ಪ್ರತಿಯೊಬ್ಬ ವ್ಯಕ್ತಿಗೂ ಉಳಿತಾಯ ಎನ್ನುವುದು ಬಹಳ ಮುಖ್ಯ. ಮುಂದಿನ ಜೀವನಕ್ಕಾಗಿ ಸ್ವಲ್ಪವಾದರೂ ಉಳಿತಾಯ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ವೃದ್ದಾಪ್ಯ ಜೀವನದ ಸುರಕ್ಷತೆಗಾಗಿ ಈಗಿನಿಂದ ಹಣ ಉಳಿಸುವ ಅಥವಾ ಹೂಡಿಕೆ ಮಾಡುವ ಯೋಜನೆಯಲ್ಲಿ ಇದ್ದರೆ ಸರ್ಕಾರದ ಈ ಒಂದು ಸ್ಕೀಮ್ ಬೆಸ್ಟ್. ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗಾಗಿ ಹಲವು ಯೋಜನೆಗಳು ಜಾರಿಗೆ ತಂದಿದೆ.
ಅಂತೆಯೇ ದುಡಿಯುವ ವರ್ಗದ ಜನರ ಭವಿಷ್ಯದ ದೃಷ್ಟಿಯಿಂದಲೂ ಕೂಡ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹದೇ ಒಂದು ಜನಪ್ರಿಯ ಸ್ಕೀಮ್ ಪ್ರಧಾನಮಂತ್ರಿ ಶ್ರಮಯೋಗಿ ಮಂದನ್ ಯೋಜನೆ. ಇಂತಹ ಯೋಜನೆಗಳ ಪೈಕಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ (Pradhanmantri Shram Yogi Mandhan Yojana) ಕೂಡ ಒಂದು. ಈ ಯೋಜನೆಯೂ ವೃದ್ಧಾಪ್ಯ ಸಾಮಾಜಿಕ ಭದ್ರತೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.
ಕೇಲವ 55 ರೂ.ಗಳನ್ನು ಹೂಡಿಕೆ ಮಾಡಿದ್ರೆ, ತಿಂಗಳಿಗೆ 3 ಸಾವಿರ ಪಿಂಚಣಿ(New Pension Scheme) ಪಡೆಯುವ ಅವಕಾಶವು ಇದೆ. ಅಸಂಘಟಿತ ಕಾರ್ಮಿಕರೆಲ್ಲರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಯೋಜನೆಯಲ್ಲಿ 18 ರಿಂದ 40 ವರ್ಷ ವಯಸ್ಸಿನ ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ.55 ರಿಂದ ರೂ.200 ರ ನಡುವೆ ಹೂಡಿಕೆ ಮಾಡಬೇಕು.
ಆದರೆ, ಫಲಾನುಭವಿಯು 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ರೂ.3 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಒಂದು ವೇಳೆ ಫಲಾನುಭವಿಯೂ ಮರಣ ಹೊಂದಿದರೆ, ಆ ಪಿಂಚಣಿ ಹಣ ಅರ್ಧದಷ್ಟು ಅಂದರೆ, ತಿಂಗಳಿಗೆ 1500 ರೂಗಳು ಆ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳಿಗೆ ಸಿಗುತ್ತದೆ.
ಈ ಯೋಜನೆಯ ಫಲಾನುಭವಿಯಾಗಲು ಏನೆಲ್ಲಾ ಅರ್ಹತೆಗಳಿರಬೇಕು?
* ಅಸಂಘಟಿತ ಕಾರ್ಮಿಕರ ಮಾಸಿಕ ಆದಾಯವು ತಿಂಗಳಿಗೆ 15 ರೂ. ಸಾವಿರಕ್ಕಿಂತ ಕಡಿಮೆಯಿರಬೇಕು.
* ಯಾವುದೇ ಸಂಘಟಿತ ವಲಯದ (EPFO/NPS/ESIC) ಸದಸ್ಯರಾಗಿರಬಾರದು.
* ತೆರಿಗೆದಾರರಾಗಿದ್ದರೆ ಈ ಯೋಜನೆ ಪಡೆಯಲು ಆಗುವುದಿಲ್ಲ.
* ಫಲಾನುಭವಿಯು ಆಧಾರ್ ಕಾರ್ಡ್, IFSC ನೊಂದಿಗೆ ಉಳಿತಾಯ ಬ್ಯಾಂಕ್ ಖಾತೆ/ಜನ್ ಧನ್ ಖಾತೆ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
*ಅರ್ಜಿ ಸಲ್ಲಿಸುವುದು ಹೇಗೆ?
ಹತ್ತಿರದ ಸೇವಾ ಕೇಂದ್ರದಲ್ಲಿ ನೀವು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಾಖಲೆಗಳು
* ಆಧಾರ್ ಕಾರ್ಡ್
* ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಅಥವಾ ಜನ್ ಧನ್ ಖಾತೆ ಅಥವಾ ಚೆಕ್
* ಬ್ಯಾಂಕ್ ಸ್ಟೇಟ್ ಮೆಂಟ್
* ಇತ್ತೀಚಿನ ಭಾವಚಿತ್ರ.
ಇನ್ನಿತರ ಪ್ರಮುಖ ವಿಷಯಗಳು
* ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ನೀವು ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ ಅರ್ಜಿ ಸಲ್ಲಿಸಿ ಯೋಜನೆ ಖರೀದಿಸಬಹುದು.
* ಪ್ರತಿ ತಿಂಗಳು ತಪ್ಪದೇ 55 ರಿಂದ 200 ಹೂಡಿಕೆ ಮಾಡಬೇಕು.
* ನಿಮಗೆ 60 ವರ್ಷ ತುಂಬಿದ ಬಳಿಕ ನೀವು ಹೂಡಿಕೆ ಮಾಡಿದ ಹಣದ ಅನುಸಾರವಾಗಿ ಗರಿಷ್ಠ 3,000 ರೂ.ವರೆಗೆ ನಿಮಗೆ ಪಿಂಚಣಿ ರೂಪದ ಹಣ ಸಿಗುತ್ತದೆ.
* ಒಂದು ವೇಳೆ ನೀವು ಮರಣ ಹೊಂದಿದ ಪಕ್ಷದಲ್ಲಿ ನಿಮ್ಮ ಪತ್ನಿ ಅಥವಾ ಮಕ್ಕಳು ಇದದಲ್ಲಿ ಅರ್ಧ ಮೊತ್ತದ ಹಣವನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ.