ಜೂನ್ 1 ರಿಂದ ಎಲ್ಲಾ ಬ್ಯಾಂಕ್ ಗಳಿಗೂ ಅನ್ವಯವಾಗುವಂತೆ ಹೊಸ ರೂಲ್ಸ್ ಜಾರಿ ಮಾಡಿದ RBI, ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರು ನೋಡಲೇಬೇಕಾದ ಸುದ್ದಿ ಇದು.!

 

WhatsApp Group Join Now
Telegram Group Join Now

ಬ್ಯಾಂಕುಗಳ ಬ್ಯಾಂಕ್ RBI ಕಾಲಕಾಲಕ್ಕೆ ಅನ್ವಯವಾಗುವಂತೆ ಹೊಸ ಹೊಸ ರೂಲ್ಸ್ ಳನ್ನು ತರುತ್ತಲೇ ಇರುತ್ತದೆ ಹಾಗೂ ಇದನ್ನು ಭಾರತದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಹಣಕಾಸು ಸಂಸ್ಥೆ ಮೇಲೆ ಹೇರಿಕೆ ಮಾಡುತ್ತದೆ. ಯಾಕೆಂದರೆ ಭಾರತದಲ್ಲಿರುವ ಎಲ್ಲಾ ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಕೂಡ RBI ನಿಯಮಗಳ ಅನುಸಾರವಾಗಿ ನಡೆಯುತ್ತಿರುವುದು, ಹೀಗಾಗಿ RBI ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಬದ್ಧವಾಗಿ ಇರಲೇಬೇಕು ಇಲ್ಲವಾದಲ್ಲಿ ಅಂತಹ ಬ್ಯಾಂಕ್ಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ RBI ಗೆ ಇರುತ್ತದೆ.

ಈಗ RBIನಿಂದ ಹೊಸದೊಂದು ರೂಲ್ ಜಾರಿ ಆಗಿದೆ. ಈ ಬಾರಿ ಇದು ಕೆನರಾ, SBI, ಬ್ಯಾಂಕ್ ಆಫ್ ಬರೋಡ, HDFC ಸೇರಿದಂತೆ ಭಾರತದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅನ್ವಯ ಆಗಲಿದೆ ಒಂದು ವೇಳೆ ಈ ಮಾಹಿತಿಯನ್ನು ನೀವು ತಿಳಿದುಕೊಂಡಿಲ್ಲ ಎಂದರೆ RBI ಹೇರಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ನೀವು ನಿಮ್ಮ ಖಾತೆಯಿಂದ ಹಣ ಪಡೆಯಲು ಆಗದೆ ಇರಬಹುದು, ಅಥವಾ ನಿಮ್ಮ ಖಾತೆಯೇ ಕ್ಯಾನ್ಸಲ್ ಆಗಿ ಬಿಡಬಹುದು.

ಹಾಗಾಗಿ RBI ಹೊಸ ರೂಲ್ಸ್ ಅನ್ನು ತಪ್ಪದೆ ತಿಳಿದುಕೊಂಡಿರಬೇಕು. RBI ತಂದಿರುವ ಹೊಸ ರೂಲ್ಸ್ ಏನೆಂದರೆ ಈ ಹಿಂದೆ ಏಪ್ರಿಲ್ 2023 ರಲ್ಲಿ RBI ಒಂದು ಹೊಸ ವೆಬ್ ಪೋರ್ಟಲ್ ಅನ್ನು ಓಪನ್ ಮಾಡಿತ್ತು, ಈ ಪೋರ್ಟಲ್ ತೆರೆದ ಉದ್ದೇಶವೂ ಕಳೆದ 10 ವರ್ಷಗಳಿಂದ ಬ್ಯಾಂಕ್ಗಳಲ್ಲಿ ಹಣಕಾಸಿನ ಪ್ರಕ್ರಿಯೆ ನಡೆದೆ ಸ್ಥಗಿತಗೊಂಡಿರುವಂತಹ ಎಲ್ಲಾ ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ಪತ್ತೆ ಮಾಡುವುದಾಗಿತ್ತು.

ಆ ಬಳಿಕ RBI ಗೆ ಭಾರತದಲ್ಲಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನೇಕ ಉಳಿತಾಯ ಹಾಗೂ ಚಾಲ್ತಿ ಖಾತೆಗಳು ಕಳೆದ ಹತ್ತು ವರ್ಷಗಳಿಂದ ಹಣಕಾಸಿನ ವಹಿವಾಟನ್ನು ನಡೆಸಿಲ್ಲ ಎನ್ನುವುದು ತಿಳಿದು ಬಂದಿದೆ. ಈಗ ಇದಕ್ಕಾಗಿ ಮತ್ತೊಮ್ಮೆ ನೂರು ದಿನಗಳ ಅಭಿಯಾನ ಆರಂಭಿಸಿರುವ RBI ಈ ನೂರು ದಿನದ ಒಳಗೆ ಈ ಬ್ಯಾಂಕ್ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಆಜ್ಞೆ ಮಾಡಿದೆ.

ಇದಕ್ಕಾಗಿ ಮಾರ್ಗಸೂಚಿ ಹೊರಡಿಸಿದ್ದು ಆ ಪ್ರಕಾರ ಭಾರತದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು ಕೂಡ ನಡೆದುಕೊಳ್ಳಬೇಕಾಗಿದೆ. ಈ ರೀತಿ ನೂರು ದಿನಗಳ ಒಳಗೆ 10 ವರ್ಷಗಳಿಂದ ಆಕ್ಟಿವ್ ಆಗಿರದೇ ಇರುವ ಖಾತೆದಾರರು ಅಥವಾ ಕಾನೂನಾತ್ಮಕವಾಗಿ ವಾರಸುದಾರರುಗಳು ಬಂದು ಇದನ್ನು ಕ್ಲೈಮ್ ಮಾಡಿಕೊಳ್ಳುವ ಅವಕಾಶವನ್ನು ಕೂಡ ನೀಡಲಾಗಿದೆ. ಒಂದು ವೇಳೆ ಕೊಟ್ಟಿರುವ 100 ದಿನಗಳ ಗಡವು ಮುಗಿದರೆ ಈ ಹಣವು ಅವರಿಗೆ ಸೇರದೆ ಹೋಗಬಹುದು.

ಜೂನ್ 1 ರಿಂದ ನೂರು ದಿನ್ ನೂರು ಪೇ ಅಭಿಯಾನ ಶುರು ಆಗಲಿದ್ದು, ಭಾರತದಲ್ಲಿರುವ ಎಲ್ಲಾ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್ ಗಳು ಕೂಡ RBI ಕ್ಲೈಮ್ ಆಗದ ಅಕೌಂಟ್ ಗಳ ವರದಿ ನೀಡಬೇಕಾಗುತ್ತದೆ, ಮತ್ತು ತನ್ನ ಗ್ರಾಹಕರಿಗೂ ಜಾಗೃತಿ ಮೂಡಿಸಬೇಕಾಗಿದೆ. ಅವಧಿ ಮುಗಿದ ಬಳಿಕ ಇವುಗಳನ್ನು ಕ್ಲೈಮ್ ಮಾಡದ ಠೇವಣಿ ಎಂದು ಪರಿಗಣಿಸಿ RBI ನ ನಿಯಮಗಳ ಅನುಸಾರ ಅದನ್ನು RBI ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ. ಅದರಿಂದ ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಈ ಕೂಡಲೇ ಇದರ ಬಗ್ಗೆ ಗಮನ ಕೊಡಿ ಮತ್ತು ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಮಾಹಿತಿ ಎಲ್ಲರಿಗೂ ತಿಳಿಯುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now