ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಆರೋಗ್ಯ ಸಮಸ್ಯೆ. ಪ್ರತಿಯೊಂದು ಕುಟುಂಬದಲ್ಲೂ ಕೂಡ ಈ ಸಮಸ್ಯೆಯಿಂದ ನರಳುವವರನ್ನು ಕಾಣುತ್ತೇವೆ. ಜೊತೆಗೆ ನಮ್ಮ ಸ್ನೇಹಿತರ ಬಳಗದಲ್ಲೂ ಕೂಡ ಅನೇಕರು ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದನ್ನು ಕೇಳಿದ್ದೇವೆ ಇದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನೇಕರು ಹೆದರುತ್ತಾರೆ.
ಜೊತೆಗೆ ಚಿಕಿತ್ಸೆ ರಹಿತವಾಗಿ ಇದಕ್ಕೆ ಟ್ರೀಟ್ಮೆಂಟ್ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಕೆಲವೊಂದು ಮನೆ ಮದ್ದುಗಳನ್ನು ಪಾಲನೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಮತ್ತು ನೋವುಗಳು ಇಲ್ಲದೆ ಮನೆಯಲ್ಲಿಯೇ ಇದನ್ನು ಗುಣ ಮಾಡಿಕೊಳ್ಳಬಹುದು. ಇಂತಹದೇ ಒಂದು ಉಪಯುಕ್ತ ಮನೆ ಮದ್ದಿನ ಬಗ್ಗೆ ಅಂಕಣದಲ್ಲಿ ತಿಳಿಸಿಕೊಡಲು ಇಚ್ಚಿಸುತಿದ್ದೇವೆ.
ಮೊದಲನೇದಾಗಿ ಈ ರೀತಿ ಪೈಲ್ಸ್ ಅಥವಾ ಮೂಲವ್ಯಾಧಿ ಯಾವುದರಿಂದ ಬರುತ್ತದೆ ಎಂದು ತಿಳಿದುಕೊಳ್ಳಬೇಕು. ನಮ್ಮ ಆಹಾರದ ಕ್ರಮ ಸರಿಯಾಗಿ ಇಲ್ಲದೆ ಇರುವುದು, ಯಾವಾಗಲೂ ಕುಳಿತುಕೊಂಡು ಕೆಲಸ ಮಾಡುವುದು ಜೊತೆಗೆ ದೇಹದ ಉಷ್ಣ ಹೆಚ್ಚಾದಾಗ, ಕೆಲವರಿಗೆ ವಂಶ ಪಾರಂಪರ್ಯ ಆರೋಗ್ಯ ಸಮಸ್ಯೆಯಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆ ಅವರಿಗೆ ದೈಹಿಕವಾಗಿ ಕಾಡುವುದು ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಬಹಳ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಆದ್ದರಿಂದ ಇದು ಬರುವ ಮುನ್ನವೇ ಎಚ್ಚರಿಕೆಯಿಂದ ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು, ಹೆಚ್ಚಾಗಿ ನೀರು ಕುಡಿಯುವುದು, ಮಸಾಲೆಯುಕ್ತ ಮತ್ತು ಜಂಕ್ ಫುಡ್ ಗಳ ಆಹಾರವನ್ನು ತ್ಯಜಿಸುವುದು ಅಥವಾ ಕಡಿಮೆ ಮಾಡುವುದು, ಸರಿಯಾದ ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಈ ಸಮಸ್ಯೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬಹುದು.
ಈಗಾಗಲೇ ನೀವು ಈ ರೀತಿ ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಅದು ಎಷ್ಟು ನೋವಿದ್ದರೂ ಅಥವಾ ಎಷ್ಟೇ ದಿನದಿಂದ ಕಾಡುತ್ತಿದ್ದರು ಪರಿಣಾಮಕಾರಿಯಾಗಿ ಇದು ಗುಣವಾಗಬೇಕು ಮತ್ತು ಶೀಘ್ರವಾಗಿ ಗುಣವಾಗಬೇಕು ಎಂದರೆ ಒಂದು ಉತ್ತಮವಾದ ಮನೆ ಮದ್ದು ಇದೆ. ಈ ರೀತಿ ಮಾಡುವುದರಿಂದ ಪರ್ಮನೆಂಟ್ ಆಗಿ ಈ ಸಮಸ್ಯೆಯಿಂದ ಹೊರ ಬರಬಹುದು, ಇದು ಆಶ್ಚರ್ಯ ಅನಿಸಿದರೂ ಕೂಡ ಸತ್ಯ.
ಇದಕ್ಕಾಗಿ ಪ್ರತಿನಿತ್ಯ ಎಳನೀರಿನ ಸೇವನೆ ಮಾಡಬೇಕು ಅದನ್ನು ಮಾಡುವ ವಿಧಾನ ಬಹಳ ಮುಖ್ಯ. ಒಂದು ಎಳನೀರನ್ನು ಮನೆಗೆ ತಂದು ಅದನ್ನು ಹೋಲ್ ಮಾಡಿ ಅದರೊಳಗೆ ಒಂದು ಚಮಚ ಜೀರಿಗೆ ಹಾಕಿ ಅದನ್ನು ಮಿಕ್ಸ್ ಮಾಡಿ ಅದರ ಮೇಲೆ ಏನಾದರೂ ಮುಚ್ಚಿ ರಾತ್ರಿಪೂರ್ತಿ ಎಳನೀರಿನಲ್ಲಿ ಜೀರಿಗೆ ನೆನೆಯಲು ಬಿಡಬೇಕು ಮತ್ತು ಮರುದಿನ ಬೆಳಿಗ್ಗೆ ಅದನ್ನು ಶೋಧಿಸಿಕೊಂಡು ಜೀರಿಗೆ ನೆನೆದಿರುವ ಎಳನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಈ ರೀತಿ ಒಂದು ತಿಂಗಳು ಮಾಡಿದರೆ ಸಾಕು ನಿಮ್ಮ ಪೈಲ್ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ. ಯಾಕೆಂದರೆ ಎಳನೀರಿನಲ್ಲಿ ಮತ್ತು ಜೀರಿಗೆಯಲ್ಲಿ ಜೀರ್ಣಶಕ್ತಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ಪರಿಹಾರ ಮಾಡುವ ಶಕ್ತಿ ಇರುತ್ತದೆ ಹಾಗೆ ಮಲಬದ್ಧತೆಯ ಎಲ್ಲ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವುದರಿಂದ ನಿಮ್ಮ ಸಮಸ್ಯೆಗೂ ಇದೇ ಪರಿಹಾರ ನೀಡುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ಈ ಕೂಡಲೇ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ಹಂಚಿಕೊಂಡು ಅವರು ಈ ಸಮಸ್ಯೆಯಿಂದ ಹೊರಬರಲು ಅನುಕೂಲ ಮಾಡಿ ಕೊಡಿ.