ಸಾಮಾನ್ಯವಾಗಿ ಮಹಿಳೆಯರಲ್ಲಿ ಅಪ್ಪರ್ ಲಿಪ್ ಮೇಲೆ ಕೂದಲು ಬೆಳೆಯುವುದನ್ನು ನಾವು ನೋಡಬಹುದು ಈ ಕೂದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಇದು ನೋಡುವುದಕ್ಕೆ ಒಂದು ರೀತಿಯಲ್ಲಿ ಭಾಸವಾಗುತ್ತದೆ ಹಾಗಾಗಿ ತುಟಿಯ ಮೇಲೆ ಇರುವಂತಹ ಕೂದಲನ್ನು ನೈಸರ್ಗಿಕವಾಗಿ ಯಾವ ರೀತಿ ಹೊರ ತೆಗೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ವಿಧಾನ ಸಂಪೂರ್ಣವಾಗಿ ನೈಸರ್ಗಿಕ ವಿಧಾನ ಆಗಿರುತ್ತದೆ ಹಾಗಾಗಿ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ನಿಮ್ಮ ಚರ್ಮದ ಮೇಲೆ ಬೀರುವುದಿಲ್ಲ. ಸಾಮಾನ್ಯವಾಗಿ ತುಟಿಯ ಮೇಲ್ಭಾಗದಲ್ಲಿ ಇರುವಂತ ಕೂದಲನ್ನು ತೆಗೆಯುವುದಕ್ಕೆ ಪ್ರತಿವಾರವೂ ಕೂಡ ಹೆಂಗಸರು ಅಥವಾ ಹೆಣ್ಣುಮಕ್ಕಳು ಪಾರ್ಲರ್ಗೆ ಹೋಗುವುದನ್ನು ನೋಡಬಹುದು.
ಒಂದು ಬಾರಿ ಹೋದರೆ ಐವತ್ತರಿಂದ ನೂರು ರೂಪಾಯಿಗಳು ಖರ್ಚಾಗುತ್ತದೆ ಹಾಗಾಗಿ ಇಂದು ಯಾವುದೇ ರೀತಿಯಾಗಿ ಖರ್ಚು ಇಲ್ಲದೆ ಕೇವಲ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನೈಸರ್ಗಿಕವಾಗಿ ಯಾವ ರೀತಿಯಾಗಿ ತುಟಿಯ ಮೇಲ್ಭಾಗದಲ್ಲಿ ಇರುವಂತ ಕೂದಲನ್ನು ನಿವಾರಣೆ ಮಾಡಬಹುದು ಎಂಬುದನ್ನು ನೋಡಿ. ಪಾರ್ಲರ್ ಗೆ ಹೋಗಿ ತುಟಿಯ ಮೇಲ್ಭಾಗದಲ್ಲಿ ಇರುವಂತಹ ಕೂದಲನ್ನು ರಿಮೂವ್ ಮಾಡಿಸಿ ಕೇವಲ ಒಂದು ವಾರ ಕೂಡ ಆಗಿರುವುದಿಲ್ಲ ಅಷ್ಟು ಬೇಗ ಮತ್ತೆ ಅದೇ ಜಾಗದಲ್ಲಿ ಕೂದಲು ಹುಟ್ಟುವುದನ್ನು ನೋಡಬಹುದು. ಹಾಗಾಗಿ ತಿಂಗಳಿಗೆ ನಾಲ್ಕೈದು ಬಾರಿ ಹೋಗಿ ಸುಮ್ಮನೆ ಹಣವನ್ನು ವ್ಯಯ ಮಾಡುವುದರ ಬದಲಾಗಿ ನಾವು ತಿಳಿಸುವಂತಹ ಈ ಸರಳ ವಿಧಾನವನ್ನು ಅನುಸರಿಸಿ ಕೂದಲು ಜಾಗದಲ್ಲಿ ಮತ್ತೆ ಹುಟ್ಟುವುದಿಲ್ಲ.
ಇನ್ನು ಈ ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಏನು ಹಾಗೂ ಮನೆಮದ್ದನ್ನು ಮಾಡುವಂತಹ ವಿಧಾನ ಏನು ಯಾವ ರೀತಿಯಾಗಿ ಈ ಒಂದು ಮನೆಮದ್ದನ್ನು ಬಳಕೆ ಮಾಡಬೇಕು ಸಂಪೂರ್ಣವಾದ ವಿವರವನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತವೆ. ಮೊದಲಿಗೆ ಈ ಮನೆಮದ್ದು ಮಾಡುವುದಕ್ಕೆ ಕಡಲೆಹಿಟ್ಟು ಬೇಕಾಗುತ್ತದೆ ಒಂದು ಬಟ್ಟಲಿಗೆ 1 ಟೇಬಲ್ ಸ್ಪೂನ್ ಕಡಲೆಹಿಟ್ಟನ್ನು ಹಾಕಿಕೊಳ್ಳಿ. ಎಲ್ಲರಿಗೂ ತಿಳಿದಿರುವಂತೆ ಕಡಲೆಹಿಟ್ಟಿನಲ್ಲಿ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಂತಹಾ ಗುಣ ಇದೆ ಅಷ್ಟೇ ಅಲ್ಲದೆ ಮುಖದಲ್ಲಿ ಮಾಡುವಂತಹ ಅನಗತ್ಯವಾದ ಕೂದಲನ್ನು ತೆಗೆದು ಹಾಕುವ ಶಕ್ತಿ ಕೂಡ ಇದರಲ್ಲಿ ಇದೆ. ಹಾಗಾಗಿ ಕಡಲೆಹಿಟ್ಟನ್ನು ಬಳಕೆ ಮಾಡುವುದರಿಂದ ನಮ್ಮ ಚರ್ಮಕ್ಕೆ ಯಾವುದೇ ರೀತಿಯಾದಂತಹ ಹಾ’ನಿ ಉಂಟಾಗುವುದಿಲ್ಲ.
ತದನಂತರ ಈ ಬಟ್ಟಲಿಗೆ ಅರ್ಧ ಟೇಬಲ್ ಸ್ಪೂನ್ ಅರಶಿಣದ ಪುಡಿಯನ್ನು ಹಾಕಿ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅರಿಶಿಣದಲ್ಲಿ ಅತಿ ಹೆಚ್ಚು ಆಂಟಿಬಯೋಟಿಕ್ ಗುಣಗಳು ಇರುವುದನ್ನು ನೋಡಬಹುದಾಗಿದೆ. ಹಾಗಾಗಿ ಇದನ್ನು ನೀವು ಬಳಕೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯಾದಂತಹ ತೊಂ’ದರೆ ಆಗುವುದಿಲ್ಲ ಅರಶಿಣದಲ್ಲಿ ಕೂದಲನ್ನು ಬೆಳೆಯದಂತೆ ಕಾಪಾಡುವಂತಹ ಗುಣಲಕ್ಷಣಗಳು ಇರುವುದನ್ನು ನಾವು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಇದು ಮುಖದ ಕಾಂತಿಯನ್ನು ಕೂಡ ಹೆಚ್ಚು ಮಾಡುತ್ತದೆ ಮುಖದಲ್ಲಿ ಇರುವಂತಹ ಡೆಡ್ ಸ್ಕಿನ್ ಅನ್ನು ಕೂಡ ತೊಲಗಿಸುವುದಕ್ಕೆ ಇದು ಬಹಳ ಪರಿಣಾಮಕಾರಿ. ನಂತರ ಈ ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಹಾಕಿ ಸಕ್ಕರೆ ಸ್ಕ್ರಬ್ಬಿಂಗ್ ಮಾಡುವುದಕ್ಕೆ ತುಂಬಾನೇ ಉಪಯುಕ್ತಕಾರಿ ಹಾಗಾಗಿ ಈ ಮೂರು ಪದಾರ್ಥಗಳನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ.
ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಹಸುವಿನ ಹಾಲನ್ನು ಹಾಕಿ ಕಾಯಿಸದೆ ಇರುವ ಹಾಲನ್ನು ಹಾಕಿದರೆ ತುಂಬಾನೇ ಉತ್ತಮ ಹಸುವಿನ ಹಾಲಿನಲ್ಲಿ ವಿಟಮಿನ್ಸ್ ಗಳು ಇರುವುದನ್ನು ನಾವು ನೋಡಬಹುದು ಇದು ಚರ್ಮಕ್ಕೆ ಬಹಳನೇ ಉಪಯುಕ್ತಕಾರಿ. ಅಷ್ಟೇ ಅಲ್ಲದೆ ಚರ್ಮದಲ್ಲಿ ಆಗುವಂತಹ ಅಲರ್ಜಿ, ದದ್ದು, ರಾಸಸ್ ಗಳನ್ನು ತಡೆಗಟ್ಟುವುದಕ್ಕೆ ಇದು ತುಂಬಾ ಉಪಯುಕ್ತಕಾರಿ. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಇರುವಂತಹ ಪೋಷಕ ತತ್ವಗಳನ್ನು ನಮ್ಮ ಚರ್ಮವನ್ನು ಕೋಮಲವಾಗಿ ಮತ್ತು ಸದಾಕಾಲ ಸಾಫ್ಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಈಗ ಈ ಎಲ್ಲ ಮಿಶ್ರಣವನ್ನು ಕೂಡ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ತದನಂತರ ಒಂದು ಮಿಶ್ರಣವನ್ನು ನಿಮ್ಮ ತುಟಿಯ ಮೇಲ್ಭಾಗದಲ್ಲಿ ಇರುವಂತಹ ಕೂದಲುಗಳಿಗೆ ಹಚ್ಚಬೇಕು ಇದನ್ನು 25 ರಿಂದ 20 ನಿಮಿಷಗಳ ಕಾಲ ಸಂಪೂರ್ಣವಾಗಿ ಡ್ರೈ ಆಗುವುದಕ್ಕೆ ಬಿಡಬೇಕು.
ನಾವು ಹಾಕಿರುವಂತಹ ಲೇಪನ ಸಂಪೂರ್ಣವಾಗಿ ಡ್ರೈ ಆದನಂತರ ಒಂದು ಹತ್ತಿಯನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಅದ್ದಿ ಮೃದುವಾಗಿ ಚರ್ಮದ ಮೇಲೆ ಹಾಕಿರುವಂತಹ ಲೇಪನವನ್ನು ತೆಗೆಯಬೇಕು. ಈ ರೀತಿ ತೆಗೆಯುವಂತಹ ಸಂದರ್ಭದಲ್ಲಿ ಅಲ್ಲಿ ಇರುವಂತಹ ಕೂದಲುಗಳನ್ನು ಕೂಡ ಸಂಪೂರ್ಣವಾಗಿ ಹೊರಬರುತ್ತದೆ, ಇದಿಷ್ಟೇ ಮಾತ್ರವಲ್ಲದೆ ಆ ಜಾಗದಲ್ಲಿ ಮತ್ತೆ ಕೂದಲು ಹುಟ್ಟದೇ ಇರುವ ರೀತಿಯಲ್ಲೂ ಕೂಡ ಇದು ನೋಡಿಕೊಳ್ಳುತ್ತದೆ. ಈ ರೀತಿ ಸಂಪೂರ್ಣವಾಗಿ ಲೇಪನವನ್ನು ತೆಗೆದ ನಂತರ ತಣ್ಣೀರಿನಿಂದ ಒಂದು ಬಾರಿ ಮುಖವನ್ನು ತೊಳೆದುಕೊಳ್ಳಿ. ತದನಂತರ ಒಂದು ತೆಳುವಾದ ಬಟ್ಟೆಯಿಂದ ಮುಖವನ್ನು ಒರೆಸಿಕೊಂಡು ಕೂದಲು ತೆಗೆದಿದ್ದ ಜಾಗಕ್ಕೆ ಯಾವುದಾದರೂ ಕ್ರೀಮ್ ಅಥವಾ ವ್ಯಾಸಲಿನ್ ಹಚ್ಚಿ. ಏಕೆಂದರೆ ಈ ಜಾಗದಲ್ಲಿ ರಾಸಸ್ ಅಥವಾ ಉರಿ ಉಂಟಾಗಬಾರದು ಎಂಬ ಕಾರಣದಿಂದಾಗಿ ಈ ಒಂದು ಕ್ರೀಮ್ ಅನ್ನು ಹಚ್ಚುವುದಕ್ಕೆ ನಾವು ಹೇಳುತ್ತಿದ್ದೇವೆ.
ಮೇಲೆ ತಿಳಿಸಿದಂತಹ ವಿಧಾನವನ್ನು ನೀವು ಚಾಚೂತಪ್ಪದೆ ಪರಿಪಾಲನೆ ಮಾಡಿದರೆ ಕಂಡಿತವಾಗಿಯೂ ಕೂಡ ತುಟಿಯ ಮೇಲ್ಭಾಗದಲ್ಲಿ ಇರುವಂತ ಮತ್ತೆ ಬರುವುದಲ್ಲ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಮತ್ತೆ ಆ ಜಾಗದಲ್ಲಿ ಎಂದಿಗೂ ಕೂಡ ಕೂದಲು ಹುಟ್ಟುವುದಿಲ್ಲ ಹದಿನೈದು ದಿನಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಈ ರೀತಿ ಮಾಡಿ ಮೂರರಿಂದ ನಾಲ್ಕು ಬಾರಿ ಇದನ್ನು ಬಳಕೆ ಮಾಡಿದರೆ ಸಾಕು ಜೀವನದಲ್ಲಿ ಎಂದಿಗೂ ಕೂಡ ಕೂದಲು ಹುಟ್ಟುವುದಿಲ್ಲ. ಇದು ತುಂಬಾನೇ ಸರಳವಾದ ಹಾಗೂ ಖರ್ಚಿಲ್ಲದೆ ಮಾಡುವಂತಹ ವಿಧಾನವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ನಿಯಮವನ್ನು ಅನುಸರಿಸಬಹುದು. ಸಾಮಾನ್ಯವಾಗಿ ಮನೆ ಅಂದ ಮೇಲೆ ಅಲ್ಲಿ ಕಡಲೆಹಿಟ್ಟು, ಅರಿಶಿಣ, ಸಕ್ಕರೆ, ಕೊಬ್ಬರಿ, ಎಣ್ಣೆ, ಹಾಲು ಇದ್ದೇ ಇರುತ್ತದೆ. ನೀವು ಇವುಗಳನ್ನು ತರುವುದಕ್ಕೆ ಎಕ್ಸ್ಟ್ರಾ ದುಡ್ಡನ್ನು ಖರ್ಚು ಮಾಡುವಂತಹ ಅಗತ್ಯ ಇಲ್ಲ ಅದೇ ರೀತಿ ಪಾರ್ಲರ್ ಹೋಗುವಂತಹ ಪ್ರಮೇಯವು ಕೂಡ ಇರುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.