ಇತ್ತೀಚಿನ ದಿನಗಳಲ್ಲಿ ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ಶಾಲಾ ಕಾಲೇಜು ದಾಖಲಾತಿ ಸಮಯದಲ್ಲಿ, ಯಾವುದೇ ಸ್ಕಾಲರ್ಶಿಪ್ ಪಡೆಯಲು ಅಥವಾ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳಾಗಲು, ಸರ್ಕಾರಿ ಹುದ್ದೆಗಳನ್ನು ಪಡೆಯಲು ಮೀಸಲಾತಿ ಕಾರಣಕ್ಕಾಗಿ ಇನ್ನು ಅನೇಕ ಕಾರಣಗಳಿಗಾಗಿ ಅಗತ್ಯ ದಾಖಲೆಯಾಗಿ ಕೇಳುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನಲ್ಲೂ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಲೇ ಬೇಕಾಗುತ್ತದೆ.
ಒಂದು ಬಾರಿ ಈ ರೀತಿ ಜಾತಿ ಮತ್ತು ಆದಾಯ ಪ್ರಮಾಣವನ್ನು ಪತ್ರವನ್ನು ಪಡೆದರೆ ಅದು ಐದು ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ. ನಂತರ ದಿನಗಳಲ್ಲಿ ಅದರ ಅವಶ್ಯಕತೆ ಉಂಟಾಗುತ್ತದೆ. ಮತ್ತೊಮ್ಮೆ ಅದನ್ನು ಮಾಡಿಸಿಕೊಳ್ಳುವ ಬದಲು ರಿನಿವಲ್ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಸುಲಭ ವಿಧಾನಗಳನ್ನು ನಾವಿಂದು ಈ ಅಂಕಣದಲ್ಲಿ ಹೇಳಿಕೊಡುತ್ತಿದ್ದೇವೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಹಿಂದೆಲ್ಲಾ ತಾಲೂಕು ಕಚೇರಿಗಳಿಗೆ ಅಥವಾ ತಹಶೀಲ್ದಾರ್ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಆದರೆ ಈಗ ಸಾರ್ವಜನಿಕ ಸೇವಾ ಸಿಂಧು ಪೋರ್ಟಲ್ ಮೂಲಕ ನಾವು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ ಇವುಗಳನ್ನು ಪಡೆದುಕೊಳ್ಳಬೇಕು. ಹತ್ತಿರದ CSC ಸೆಂಟರ್ ಅಥವಾ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಅವರ ಸಹಾಯದಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ಅಲ್ಲದೇ ನೀವು ಆಂಡ್ರಾಯ್ಡ್ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯ ಹೊಂದಿದ್ದರೆ ಇವರ್ಯಾರ ಸಹಾಯವಿಲ್ಲದೆ ನೀವೇ ನಿಮ್ಮ ಮೊಬೈಲ್ ಮೂಲಕ ಇದನ್ನು ರಿನಿವಲ್ ಕೂಡ ಮಾಡಿಕೊಳ್ಳಬಹುದು. ಅದಕ್ಕಾಗಿ ಇರುವ ಸುಲಭ ವಿಧಾನಗಳನ್ನು ನಾವು ಹೇಳುತ್ತಿದ್ದೇವೆ ಅದನ್ನು ಅನುಸರಿಸುವ ಮೂಲಕ ನೀವೇ ನಿಮ್ಮ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ರಿನಿವಲ್ ಮಾಡಿಕೊಳ್ಳಿ.
● ಮೊದಲು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಅಥವಾ ಕ್ರೋಮ್ ಯಾವುದೇ ಬ್ರೌಸರ್ ಮೂಲಕ ನಾಡಕಚೇರಿ ಎಂದು ಟೈಪ್ ಮಾಡಿ.
● ತೆರೆದುಕೊಳ್ಳುವ ಹೊಸ ಪೇಜ್ ಅಲ್ಲಿ ಒಂದು ಲಿಂಕ್ ಇರುತ್ತದೆ, AJKJ ಹೋಂ ಪೇಜ್ ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
● ಹೊಸದಾಗಿ ತೆರೆದುಕೊಳ್ಳುವ ಹೊಸ ಪೇಜ್ ಅಲ್ಲಿ ಆನ್ಲೈವ್ ಅರ್ಜಿ ಸ್ವೀಕೃತಿ ಎಂದು ಆಪ್ಷನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
● ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಪ್ರೋಸಿಡ್ ಕೊಟ್ಟರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನ್ಯೂ ರಿಕ್ವೆಸ್ಟ್ ಎಂದು ಇರುವಲ್ಲಿ ಓಕೆ ಕೊಡಿ.
● ಅದರಲ್ಲಿ ಎಲ್ಲ ರೀತಿಯ ಸರ್ಟಿಫಿಕೇಟ್ ಗಳಿಗೂ ಆಪ್ಷನ್ ಇರುತ್ತದೆ. ಮೊದಲಿಗೆ ಕ್ಯಾಸ್ಟ್ ಸರ್ಟಿಫಿಕೇಟ್ ಕ್ಲಿಕ್ ಮಾಡಿ ಪ್ರೊಸೀಜರ್ ಪೂರ್ತಿಗೊಳಿಸಿ ನಂತರ ಇನ್ಕಮ್ ಸರ್ಟಿಫಿಕೇಟ್ ಗೂ ಕೂಡ ಇದೇ ಪ್ರೊಸೀಜರ್ ಫಾಲೋ ಮಾಡಿ.
● ಮತ್ತೆ ಓಪನ್ ಆಗುವ ಹೊಸ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಮೂಲಕ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಜನರೇಟ್ ಮಾಡಬೇಕಾಗುತ್ತದೆ. ಅದಕ್ಕೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ.
● ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ.
● ಇದಾದ ಮೇಲೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸದಸ್ಯರ ಹೆಸರಿನ ಲಿಸ್ಟ್ ಬರುತ್ತದೆ. ಅದರಲ್ಲಿ ಯಾರ ಹೆಸರಿನಲ್ಲಿ ಜಾತಿ ಪ್ರಮಾಣದ ಪತ್ರ ಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ.
● ಮುಂದಿನ ಹಂತದಲ್ಲಿ ಅವರ ಕೆಟಗರಿ ಹಾಗೂ ಯಾವ ಉದ್ದೇಶಕ್ಕಾಗಿ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆ ಇದಕ್ಕೆಲ್ಲಾ ಆಯ್ಕೆ ಇರುತ್ತದೆ, ಅದರಲ್ಲಿ ಸರಿಯಾದ ಆಯ್ಕೆಗಳನ್ನು ಕ್ಲಿಕ್ ಮಾಡಿ.
● 25 ರೂಗಳ ಆನ್ಲೈನ್ ಶುಲ್ಕ ಪಾವತಿ ಮಾಡಬೇಕಾಗಿರುತ್ತದೆ ಅದನ್ನು ಸಹ ನೆಟ್ ಬ್ಯಾಂಕಿಂಗ್ ಮೂಲಕ ಪೇ ಮಾಡಿದರೆ ನಿಮ್ಮ ಜಾತಿ ಪ್ರಮಾಣ ಪತ್ರ ರಿನಿವಲ್ ಆಗಿರುತ್ತದೆ. ಇದೇ ಕ್ರಮವನ್ನು ಪಾಲಿಸಿ ಆದಾಯ ಪ್ರಮಾಣ ಪತ್ರ ರಿನೀವಲ್ ಮಾಡಿಕೊಳ್ಳಿ.
https://youtu.be/v-ExCrRmr20