ಕೇವಲ 2 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಕಾರ್ ಓನರ್ ಆಗಿ, ರೋಡ್ ಟ್ಯಾಕ್ಸ್ ಕೂಡ ಕಟ್ಟುವ ಟೆನ್ಶನ್ ಇಲ್ಲ

 

WhatsApp Group Join Now
Telegram Group Join Now

ಇತ್ತೀಚಿಗೆ ವಾಹನಗಳ ಬೆಲೆ ದುಬಾರಿ ಆಗಿದೆ. ಅದರಲ್ಲೂ ಕಾರುಗಳ ವಿಚಾರದಲ್ಲಿ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸ್ಟೈಲಿಶ್ ಆಗಿರುವ ನಮ್ಮ ಫೇವರಿಟ್ ಕಲರ್ ಮತ್ತು ನಮಗೆ ಕಂಫರ್ಟೆಬಲ್ ಕೊಡುವ ಎಲ್ಲಾ ಫೆಸಿಲಿಟಿ ಇರುವ ಕಾರು ಬೇಕು ಎಂದರೆ ಅದಕ್ಕೆ ದುಬಾರಿ ಮೊತ್ತದ ಹಣ ತೆರಲೇಬೇಕು. ಹೀಗಾಗಿ ಕಾರುಕೊಳ್ಳುವ ಆಸೆ ಇದ್ದರೂ ಕೂಡ ಮಧ್ಯಮ ವರ್ಗದವರು ಅದಕ್ಕಿರುವ ಬೆಲೆಯನ್ನು ನೋಡಿ ಖರೀದಿಗೆ ಹಿಂದೇಟು ಹಾಕುತ್ತಾರೆ.

ಕಾರು ಖರೀದಿಸುವುದರ ಜೊತೆಗೆ ರೋಡ್ ಟ್ಯಾಕ್ಸ್ ಕೂಡ ಕಟ್ಟಬೇಕು ಎನ್ನುವುದು ಅವರಿಗೆ ಇನ್ನೂ ಹೆಚ್ಚಿನ ಹೊರೆ ಆಗಿದೆ. ನಿಮಗೂ ಕೂಡ ಕಾರು ಕೊಳ್ಳುವ ಬಯಕೆ ಇದ್ದರೆ ಇಂಡಿಯಾದ ಗ್ರಾಹಕರಿಗೆ ನೆಚ್ಚಿನ ಕಾರ್ ಆಗಿರುವ ಮಾರುತಿ ಸ್ವಿಫ್ಟ್ ಕಾರನ್ನು ಶೋರೂಮ್ ಬೆಲೆಗಿಂತ ಕಡಿಮೆಗೆ ಈ ವೆಬ್ಸೈಟ್ನಲ್ಲಿ ಕೊಂಡುಕೊಳ್ಳಬಹುದು.

ನೀವು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಉತ್ತಮ ಕಂಡಿಶನ್ ಅಲ್ಲಿ ಇರುವ ಹಳೆ ಕಾರುಗಳನ್ನು ಬಗ್ಗೆ ಅನುಕೂಲಕರವಾದ ಬೆಲೆಯಲ್ಲಿ ಕೊಂಡುಕೊಳ್ಳಬಹುದು. ಈಗಾಗಲೇ ಇದರಲ್ಲಿ ರೋಡ್ ಟ್ಯಾಕ್ಸ್ ಕೂಡ ಕಟ್ಟಿರುವುದರಿಂದ ನಂಬರ್ ಪ್ಲೇಟ್ ವ್ಯವಸ್ಥೆಯು ಇರುವುದರಿಂದ ಸ್ವಲ್ಪ ವೆಚ್ಚ ಕಡಿಮೆ ಕೂಡ ಆಗುತ್ತದೆ.

ಮಾರುತಿ ಸುಜುಕಿ ಮಾತ್ರ ಅಲ್ಲದೆ ಇನ್ನೂ ಹಲವು ಕಂಪನಿಗಳು ಈಗ ಈ ರೀತಿ ವೆಬ್ಸೈಟ್ಗಳ ಮೂಲಕ ತಮ್ಮ ಹಳೆ ಕಾರುಗಳನ್ನು ಮಾರಾಟ ಮಾಡುತ್ತಿವೆ. ಜನರ ಆಸಕ್ತಿ ಮತ್ತು ಅಭಿಪ್ರಾಯಗಳನ್ನು ಅರಿತಿರುವ ಮಾರುತಿ ಕಂಪನಿಯು ಸಹ ಮಾರುತಿ ಸುಝೂಕಿ ಟ್ರೂ ವ್ಯಾಲ್ಯೂ ವೆಬ್ಸೈಟ್ ಮೂಲಕ ಗ್ರಾಹಕರಿಗೆ ಹಳೇ ಕಾರು ಖರೀದಿಸುವ ಅನುಕೂಲ ಮಾಡಿಕೊಡುತ್ತಿದೆ.

ಭಾರತದಲ್ಲಿ ಮಧ್ಯಮ ವರ್ಗದವರಿಗೆ ಮಾರುತಿ ಸುಜುಕಿ ಕಂಪನಿಯ ಕಾರುಗಳು ಎಂದರೆ ಫೇವರೆಟ್ ಯಾಕೆಂದರೆ ಹೆಚ್ಚು ಮೈಲೇಜ್ ಕೊಡುತ್ತದೆ, ಜೊತೆಗೆ ಸ್ಟೈಲಿಶ್ ಆಗಿಯೂ ಇರುತ್ತದೆ, ಬೆಲೆಯೂ ಗ್ರಾಹಕರಿಗೆ ಕೈಕಟ್ಟುವ ದರದಲ್ಲಿ ಇರುತ್ತದೆ ಎನ್ನುವ ಕಾರಣಕ್ಕಾಗಿ. ಹಾಗಾಗಿಯೇ ಮಾರ್ಕೆಟಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಕಾರು, ಕಳೆದ ತಿಂಗಳು ಫೆಬ್ರವರಿ 2023ರ ತನಕವೂ ಸಹ ಭಾರತದಲ್ಲಿ ಟಾಪ್ ಸೆಲ್ಲಿಂಗ್ ಕಾರು ಇದೆ ಆಗಿದೆ.

ಈಗ ಇದೇ ಕಾರನ್ನು ಮಾರ್ಕೆಟ್ ವ್ಯಾಲ್ಯೂ ಗಿಂತ ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ನಲ್ಲಿ ಇರುವುದನ್ನು ಖರೀದಿಸಬೇಕು ಎಂದರೆ ಅದಕ್ಕೀಗ ಸದಾವಕಾಶ. ಯಾಕೆಂದರೆ 2020 ರಲ್ಲಿ ನೋಂದಣಿಯಾದ ಮಾರುತಿ ಸ್ವಿಫ್ಟ್ VDI ಕಾರ್ ಒಂದು 4.99 ಲಕ್ಷಕ್ಕೆ ಮಾರಾಟಕ್ಕಿದೆ. ಈ ಪೆಟ್ರೋಲ್ ಇಂಜಿನ್ ಕಾರು ಇದುವರೆಗೆ 12,417 ಕಿ.ಮೀ ಓಡಿದೆ.

2020 ರಲ್ಲಿ ನೋಂದಣಿ ಆಗಿರುವ ಮತ್ತೊಂದು ಮಾರುತಿ ಸ್ವಿಫ್ಟ್ LXI ಕಾರ್ 5.25 ಲಕ್ಷಕ್ಕೆ ಗುನಾದಲ್ಲಿ ಮಾರಾಟಕ್ಕಿದೆ. ಈ ಪೆಟ್ರೋಲ್ ಇಂಜಿನ್ ಕಾರು ಇದುವರೆಗೆ 13,771 ಕಿ.ಮೀ. ಕ್ರಮಿಸಿದೆ. ಇದೇ ಬ್ರಾಂಡಿನ ಮತ್ತೊಂದು ಕಾರು 5.30 ಲಕ್ಷಕ್ಕೆ ಮಾರಾಟಕ್ಕಿದೆ. ಇದು ಸಹ 2020 ರಲ್ಲಿ ನೋಂದಣಿ ಆಗಿದ್ದು, ಇದುವರೆಗೆ ಈ ಪೆಟ್ರೋಲ್ ಇಂಜಿನ್ ಕಾರ್ 38450 ಕಿಲೋಮೀಟರ್ ಓಡಿದೆ, ಈ ಕಾರು ಮೀರತ್ ಅಲ್ಲಿ ಮಾರಾಟಕ್ಕಿದೆ. ಈ ಕಾರುಗಳನ್ನು ಕೊಳ್ಳುವ ಮನಸ್ಸಿದ್ದರೆ ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಗಾಗಿ ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್ಸೈಟ್ ಭೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now