ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಂತಹ ಫಸಲ್ ಭೀಮಾ ಯೋಜನೆ ಈಗ ದೇಶದಾದ್ಯಂತ ಹೆಸರುವಾಸಿಯಾಗಿದೆ. ಇದು ಭಾರತ ದೇಶದ ರೈತರಿಗಾಗಿಯೇ ಜಾರಿಗೆ ತಂದಿರುವ ಯೋಜನೆಯಾಗಿದೆ. ಯಾಕೆಂದರೆ ಭಾರತದ ಕೃಷಿಯು ವಾತಾವರಣದ ಮೇಲೆ ನಿರ್ಧರಿತವಾಗಿದೆ. ಮಳೆ, ಗಾಳಿ ಅಥವಾ ಬರಗಾಲ ಯಾವುದೇ ಕಾರಣಕ್ಕೂ ಬೆಳೆ ಹಾನಿ ಆದ ಪಕ್ಷದಲ್ಲಿ ಫಸಲ್ ಭೀಮಾ ಯೋಜನೆ ಮೂಲಕ ರೈತರು ಬೆಳೆ ವಿಮೆ ಕಟ್ಟಿದ್ದರೆ ಅಂತಹ ರೈತರಿಗೆ ಪರಿಹಾರ ಧನ ಸಿಗುತ್ತದೆ.
ಈ ಯೋಜನೆ ಜಾರಿಗೆ ಬಂದ ದಿನದಿಂದಲೂ ಕೂಡ ರೈತಸ್ನೇಹಿ ಎನಿಸಿದೆ. ಅನೇಕ ರೈತರು ಎಂದು ತಾವು ಬೆಳೆಯುತ್ತಿರುವ ಬೆಳೆಗಳಿಗೆ ಅವರ ಬೆಳೆಗೆ ಅನುಸಾರವಾಗಿ ಫಸಲು ಭೀಮಾ ಯೋಜನೆಯಲ್ಲಿ ವಿಮೆ ಕಟ್ಟಿಕೊಂಡು ಬರುತ್ತಾ ಇದ್ದಾರೆ, ಅದರಂತೆ ಬೆಳೆ ಹಾನಿಗೊಳಗಾದ ರೈತರು ಪರಿಹಾರವನ್ನು ಪಡೆಯುತ್ತಿದ್ದಾರೆ.
ರಾಬಿ, ಖಾರಿಫ್, ಬೇಸಿಗೆ ಈ ರೀತಿ ಯಾವ ಸೀಸನ್ ಬೆಳಗಾದರೂ ಕೂಡ ಈ ಯೋಜನೆ ಮೂಲಕ ಪರಿಹಾರ ಪಡೆಯಬಹುದು ಕರ್ನಾಟಕ ರಾಜ್ಯದಲ್ಲೂ ಕೂಡ 2022-23ನೇ ಸಾಲಿನಲ್ಲಿ ಸಾಕಷ್ಟು ಬೆಳೆ ಹಾನಿ ಉಂಟಾಗಿತ್ತು. ಉತ್ತರದ ಭಾಗದಲ್ಲಿ ಭಾರಿ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಕುಯ್ಲಿನ ಹಂತಕ್ಕೆ ಬಂದಿದ್ದ ಬೆಳೆ ಹಾನಿಯಾಗಿ ರೈತರು ತೀರ ಸಮಸ್ಯೆಗೆ ಸಿಲುಕಿದರು. ಆದರೆ ಅವರು ಮಾಡಿಸಿದ ಬೆಳೆವಿಮೆ ಅವರ ಕೈ ಹಿಡಿದಿದೆ.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ ಪರಿಹಾರ ಧನ ಪಡೆಯಬಹುದು. ಈಗಾಗಲೇ ಉತ್ತರ ಕರ್ನಾಟಕದ ಭಾಗದ ಹಲವು ಜಿಲ್ಲೆಯ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರ ಹಣ ಜಮೆ ಕೂಡ ಆಗಿದ್ದು, ಕೆಲ ಜಿಲ್ಲೆಯವರು ಇನ್ನೂ ನಿರೀಕ್ಷೆಯಲ್ಲಿದ್ದಾರೆ. ಈ ರೀತಿ ಬೆಳೆವಿಮೆಗೆ ಅರ್ಜಿ ಸಲ್ಲಿಸಿ ನಿಮಗೆ ಎಷ್ಟು ಪರಿಹಾರ ಬರಬಹುದು ಎಂದು ನೀವು ಲೆಕ್ಕ ಹಾಕುತ್ತಾ ಇದ್ದರೆ ನಿಮಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅದೇನೆಂದರೆ ನೀವು ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕುವ ಮೂಲಕವೇ ನಿಮಗೆ ಬೆಳೆ ವಿಮೆ ಎಷ್ಟು ಬರಲಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಅದಕ್ಕಾಗಿ ಈ ಕ್ರಮ ಅನುಸರಿಸಿ.
● https://samrakshane.gov.in. ವೈಬ್ ಸೆಟ್ಗೆ ಕರ್ನಾಟಕದ ರೈತರು ಭೇಟಿ ಕೊಡಬೇಕು ಸಂರಕ್ಷಣೆ ಪೋರ್ಟಲ್ ಮೂಲಕ ನಿಮಗೆ ಈ ಮಾಹಿತಿ ತಿಳಿಯಲಿದೆ.
● ಅಧಿಕೃತ ವೆಬ್ಸೈಟ್ ಓಪನ್ ಆದಮೇಲೆ ವರ್ಷವನ್ನು ನಮೂದಿಸಬೇಕು 2022-23 ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೆಯೇ ನಿಮ್ಮ ಬೆಳೆ ಖಾರಿಫ್ ರಾಬಿ ಅಥವಾ ಸಮ್ಮರ್ ಯಾವ ಸೀಸನ್ ದು ಎಂದು ಆರಿಸಿ, ಗೋ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ
● ಫಾರ್ಮರ್ ಎನ್ನುವ ಕಾಲ ಓಪನ್ ಮಾಡಿ ಟಾಪ್ ಇನ್ಶೂರೆನ್ಸ್ ಡೀಟೇಲ್ಸ್ ಅಂಡ್ ಸರ್ವೆ ನಂಬರ್ ಎಂದು ಇರುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ಆಗ ಓಪನ್ ಆಗುವ ಹೊಸ ಪೇಜ್ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು ಹೋಬಳಿ, ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ.
● ಸರ್ವೆ ನಂಬರ್ ಕಾಲಂ ನಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಕೊಡಿ. ಗಮನಿಸಿ ನೀವು ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ಸಮಯದಲ್ಲಿ ಬೆಳೆ ಬೆಳೆದಿದ್ದ ಭೂಮಿಯ ದಾಖಲೆಯಾಗಿ ಕೊಟ್ಟಿದ್ದ ಸರ್ವೆ ನಂಬರ್ ಕೂಡ ಇದೆ ಆಗಿರಬೇಕು.
● ನಿಮ್ಮ ಸರ್ವೇ ನಂಬರ್ ನಲ್ಲಿರುವ ಎಲ್ಲಾ ಹಿಸ್ಸಾ ನಂಬರ್ ತೆಗೆಯುತ್ತದೆ ಆ ಹಿಸ್ಸಾ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿದರೆ, ನೀವು ಪ್ರತಿ ಹಿಸ್ಸಾ ಗೆ ಎಷ್ಟು ಹಣ ಕಟ್ಟಿದ್ದೀರಿ ಮತ್ತು ನಿಮಗೆ ಎಷ್ಟು ಹಣ ಬೆಳೆ ವಿಮೆ ಆಗಿ ಸಿಗಲಿದೆ ಎನ್ನುವ ಮಾಹಿತಿ ಸಿಗುತ್ತದೆ.