್ಲರೂ ಟಿಕೆಟ್ ಖರೀದಿಸಿಯೇ ರೈಲಿನಲ್ಲಿ ಪ್ರಯಾಣಿಸುತ್ತಾರೆ ಅಂತಲೂ ಹೇಳಲು ಆಗುವುದಿಲ್ಲ. ಯಾಕೆಂದರೆ ನಾವೇ ನಮ್ಮ ಇಷ್ಟು ವರ್ಷದ ಅನುಭವಗಳಲ್ಲಿ ಸಾಕಷ್ಟು ಬಾರಿ ಈ ಸನ್ನಿವೇಶವನ್ನು ನೋಡಿರುತ್ತೇವೆ. ಟಿಟಿ ಬಂದು ಚೆಕ್ ಮಾಡಿದಾಗ ಟಿಕೆಟ್ ಇಲ್ಲದ ಕಾರಣ ನಮ್ಮ ಕಣ್ಣೆದುರೇ ಸಾಕಷ್ಟು ಮಂದಿ ದಂಡ ತೆತ್ತಿರುತ್ತಾರೆ. ಇದೊಂದು ಅಕ್ಷಮ್ಯ ಅಪರಾಧ, ಟಿಕೆಟ್ ರಹಿತ ಪ್ರಯಾಣವು ದಂಡಕ್ಕೆ ಆಹ್ವಾನ ಇತ್ತಂತೆ.
ಜೊತೆಗೆ ಅದೊಂದು ಬೇಜವಾಬ್ದಾರಿತನ ಹಾಗೂ ವಂಚನೆಯೂ ಹೌದು ಆದರೆ ಎಲ್ಲರೂ ಕೂಡ ಬೇಕೆಂದೆಲೇ ಈ ರೀತಿ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ಕಾರಣಾಂತರಗಳಿಂದ ಟಿಕೆಟ್ ಪಡೆದುಕೊಳ್ಳಲು ಸಾಧ್ಯವಾಗದವರು ಇದ್ದಾರೆ. ಉದಾಹರಣೆಗೆ, ಟಿಕೆಟ್ ಖರೀದಿಸಲು ಹೋಗಿ ಜನ ಜಂಗುಳಿ ಹೆಚ್ಚಿದ್ದ ಕಾರಣ ಟ್ರೈನ್ ಮಿಸ್ ಆಗುತ್ತದೆ ಎಂದು ಟ್ರೈನ್ ಹತ್ತಿರಬಹುದು ಅಥವಾ ಆ ರಶ್ ನಲ್ಲಿ ಅವರು ಖರೀದಿಸಿದ ಟಿಕೆಟ್ ಕಳೆದುಕೊಂಡಿರಬಹುದು.
ಇನ್ನು ಮುಂತಾದ ನಾನಾ ಕಾರಣಗಳು ಟಿಕೆಟ್ ಖರೀದಿಸಲು ಸಾಧ್ಯವಾಗದೆ ಹೋಗುವ ಪರಿಸ್ಥಿತಿಗೆ ತರುತ್ತದೆ. ಅಂತಹ ಸಮಯಗಳಲ್ಲಿ ಟಿಟಿ ಕಣ್ಣಿಗೆ ಸಿಕ್ಕಿ ಬಿಟ್ಟರೆ ದಂಡ ಕಟ್ಟದೆ ದಾರಿಯಿಲ್ಲ. ಆದರೆ ಇಂದು ನಾವು ಹೇಳುವ ಈ ಒಂದು ಉಪಾಯವನ್ನು ಬಳಸಿದರೆ ನೀವು ಖಂಡಿತವಾಗಿಯೂ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರು ದಂಡ ತೆರಬೇಕಾದ ಪರಿಸ್ಥಿತಿ ಒದಗುವುದಿಲ್ಲ.
ಅದೇನೆಂದರೆ ನೀವೇ ಅವರ ಬಳಿ ಹೋಗಿ ಪರಿಸ್ಥಿತಿ ವಿವರಿಸಿ ಟಿಕೆಟ್ ಪಡೆದುಕೊಂಡರೆ ಅವರು ನಿಮ್ಮ ಪ್ರಯಾಣದ ಟಿಕೆಟ್ ದರಕ್ಕಿಂತ ಹತ್ತು ರೂಪಾಯಿ ಹೆಚ್ಚಿಗೆ ಪಡೆದು ಟಿಕೆಟ್ ನೀಡುತ್ತಾರೆ. ಆದರೆ ಇದು ನೀವೇ ಮೊದಲು ಹೋಗಿ ಟಿಟಿ ಯಿಂದ ಟಿಕೆಟ್ ಪಡೆದರೆ ಮಾತ್ರ ಒಂದು ವೇಳೆ ಅವರು ಟಿಕೆಟ್ ಪರಿಶೀಲನೆಗೆ ಬಂದಾಗ ನೀವು ಏನೇ ಕಥೆ ಹೇಳಿದರು ಕೂಡ ಅದು ಅಲ್ಲಿ ನಡೆಯುವುದಿಲ್ಲ.
ನೀವು ಕಟ್ಟಬೇಕಾದ ದಂಡ ಕಟ್ಟಲೇ ಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ. ಮತ್ತು ಒಂದು ವೇಳೆ ಅಂತಹ ಪರಿಸ್ಥಿತಿ ಉಂಟಾದಾಗ ನಾವು ಹೇಳಿದ ಈ ಉಪಾಯವನ್ನು ಬಳಸಿ ಮತ್ತು ಈ ಉಪಯುಕ್ತ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.