ಬ್ಯಾಂಕ್‌ ಸಾಲ ತೀರಿಸಿಲ್ಲ ಅಂತಾ ಏಜೆಂಟ್‌ಗಳು ತೊಂದ್ರೆ ಕೊಡ್ತಿದ್ದಾರಾ.? ಚಿಂತೆ ಬಿಡಿ ಇದೊಂದು ಕಾನೂನು ಹೇಳಿ ಸಾಕು, ಅವ್ರೇ ಬಂದ ದಾರಿಗೆ ಸುಂಕ ಇಲ್ಲ ಅಂತ ವಾಪಸ್ ಹೋಗ್ತಾರೆ.!

ನಮ್ಮ ಕಷ್ಟ ಕಾಲಕ್ಕೆ ಸಾಲ ಬೇಕಂದ್ರೆ, ಮೊದಲು ನೆನಪಾಗೋದು ಬ್ಯಾಂಕ್‌ಗಳು. ಇಲ್ಲಿ ನಮಗೆ ಅಗತ್ಯವಿರುವ ಹಣದ ಪೂರೈಕೆಯಾಗುತ್ತದೆ. ಆದ್ರೆ, ಬ್ಯಾಂಕ್‌ನಲ್ಲಿ ಲೋನ್ ಪಡೆದ ಗ್ರಾಹಕರು ಕೆಲವೊಮ್ಮೆ ಬೇರೆ ಸಮಸ್ಯೆಗಳಿಂದ ಲೋನ್ ಪಾವತಿ ಮಾಡಲು ಸಾಧ್ಯ ಆಗಿರುವುದಿಲ್ಲ. ಹಾಗಿದ್ದಾಗ ಬ್ಯಾಂಕ್‌ಗಳು ರಿಕವರಿ ಏಜೆಂಟ್‌ಗಳನ್ನು ಗೊತ್ತುಪಡಿಸಿ, ಅವರುಗಳಿಗೆ ಲೋನ್ ವಸೂಲಿ ಮಾಡುವ ಕೆಲಸ ಕೊಟ್ಟಿರುತ್ತಾರೆ.

WhatsApp Group Join Now
Telegram Group Join Now

ಹೇಗಾದರು ಮಾಡಿ ಲೋನ್ ವಸೂಲಿ ಮಾಡಬೇಕು ಎಂದು ಈ ಏಜೆಂಟ್‌ಗಳು ಗ್ರಾಹಕರಿಗೆ ಮರಿಯಾದೆ ಕೊಡದೆ, ಹೇಗೆಂದರೆ ಹಾಗೆ ವರ್ತಿಸಿ ಅವಮಾನ ಮಾಡಿ, ತೊಂದರೆ ಕೊಡುವುದುಂಟು. ಆದರೆ, ಇದೆಲ್ಲವೂ ಕಾನೂನಿಗೆ ವಿರುದ್ಧವಾದದ್ದು ಎನ್ನುವ ವಿಷಯ ನಿಮಗೆ ಗೊತ್ತಿರಲಿ. ಹಾಗೇನಾದರೂ ನಿಮಗೆ ತೊಂದರೆ ಕೊಟ್ಟರೆ, ಈ ಕಾನೂನಿನ ಬಗ್ಗೆ ದೂರು ಕೊಡಬಹುದು.

ಇಂದು ನಾವು ಆರ್.ಬಿ.ಐ ನಲ್ಲಿರುವ ಈ ರೂಲ್ಸ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.

* ಸಾಲ ಹಿಂಪಡೆಯಲು ಬರುವ ರಿಕವರಿ ಏಜೆಂಟ್‌ಗಳು ಬೆಳಗ್ಗೆ 7 ರಿಂದ ಸಂಜೆ 8 ಗಂಟೆ ಸಮಯದ ಒಳಗೆ ಬಂದು, ಈ ವಿಷಯದ ಬಗ್ಗೆ ಮಾತನಾಡಬೇಕು.
* ಈ ಏಜೆಂಟ್‌ಗಳು ಸಾಲಗಾರರಿಗೆ ಮರಿಯಾದೆ ಆಗುವ ಹಾಗೆ ಮೆಸೇಜ್ ಮಾಡುವುದು, ಬಯ್ಯುವುದು, ದೈಹಿಕವಾಗಿ ಅಥವಾ ಮಾನಸಿಕವಾಗಿ ಹಲ್ಲೆ ಮಾಡುವುದು ತಪ್ಪು, ಒಂದು ವೇಳೆ ಹೀಗೇನಾದರು ನಡೆದರೆ, ಗ್ರಾಹಕರು ಕೂಡಲೇ ಅವರ ಮೇಲೆ ದೂರು ಕೊಡಬಹುದು.

* ಒಂದು ವೇಳೆ ಹೀಗೆ ನಡೆದರೆ ಏಜೆಂಟ್‌ನಿಂದ ಬಂದಿರುವ ಕಾಲ್ ರೆಕಾರ್ಡಿಂಗ್, ಇಮೇಲ್, ಮೆಸೇಜ್ ಇದೆಲ್ಲವನ್ನು ಇಟ್ಟುಕೊಂಡರೆ, ದೂರು ಕೊಡುವಾಗ ಸಾಕ್ಷಿಯಾಗುತ್ತದೆ.
* ಈ ದಾಖಲೆಗಳ ಜೊತೆಗೆ ಬ್ಯಾಂಕ್ ಅಧಿಕಾರಿಗಳು ಅಥವಾ ಲೋನ್ ಆಫೀಸರ್ ಅನ್ನು ಭೇಟಿಯಾಗಿ, ಅವರ ವಿರುದ್ಧ ದೂರು ಕೊಡಬಹುದು.
* ಬ್ಯಾಂಕ್ ನಲ್ಲಿ ಮಾತ್ರವಲ್ಲದೆ ಪೊಲೀಸರ ಹತ್ತಿರ ಹೋಗಿ ರಿಕವರಿ ಏಏಜೆಂಟ್‌ಗಳ ಬಗ್ಗೆ ದೂರು ಕೊಡಬಹುದು.

* ಅಕಸ್ಮಾತ್ ಪೊಲೀಸರು ಕೂಡ ಸರಿಯಾದ ಸಹಾಯ ಮಾಡದೆ ಇದ್ದರೆ, ಆ ಸಾಲಗಾರ ಕೋರ್ಟ್ ಮೊರೆ ಹೋಗಬಹುದು. ಅಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಬಹುದು, ಇದರಿಂದ ಸಾಲಗಾರನಿಗೆ ಬ್ಯಾಂಕ್ ಇಂದ ನಿರಾಳತೆ ಸಿಗುತ್ತದೆ. ಹಾಗೆಯೇ ತಮಗೆ ಆದ ತೊಂದರೆಗೆ ಪರಿಹಾರ ಕೂಡ ಪಡೆಯಬಹುದು.
* ರಿಕವರಿ ಏಜೆನ್ಟ್ ಸಾಲಗಾರನ ಗೌರವ, ಪ್ರತಿಷ್ಠೆಗೆ ಧಕ್ಕೆ ತಂದರೆ, ಆತನ ವಿರುದ್ಧ ಹಾಗೂ ಬ್ಯಾಂಕ್ ವಿರುದ್ಧ ದೂರು ದಾಖಲಿಸಿ, ಮಾನನಷ್ಟ ಮೊದಕ್ಕಮೆ ಹೂಡಬಹುದು.

* ಇದರಿಂದಲು ಪ್ರಯೋಜನ ಸಿಗದೆ ಹೋದರೆ, ಆರ್.ಬಿ.ಐ ಗೆ ನೇರವಾಗಿ ದೂರು ಕೊಡಬಹುದು. ಆ ಸಮಯಕ್ಕೆ, ಆ ಪ್ರದೇಶಕ್ಕೆ, ರಿಕವರಿ ಏಜೆಂಟ್‌ಗಳನ್ನು ನೇಮಕ ಮಾಡದ ಹಾಗೆ ಆರ್.ಬಿ.ಐ ತಡೆ ಹಿಡಿಯುತ್ತದೆ. ರಿಕವರಿ ಏಜೆಂಟ್‌ಗಳ ವಿಚಾರದಲ್ಲಿ ಇರುವಂತ ಈ ನಿಯಮಗಳನ್ನು ಪ್ರತಿಯೊಂದು ಬ್ಯಾಂಕ್ ಕೂಡ ಪಾಲಿಸಬೇಕು. ಎಲ್ಲಾ ಥರದ ಬ್ಯಾಂಕ್‌ಗಳಿಗೂ ಆರ್.ಬಿ.ಐ ನ ಈ ಗೈಡ್‌ಲೈನ್ಸ್ ಅನ್ವಯಿಸುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now