ಉಚಿತ ಬಸ್ ಪ್ರಯಾಣಕ್ಕೂ ಟಿಕೆಟ್ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಬಸ್ ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ.! ಉಚಿತ ಬಸ್ ಟಿಕೆಟ್ ಎಲ್ಲಿ ಸಿಗುತ್ತೆ ಬೇಕಾದ ದಾಖಲೆಗಳೇನು ನೋಡಿ.!

 

WhatsApp Group Join Now
Telegram Group Join Now

ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ಮಾತಿನಂತೆ ತನ್ನ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಒಂದಾಗಿದ್ದ ಶಕ್ತಿ ಯೋಜನೆ ಮೂಲಕ ಕರ್ನಾಟಕದಾದ್ಯಂತ ಕರ್ನಾಟಕದ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೂನ್ 2ರಂದು ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದಾರೆ.

ಜೂನ್ 11ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವು ಸ್ಪಷ್ಟ ಮಹತ್ವದೊಂದಿಗೆ ಗೆದ್ದು ಗದ್ದುಗೆ ಏರಿದ ದಿನದಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲೇಬೇಕಾದ ಒತ್ತಡದಿಂದ ಇದಕ್ಕಾಗುವ ಖರ್ಚು ವೆಚ್ಚಗಳ ಬಗ್ಗೆ ಸಹ ಮುಂದಾಲೋಚನೆ ಮಾಡಿದೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕೂಡ ಕರ್ನಾಟಕದ ನಾಲ್ಕು ನಿಗಮಗಳ ಮುಖ್ಯಸ್ಥರ ಜೊತೆ ಚರ್ಚಿಸಿ ಸಾಧಕ ಬಾಧಕಗಳ ಪಟ್ಟಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿಗಳು ಕೆಲವೇ ಕೆಲವು ಕಂಡಿಶನ್ಗಳ ಜೊತೆ ರಾಜ್ಯದಾದ್ಯಂತ ಎಲ್ಲ ಮಹಿಳೆಯರಿಗೂ ಉಚಿತ ಪಯಣಕ್ಕೆ ಅನುಮತಿ ನೀಡಿದ್ದಾರೆ.

ವಿದ್ಯಾರ್ಥಿಯರನ್ನು ಒಳಗೊಂಡಿದಂತೆ ಎಲ್ಲಾ ಮಹಿಳೆಯರು ಕೂಡ KSRTC & BMTC, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಆದರೆ ರಾಜಹಂಸ, ವೋಲ್ವೋ, ಸ್ಲೀಪರ್ ಕೋಚ್ ಸೇರಿದಂತೆ ಐಷಾರಾಮಿ ಬಸ್ಗಳಲ್ಲಿ ಉಚಿತ ಇರುವುದಿಲ್ಲ. ಹಾಗೆ ಅಂತರಾಜ್ಯಕ್ಕೆ ಪ್ರಯಾಣ ಬೆಳೆಸುವುದಾದರೆ ಅದು ಕೂಡ ಉಚಿತವಾಗಿ ಸಿಗುವುದಿಲ್ಲ.

KSRTC ಬಸ್ ಗಳಲ್ಲಿ 50%ರಷ್ಟು ಸೀಟ್ ಗಳನ್ನು ಪುರುಷರಿಗೆ ಮೀಸಲು ಎಂದು ಘೋಷಿಸಿ ಇಂತಹ ಘೋಷಣೆ ಮಾಡಿದ ಮೊದಲ ರಾಜ್ಯ ಎನ್ನುವ ಖ್ಯಾತಿ ಕರ್ನಾಟಕಕ್ಕೆ ಬರುವಂತೆ ಮಾಡಿದ್ದಾರೆ. ಯೋಜನೆಗೆ ಲಾಂಚ್ ಆಗುವ ದಿನಾಂಕವು ತಿಳಿದಿದೆ ಆದರೆ ಇದಕ್ಕೆ ಉಚಿತ ಪಾಸ್ ಪಡೆದುಕೊಳ್ಳಬೇಕಾ ಅಥವಾ ಅರ್ಜಿ ಹಾಕಬೇಕಾ ಅದಕ್ಕೆ ದಾಖಲೆಯಾಗಿ ಏನು ಕೊಡಬೇಕು ಎನ್ನುವ ಗೊಂದಲಗಳು ಮಾತ್ರ ನಿವಾರಣೆ ಆಗಿರಲಿಲ್ಲ.

ಸದ್ಯಕ್ಕೆ ಈಗ ಬಂದಿರುವ ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆ ಲಭಿಸುವುದರಿಂದ ಕರ್ನಾಟಕದ ಮಹಿಳೆ ಎನ್ನುವುದಕ್ಕೆ ಯಾವುದಾದರೂ ಗುರುತಿನ ಚೀಟಿ ಇಟ್ಟುಕೊಂಡು ಮಹಿಳೆಯರು ಪ್ರಯಾಣಿಸಬೇಕು. ಆಧಾರ್ ಕಾರ್ಡ್ ಅನ್ನು ಅಥವಾ ಸರ್ಕಾರ ನೀಡುವ ಇನ್ಯಾವುದೇ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ.

ಹಾಗೆಯೇ ಸರ್ಕಾರಕ್ಕೂ ಸಹ ಪ್ರತಿದಿನ ಎಷ್ಟು ಮಹಿಳೆಯರು ಪ್ರಯಾಣಿಸುತ್ತಾರೆ ಎನ್ನುವ ಮಾಹಿತಿ ಬೇಕಾಗಿರುವುದರಿಂದ ಮಹಿಳೆಯರಿಗೂ ಟಿಕೆಟ್ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ನಿಗಮದಿಂದ ತಯಾರಿ ನಡೆಯುತ್ತಿದ್ದು ಮಾದರಿ ಚೀಟಿಯ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಮಾಮೂಲಿ ಬಸ್ ಟಿಕೆಟ್ ರೀತಿಯೇ ಇದ್ದು ಇದರಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಎಂದು ಬರೆದಿರುತ್ತದೆ.

ಇದರ ಮೇಲೆ ಎಂದಿನಂತೆ ಬಸ್ ಡಿಪೋ, ಬಸ್ ಸಂಖ್ಯೆ ದಿನಾಂಕ ಸಮಯ ಇರುತ್ತದೆ. ಮತ್ತು ಮಹಿಳೆಯು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ವಿವರಕ್ಕಾಗಿ ಮಾಮೂಲಿ ಟಿಕೆಟ್ ಅಲ್ಲಿ ಇರುವಂತೆ ಪ್ರಯಾಣದ ಸ್ಥಳದ ಬಗ್ಗೆಯೂ ಕೂಡ ಮಾಹಿತಿ ಇರುತ್ತದೆ. ಆದರೆ ಟಿಕೆಟ್ ದರ ಎನ್ನುವಲ್ಲಿ ಯಾವುದೇ ಚಾರ್ಜಸ್ ಇಲ್ಲದಿರುವ ಕಾರಣ ನಿಲ್ ಎಂದು ತೋರಿಸಲಾಗಿರುತ್ತದೆ. ಮಹಿಳೆಯರು ಗುರುತಿನ ಚೀಟಿ ತೋರಿಸಿ ಈ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now