ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಿದ್ರೂ ಕೂಡ ಸ್ವೀಕೃತಿ ರಶೀದಿ ಪ್ರಿಂಟ್ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು.!

 

WhatsApp Group Join Now
Telegram Group Join Now

ಕರ್ನಾಟಕದ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಖಾತ್ರಿ ಭರವಸೆಗಳಂತೆ ಸರ್ಕಾರ ರಚನೆ ಆದಮೇಲೆ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಆದೇಶ ಪತ್ರ ಹೊರಡಿಸಿದೆ. ಅದರಲ್ಲಿ ಮೊದಲನೇ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದೆ.

ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕೃತಿ ಮಾಡುತ್ತಿದ್ದು, ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಸರ್ಕಾರ ಸೂಚಿಸಿರುವ ಸೇವಾ ಸಿಂಧು ಪೋರ್ಟಲ್ ಆದ sevasindhugs.karnataka.gov.in ಹೋಗಿ ಮೊಬೈಲ್ ಮೂಲಕ ಲ್ಯಾಪ್ಟಾಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.

ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಆಫೀಸಿಯಲ್ ಪೇಜ್ ಓಪನ್ ಆಗಿ ಅರ್ಜಿ ಫಾರಂ ಬರುತ್ತದೆ. ಅದರಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅಲ್ಲಿರುವ ಕಸ್ಟಮರ್ ಐಡಿ ಸಂಖ್ಯೆ ಮತ್ತು ಮಾಲೀಕರ ಹೆಸರು ಫಿಲ್ ಮಾಡಿ. ನಂತರ ನೀವು ಬಾಡಿಗೆದಾರರೇ ಅಥವಾ ಮಾಲೀಕರೇ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಕ್ಯಾಪ್ಚಾ ಕೋಡ್ ನಮೂದಿಸಿದರೆ OTP ಜನರೇಟ್ ಆಗುತ್ತದೆ.

ಈ ಎಲ್ಲ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ತಿ ಆದರೆ ನಿಮಗೆ ಅರ್ಜಿ ಸಲ್ಲಿಕೆ ಆಗಿರುವ ಸ್ವೀಕೃತಿ ಪ್ರತಿ ಬರುತ್ತದೆ. ಭವಿಷ್ಯದ ಬಳಕೆಗಾಗಿ ನೀವು ಅದನ್ನು ತಪ್ಪದೇ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಆದರೆ ಎಲ್ಲೆಡೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿರುವ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ವರ್ ಸಮಸ್ಯೆ ಆಗುತ್ತಿದೆ. ಈ ತಾಂತ್ರಿಕ ದೋಷವನ್ನು ಪರಿಹರಿಸಲು ವಿದ್ಯುತ್ ಇಲಾಖೆ ಕೂಡ ಶ್ರಮಿಸುತ್ತಿದೆ.

ಆದರೂ ಕೂಡ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ವರ್ ಯಿಂದ ನಿಮ್ಮ ಅರ್ಜಿ ಸಲ್ಲಿಕೆ ಆಗಿದ್ದರೂ ಕೂಡ ನಿಮಗೆ ಪ್ರಿಂಟೌಟ್ ಬರಲಿಲ್ಲ ಎಂದರೆ ನಿಮ್ಮ ಅರ್ಜಿ ಸ್ವೀಕೃತಿ ಆಗಿದೆಯೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡಿದರೆ ಈ ರೀತಿ ಚೆಕ್ ಮಾಡಿಕೊಳ್ಳಿ. ಮತ್ತೊಮ್ಮೆ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಕೆ ಫಾರ್ಮ್ ಅಲ್ಲಿ ಮತ್ತೊಮ್ಮೆ ವಿದ್ಯುತ್ ಬಿಲ್ ಅಲ್ಲಿ ಇರುವ ಕಸ್ಟಮರ್ ಐಡಿ ಅನ್ನು ಫಿಲ್ ಮಾಡಿ ನೀವು ಈ ರೀತಿ ಫೀಲ್ ಮಾಡಿದ ಕೂಡಲೇ ಒಂದು ಪಾಪ್ ಅಪ್ ಮೆಸೇಜ್ ಸ್ಕ್ರೀನ್ ಮೇಲೆ ಬರುತ್ತದೆ.

ಅಕೌಂಟ್ ಕನೆಕ್ಷನ್ ಐಡಿ ಇಸ್ ಆಲ್ರೆಡಿ ಎಕ್ಸಿಸ್ಟ್ ಫಾರ್ ದಿಸ ಅಪ್ಲಿಕೇಶನ್ ಎಂದು ಬರುತ್ತದೆ. ಅದರಲ್ಲಿ ಅಪ್ಲಿಕೇಶನ್ ರೆಫರ್ ನಂಬರ್ ಹಾಗೂ ಅಪ್ಲಿಕೇಶನ್ ಹಾಕಿರುವ ದಿನಾಂಕ ಸಮೇತ ಬರುತ್ತದೆ. ಅದರಲ್ಲಿ ಬರುವ ರೆಫರ್ ನಂಬರ್ ನೋಟ್ ಮಾಡಿ ಇಟ್ಟುಕೊಳ್ಳಿ. ಇದೇ ನಿಮ್ಮ ಅಕ್ನಾಲೆಜ್ಮೆಂಟ್ ನಂಬರ್ ಆಗಿರುತ್ತದೆ. ಮುಂದೆ ಒಂದು ದಿನ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಪರೀಕ್ಷೆ ಮಾಡಬೇಕಾದ ಸಮಯ ಬಂದಾಗ ಈ ನಂಬರ್ ಅನ್ನು ಹಾಕಿ ನೀವು ಸ್ಟೇಟಸ್ ಚೆಕ್ ಮಾಡಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now