ಕರ್ನಾಟಕದ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿ ಸುದ್ದಿಯೊಂದು ಸಿಕ್ಕಿದೆ. ಯಾಕೆಂದರೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹೊಸ ಅಧಿಸೂಚನೆ ಹೊರಡಿಸಲಾಗಿತ್ತು, ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಖಾಯಂ ಸರ್ಕಾರಿ ಉದ್ಯೋಗ ದೊರೆಯಲಿದೆ.
ಈ ಹುದ್ದೆಗಳಿಗೆ ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತಿ ಇರುವವರು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಡೌನ್ ಲೋಡ್ ಮಾಡಿಕೊಂಡು ಆ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಈ ಅಂಕಣದಲ್ಲಿ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ.
ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಹಾಗೂ ಕುಟುಂಬದವರೆಲ್ಲರ ಜೊತೆಗೂ ಹಂಚಿಕೊಂಡು ಹೆಚ್ಚಿನ ಜನರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ಇಲಾಖೆ:- ಸಮಾಜ ಕಲ್ಯಾಣ ಇಲಾಖೆ.
ಉದ್ಯೋಗ ಸಂಸ್ಥೆ:- ರಾಷ್ಟ್ರೀಯ ಮಾನಸಿಕ ವಿಕಲಾಂಗ ಸಂಸ್ಥೆ.
ನೇಮಕಾತಿ ಸಂಸ್ಥೆ:-
ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ.
ಉದ್ಯೋಗ ಸ್ಥಳ:- ಭಾರತದಾತ್ಯಂತ…
ಒಟ್ಟು ಹುದ್ದೆಗಳ ಸಂಖ್ಯೆ:- 35
ಹುದ್ದೆಗಳ ವಿವರ:-
● ಜೂನಿಯರ್ ಸ್ಪೆಷಲ್ ಎಜುಕೇಶನ್ ಟೀಚರ್
● ಸಹಾಯಕ ಪ್ರಾಧ್ಯಾಪಕ
● ಮಾಹಿತಿ ಅಧಿಕಾರಿ
● ಉಪನ್ಯಾಸಕ
● ರಿಹಬಿಲಿಟೇಶನ್ ಥೆರಪಿಸ್ಟ್
● ಸ್ಟೆನೋಗ್ರಾಫರ್
● ಟೆಲಿಫೋನ್ ಆಪರೇಟರ್
● ಸಹಾಯಕ
● ವೊಕೇಶನಲ್ ಇನ್ಸ್ಪೆಕ್ಟರ್
● ನಿರ್ದೇಶಕ
● ಆಡಳಿತಾತ್ಮಕ ಅಧಿಕಾರಿ
● ಲೆಕ್ಕಿಗ
● ಕ್ಲರ್ಕ್
● ಡಾಟಾ ಎಂಟ್ರಿ ಆಪರೇಟರ್
● ಕ್ಲಿನಿಕಲ್ ಸಹಾಯಕ
ವೇತನ ಶ್ರೇಣಿ:-
45,000 ದಿಂದ 75,000 ಮಾಸಿಕವಾಗಿ…
ಶೈಕ್ಷಣಿಕ ವಿದ್ಯಾರ್ಹತೆ:-
● ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿ 12ನೇ ತರಗತಿ ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
● ಕೆಲಸದ ಅನುಭವದ ಬಗ್ಗೆ ಆಕ್ಷೇಪಣೆ ಇರುವುದಿಲ್ಲ.
ವಯಸ್ಸಿನ ಮಿತಿ:-
● ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.
● ಗರಿಷ್ಠ 40 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:-
● SC/ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮೂಲಕ
● ಆಫ್ ಲೈನ್ ಮೂಲಕ
1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಸಂಸ್ಥೆಯ ಅಫಿಷಿಯಲ್ ವೆಬ್ಸೈಟ್ ಆದ https://www.niepid.nic.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
2. ಅರ್ಜಿ ಫಾರಂ ಓಪನ್ ಆದ ಬಳಿಕ ವಿವರಗಳನ್ನೆಲ್ಲಾ ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ.
3. ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನ ಹಾಗೂ ವಿಳಾಸಕ್ಕೆ ಸಂಬಂಧಪಟ್ಟ ಹಾಗೆ ಕೇಳಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
4. ಅರ್ಜಿ ಸಲ್ಲಿಕೆ ಪ್ರಕ್ರಿಯ ಪೂರ್ತಿಗೊಂಡ ಬಳಿಕ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಮುಂತಾದವುಗಳನ್ನು ಬರೆದುಕೊಳ್ಳಿ ಅಥವಾ ಅರ್ಜಿ ಸಲ್ಲಿಸಿರುವ ಪೇಜ್ ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ.
5. ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಕೆಳಲಾದ ದಾಖಲೆಗಳನ್ನು ಲಗತ್ತಿಸಿ ಹತ್ತಿರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 14.06.2023.