ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೆ ಹಾಗೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಯಾಕೆಂದರೆ ಭಾರತೀಯ ಕೊಂಕಣಿ ರೈಲ್ವೆ ಇಲಾಖೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಭರ್ತಿಗಾಗಿ ರೈಲ್ವೆ ಇಲಾಖೆ ಈಗ ಅಧಿಸೂಚನೆ ಹೊರಡಿಸಿದೆ ಅರ್ಜಿ ಆಹ್ವಾನಿಸಿದೆ. ಈ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಕೇಳಲಾದ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ ಒಳಗೆ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಹುದ್ದೆ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ಈ ಅಂಕಣದಲ್ಲಿ ಅಧಿಸೂಚನೆಯಲ್ಲಿ ಇರುವ ಪ್ರಮುಖ ಅಂಶಗಳಾದ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ಮಿತಿ, ವಯೋಮಾನ ಸಡಿಲಿಕೆ, ಅರ್ಜಿ ಶುಲ್ಕ, ವೇತನ ಶ್ರೇಣಿ, ಒಟ್ಟು ಹುದ್ದೆಗಳ ಸಂಖ್ಯೆ, ಉದ್ಯೋಗ ಸ್ಥಳ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಧಾನ ಇನ್ನು ಮುಂತಾದ ಮಾಹಿತಿಗಳ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.
ಇಲಾಖೆ:- ಕೊಂಕಣ ರೈಲ್ವೆ ಇಲಾಖೆ.
ವರ್ಗ:- ಕೇಂದ್ರ ಸರ್ಕಾರದ ಖಾಯಂ ಹುದ್ದೆಗಳು.
ಒಟ್ಟು ಹುದ್ದೆಗಳ ಸಂಖ್ಯೆ:- 1426
ಹುದ್ದೆಗಳ ವಿವರ:- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳು.
ಉದ್ಯೋಗ ಸ್ಥಳ:- ಭಾರತದಾತ್ಯಂತ (ಕರ್ನಾಟಕದಲ್ಲಿ ಹುಬ್ಬಳ್ಳಿ)
ವೇತನ ಶ್ರೇಣಿ:- 27,900 ರಿಂದ 54,100 ಮಾಸಿಕವಾಗಿ.
ಶೈಕ್ಷಣಿಕ ವಿದ್ಯಾರ್ಹತೆ:- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಆಯಾ ಹುದ್ದೆಗಳ ಪ್ರಕಾರ 10ನೇ ತರಗತಿ, ಪಿ ಯು ಸಿ ಪದವಿ ಮತ್ತು ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:-
● ಕನಿಷ್ಠ 18 ವರ್ಷಗಳು.
● ಗರಿಷ್ಠ 40 ವರ್ಷಗಳು.
ವಯೋಮಾನ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿಧಿಸಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್ ಮೂಲಕ.
● ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ www.konkanarailway.com ಗೆ ಭೇಟಿ ಕೊಟ್ಟು ಐಡಿ ಕ್ರಿಯೇಟ್ ಮಾಡಬೇಕು.
● ಐಡಿ ಎಂಟ್ರಿ ಮಾಡುವ ಮೂಲಕ ಅರ್ಜಿ ಫಾರಂ ಭರ್ತಿ ಮಾಡಿ ಅಧಿಸೂಚನೆಯಲ್ಲಿ ಕೇಳಿದಂತೆ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿಗೆ ಮತ್ತು ವಯೋಮಿತಿಗೆ ಸಡಿಲಿಕೆಗೆ ಸಂಬಂಧಪಟ್ಟ ಹಾಗೆ ಬೇಕಾದ ಪ್ರಮುಖ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಭವಿಷ್ಯದ ಬಳಕೆಗಾಗಿ ಐಡಿ ಸಂಖ್ಯೆ, ಅರ್ಜಿ ವಿನಂತಿ ಸಂಖ್ಯೆ ಮುಂತಾದವುಗಳನ್ನು ಬರೆದಿಟ್ಟುಕೊಳ್ಳಿ ಅಥವಾ ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಬಳಿಕ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ.
● ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಂಬಂಧ ಪಟ್ಟ ದಾಖಲೆಗಳ ಪ್ರತಿ ಜೊತೆ ರೈಲ್ವೆ ಇಲಾಖೆಯ ಪ್ರಧಾನ ಕಛೇರಿ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 29 ಮೇ, 2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 18 ಜೂನ್, 2023.