ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಪ್ರತಿ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿವೆ. ಪ್ರತಿಯೊಂದು ವರ್ಗವನ್ನು ಕೂಡ ಗಮನದಲ್ಲಿಟ್ಟುಕೊಂಡಿರುವ ಸರ್ಕಾರಗಳು ಎಲ್ಲಾ ವರ್ಗದ ಜನರನ್ನು ಮೇಲ್ಮಟಕ್ಕೆ ತರಲು ಪ್ರಯತ್ನಿಸುತ್ತಿವೆ ಈಗಾಗಲೇ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು, ಗೃಹಿಣಿಯರು ಹೀಗೆ ಎಲ್ಲಾ ವಿಭಾಗದಲ್ಲೂ ಕೂಡ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗುಣಮಟ್ಟದ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿವೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮಲಹರಿಸಲಾಗಿದೆ. ಕಾರಣ ಇಷ್ಟೇ ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಆದಕಾರಣ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ವಿದ್ಯಾಭ್ಯಾಸ ಮಟ್ಟವನ್ನು ಹೆಚ್ಚಿಸಲು ನಡುವೆ ಬರುವ ತೊಡಕುಗಳನ್ನು ತೊಡೆದು ಹಾಕುವ ಸಲುವಾಗಿ ಬಿಸಿಯೂಟ,ಉಚಿತ ಸೈಕಲ್ ವಿಸ್ತರಣೆ, ಸ್ಕಾಲರ್ಶಿಪ್ ಗಳು, ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ವಿತರಣೆ ಇನ್ನೂ ಮುಂತಾದ ಯೋಚನೆಗಳನ್ನು ಕೈಗೆತ್ತಿಕೊಂಡಿವೆ.
ಸದ್ಯಕ್ಕೆ ಈಗ ರಾಜ್ಯದಲ್ಲಿ ಉಚಿತ ಸ್ಕೂಟಿ ಯೋಜನೆ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ನಮ್ಮ ಕರ್ನಾಟಕ ಸರಕಾರವು ಜಾರಿಗೆ ತಂದಿರುವಂತಹ ಯೋಜನೆ ಇದಾಗಿತ್ತು ಈ ಯೋಜನೆ ಮೂಲಕ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಹೆಣ್ಣು ಮಕ್ಕಳು ಎಲೆಕ್ಟ್ರಿಕಲ್ ಸ್ಕೂಟಿಗಳನ್ನು ಪಡೆಯಲಿದ್ದಾರೆ. ಈಗಾಗಲೇ ಕಳೆದ ಎರಡು ಆರ್ಥಿಕ ವರ್ಷಗಳಿಂದಲೂ ಕೂಡ ಈ ಯೋಜನೆ ಜಾರಿಗೆ ಬಂದಿದ್ದು ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಸ್ಕೂಟಿ ವಿತರಣೆ ಬಗ್ಗೆ ಸರ್ಕಾರ ಗಮನ ಹರಿಸಿದೆ.
ಈ ಬಾರಿ ರಾಜ್ಯದ ಐದು ಸಾವಿರಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿನಿಯರುಗಳು ಈ ಪ್ರಯೋಜನ ಪಡೆಯಲಿದ್ದಾರೆ. ವಿದ್ಯಾರ್ಥಿನಿಯರು ಕೂಡ ಇದರ ಬಗ್ಗೆ ಕಾತುರರಾಗಿತ್ತು ಅರ್ಜಿ ಆಹ್ವಾನ ಯಾವಾಗ ಆರಂಭವಾಗುತ್ತದೆ ಯಾವಾಗ ವಿತರಣೆ ಆಗುತ್ತದೆ ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದಾರೆ. ಈ ಅಂಕಣದಲ್ಲಿ ಈ ಉಚಿತ ಸ್ಕೂಟಿ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಗಳನ್ನು ತಿಳಿಸಲಾಗಿದೆ.
ಸ್ಕೂಟಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
ಮತದಾರರ ಕಾರ್ಡ್
ಗುರುತಿನ ಚೀಟಿ
ಪ್ಯಾನ್ ಕಾರ್ಡ್
ಮೊಬೈಲ್ ನಂಬರ್
ಬ್ಯಾಂಕ್ ಖಾತೆಯ ಪಾಸ್ ಪುಸ್ತಕ
12ನೇ ತರಗತಿಯ ಅಂಕಪಟ್ಟಿ
ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
ಉಚಿತ ಸ್ಕೂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
● ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬೇಕು
● ಕಳೆದ ಆರ್ಥಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಆಗಿರಬೇಕು
● ಯಾವುದೇ ಜಾತಿಯ ಯಾವುದೇ ವರ್ಗದ ಹೆಣ್ಣು ಮಕ್ಕಳು ಬೇಕಾದರು ಅರ್ಜಿ ಸಲ್ಲಿಸಬಹುದು
● ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳ ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆರಿಸಲಾಗುವುದು.
● ಕರ್ನಾಟಕ ರಾಜ್ಯದ ಕಾಲೇಜಿನಲ್ಲಿಯೇ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರಬೇಕು
● ರೆಗ್ಯುಲರ್ ಕ್ಲಾಸ್ ಮೂಲಕ ಶಿಕ್ಷಣ ಪಡೆದಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಹರಾಗಿರುತ್ತಾರೆ.
ಉಚಿತ ಸ್ಕೂಟಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ನಂತರದ ಕ್ರಮಗಳು:-
● ಈ ಉಚಿತ ಸ್ಕೂಟಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಕೋಟಿ ಪಡೆಯುವ ಇಚ್ಛೆ ಇರುವ ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಸಂಬಂಧಪಟ್ಟ ದಾಖಲೆಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
●ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಅರ್ಜಿ ಆಹ್ವಾನ ಮಾಡಲಿದೆ ಆ ಸಮಯದಲ್ಲಿ ಅರ್ಜಿ ಸಲ್ಲಿಸಿ, ವಿತರಣೆ ಬಗ್ಗೆ ಕೂಡ ಅನೌನ್ಸ್ ಮಾಡಿಲಿದೆ ಆ ಸಮಯದಲ್ಲಿ ಈ ಯೋಜನೆಯ ಮೂಲಕ ಉಚಿತ ಸ್ಕೂಟಿಯನ್ನು ಪಡೆದುಕೊಳ್ಳಿ.