ಕಡಿಮೆ ವೆಚ್ಚಕ್ಕೆ ಮನೆ ನಿರ್ಮಾಣ. ಕೇವಲ 2-3 ಲಕ್ಷ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತಾರೆ ಇವರು.!

 

WhatsApp Group Join Now
Telegram Group Join Now

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತೇ ಇದೆ. ಈಗಿನ ಕಾಲದಲ್ಲಿ ಬೇಕಾದರೆ ಮದುವೆಯನ್ನು ಕೂಡ ಮಾಡಿ ಮುಗಿಸಬಹುದು ಆದರೆ ಮನೆ ಕಟ್ಟಿ ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಕಟ್ಟುವುದಕ್ಕೆ ಗುದ್ದಲಿ ಪೂಜೆ ಮಾಡಿದ ದಿನದಿಂದ ಹಿಡಿದು ಮನೆಗೆ ತಳಿರು ತೋರಣ ಕಟ್ಟಿ ಗೃಹಪ್ರವೇಶ ಮಾಡುವ ದಿನದ ತನಕ ಮಾಲಿಕನನ್ನು ಹೈರಣಾಗಿಸಿ ಬಿಡುತ್ತದೆ.

ಜೊತೆಗೆ ದೀರ್ಘಕಾಲ ಸಮಯ ಬೇಕಾಗಿರುವ ಕಾರಣ ಇದು ತುಂಬಾ ಲಾಂಗ್ ಪ್ರೋಸೆಸ್ ಎನಿಸುತ್ತದೆ. ಈಗಿನ ತರಾತುರಿ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಕೂಡ ದುಡಿಯುವ ಅವಶ್ಯಕತೆ ಇದೆ. ಹಾಗಾಗಿ ಅಷ್ಟು ದಿನಗಳವರೆಗೆ ಕಾದು ಮನೆ ಕಟ್ಟಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಹಾಗೆಯೇ ಎಲ್ಲಾ ಕಚ್ಚಾ ವಸ್ತುಗಳನ್ನು ಬೆಲೆಗಳು ಏರಿಕೆ ಆಗಿರುವುದರಿಂದ ಸಾಮಾನ್ಯರಿಗೆ ಮನೆ ಎನ್ನುವುದು ಎಟುಕಲಾರದ ಕನಸಾಗಿ ಹೋಗಿದೆ.

ಆದರೂ ಕೂಡ ಸ್ವಂತದೊಂದು ಸೂರು ಇರಬೇಕು ಆ ಸೂರಿನಲ್ಲಿ ವಾಸಿಸಬೇಕು ಎನ್ನುವ ಆಸೆ ಮಾತ್ರ ಹೋಗಿರುವುದಿಲ್ಲ. ಇಂಥವರು ತಮ್ಮ ಕೈಯಲ್ಲಿರುವ ಕಡಿಮೆ ಬಜೆಟ್ಟಿಗೆ ಒಂದು ವಾಸಿಸಲು ಯೋಗ್ಯವಾದ ಎಲ್ಲಾ ಸೌಲಭ್ಯಗಳನ್ನು ಉಳ್ಳ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದರೆ ಪುತ್ತೂರಿನಲ್ಲಿರುವ ಒಂದು ಕಂಪನಿಯು ನಿಮ್ಮ ಕನಸಿಗೆ ಕೈ ಜೋಡಿಸುತ್ತದೆ.

ಪುತ್ತೂರಿನ ಆಕರ್ಷನ್ ಇಂಡಸ್ಟ್ರೀಸ್ ಎನ್ನುವ ಕಂಪನಿಯವರು ಮೂರೇ ದಿನಗಳಲ್ಲಿ ನಿಮಗೆ ಎರಡರಿಂದ ಮೂರು ಲಕ್ಷದ ಬಜೆಟ್ ಒಳಗಡೆ ಒಂದು ಮಿನಿ ಮನೆಯನ್ನು ನಿರ್ಮಿಸಿ ಕೊಡುತ್ತಾರೆ. ಇದರ ಸ್ಯಾಂಪಲ್ ಹೌಸ್ ಪುತ್ತೂರಿನ ಕಂಪನಿಯಲ್ಲಿ ಇದ್ದು ಆಸಕ್ತಿ ಇರುವವರು ಆ ಭಾಗಕ್ಕೆ ಭೇಟಿ ಕೊಟ್ಟಾಗ ಈ ಮನೆಯನ್ನು ಹೋಗಿ ನೋಡಬಹುದು.

ಫ್ರೀ ಫ್ಯಾಬ್ರಿಕೇಟೆಡ್ ವಾಲ್ ಗಳ ಸಹಾಯದಿಂದ ಈ ಮನೆಯನ್ನು ನಿರ್ಮಿಸಲಾಗುತ್ತದೆ. ಫೀ ಫ್ಯಾಬ್ರಿಕೇಟೆಡ್ ವಾಲ್ ಗಳನ್ನು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕೂಡ ಕಾಂಪೌಂಡ್ ನಿರ್ಮಿಸಲು ಬಳಸುತ್ತಾರೆ. ಆದರೆ ಈ ಮಿನಿ ಮನೆಯನ್ನು ನಿರ್ಮಿಸಲು ಇದೇ ರೀತಿಯ ವಾಲ್ ಗಳನ್ನು ಬಳಸಲಾಗುತ್ತದೆ. ಪೋಲಿಮರ್ ಸಿಮೆಂಟ್ ಗಳ ಬಳಕೆ ಎಂಪೋರ್ಟ್ ಗ್ರೇಡ್ ಕಾಂಕ್ರಿಟ್ ಬಳಸಿರುವುದರಿಂದ ಹೆಚ್ಚು ಸ್ಟ್ರಂತ್ ಬರುತ್ತದೆ.

ಜೊತೆಗೆ ಡಿಸೈನರ್ ಕಿಟಕಿಗಳು ಮತ್ತು ಮನೆಯ ವಿನ್ಯಾಸ ಆಕರ್ಷಕ ರೀತಿಯಲ್ಲಿ ಇರುತ್ತದೆ. ಅಂದರೆ 150 ಸ್ಕ್ವೇರ್ ಮೀಟರ್ ಮನೆಯನ್ನು ಎರಡರಿಂದ ಮೂರು ಲಕ್ಷದ ಒಳಗೆ ನಿರ್ಮಿಸಿಕೊಳ್ಳಬಹುದು. ಮನೆಯ ವಿಸ್ತೀರ್ಣ ಹೆಚ್ಚಾದಷ್ಟು ತಗಲುವ ವೆಚ್ಚವು ಹೆಚ್ಚಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಮಾಮೂಲಿ ರೀತಿಯಲ್ಲಿ ನಿರ್ಮಿಸುವ ಮನೆಗಿಂತಲೂ ಹೆಚ್ಚು ಸದೃಢವಾಗಿ ಈ ಮನೆಗಳು ಇರುತ್ತವೆ ಎನ್ನುವ ಭರವಸೆಯನ್ನು ಕೊಟ್ಟು ಕಂಪನಿಯು ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತದೆ.

ಇಂತಹ ಮನೆಗಳಲ್ಲಿ ಒಂದು ಚಿಕ್ಕ ಕುಟುಂಬವು ನೆಮ್ಮದಿಯಾಗಿ ಬದುಕಬಹುದು ಅಥವಾ ಮನೆ ಮೇಲೆ ಜಾಗವಿದ್ದರೆ ಬಾಡಿಗೆ ಮನೆಗಳನ್ನು ನಿರ್ಮಿಸಿ, ಸ್ಟೂಡೆಂಟ್ಸ್ ಗಳಿಗೆ ಅಥವಾ ಬ್ಯಾಚುಲರ್ಸ್ ಗಳಿಗೆ ಬಾಡಿಗೆ ಕೊಡಲು ಇಚ್ಚಿಸುತ್ತಿದ್ದರೆ ಇಂತಹ ಮನೆಗಳನ್ನು ನಿರ್ಮಿಸಿದರೆ ಕಡಿಮೆ ಖರ್ಚಿನಲ್ಲಿ ಲಾಭ ಮಾಡಬಹುದು ಅಥವಾ ತೋಟದಲ್ಲಿ.

ತೋಟದ ಮನೆ ರೀತಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ ಅಥವಾ ಮನೆಯಲ್ಲಿ, ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಮನೆ ನಿರ್ಮಾಣ ಮಾಡಿಕೊಡಲು ಇಚ್ಚಿಸಿದ್ದರೆ ಅಥವಾ ಬಡವರಿಗೆ ಮನೆ ಕಟ್ಟಿಕೊಟ್ಟು ಹಂಚುವ ನಿರ್ಧಾರ ಮಾಡಿದ್ದರೆ ಇಂತಹ ಮನೆಗಳು ಬಹಳ ಸೂಕ್ತ. ಇದರ ವಿನ್ಯಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now