ಜೀವನದಲ್ಲಿ ಕೆಟ್ಟ ಪರಿಸ್ಥಿತಿಗಳು ಬಂದಾಗ ಅದನ್ನು ಎದುರಿಸಿ ಧೈರ್ಯದಿಂದ ಬದುಕುವುದಕ್ಕೆ ಹಾಗೂ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅಥವಾ ಜೀವನದಲ್ಲಿ ಒಳ್ಳೆ ಉದ್ದೇಶಗಳಿದ್ದಾಗ ಕನಸು ಉನ್ನತ ಮಟ್ಟದಲ್ಲಿದ್ದಾಗ ಅದನ್ನು ನೆರವೇರಿಸಿಕೊಳ್ಳುವುದಕ್ಕೆ ದೈವಬಲ ಎನ್ನುವುದು ಮನುಷ್ಯನಿಗೆ ಬೇಕೇ ಬೇಕು.
ಎಂತಹ ವಿಜ್ಞಾನಿಗಳಾಗಿದ್ದರು ಕೂಡ ಇಂದು ಅವರು ಮಾಡುವ ಸಂಶೋಧನೆಗೂ ಮೊದಲು ಅವರ ಇಷ್ಟದೈವದ ಪ್ರಾರ್ಥನೆ ಮಾಡಿ ಆರಂಭಿಸುವುದನ್ನು ನಾವು ಕೇಳಬಹುದು. ಈ ರೀತಿ ದೇವರ ಅನುಗ್ರಹ ಇದ್ದರೆ ಮಾತ್ರ ಅಂತವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಮತ್ತು ಯಾವುದೇ ಸಮಸ್ಯೆ ಬಂದರೂ ಧೃತಿಗೆಡದೆ ಧೈರ್ಯವಾಗಿ ನಿಂತು ಫೇಸ್ ಮಾಡುತ್ತಾರೆ.
ಒಬ್ಬ ಮನುಷ್ಯನಿಗೆ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುತ್ತವೆ. ವಿದ್ಯಾಭ್ಯಾಸದಲ್ಲಿ ತೊಂದರೆ, ನಿರುದ್ಯೋಗ ಅಥವಾ ಉದ್ಯಮ ಕೈ ಹತ್ತದೇ ಇರುವುದು, ವ್ಯವಹಾರ ನಷ್ಟ ಆಗುವುದು, ಅನಾರೋಗ್ಯ ಸಮಸ್ಯೆ ಬರುವುದು ಅಥವಾ ವಿವಾಹ ವಿಳಂಬ ಆಗುವುದು, ಸಂತಾನ ಇಲ್ಲದೆ ಇರುವುದು, ಪತಿ-ಪತ್ನಿ ಮಧ್ಯೆ ಕಲಹ, ಮನೆಯಲ್ಲಿ ಶಾಂತಿ ಇಲ್ಲದೆ ಇರುವುದು, ಯಾವ ಕೆಲಸಕ್ಕೆ ಕೈ ಹಾಕಿದರು ಆಗದೆ ಇರುವುದು ಇಂತಹ ಸಾಕಷ್ಟು ಬಾಧೆಗಳು ಕಾಡುತ್ತವೆ.
ಅವುಗಳ ಪರಿಹಾರಕ್ಕಾಗಿ ಅಥವಾ ಜೀವನದಲ್ಲಿ ಯಾವುದಾದರೂ ದೊಡ್ಡ ಕನಸಿದ್ದರೆ ಅದನ್ನು ನನಸು ಮಾಡಿಕೊಳ್ಳುವುದಕ್ಕೆ ದೈವಶಕ್ತಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಬೇಕು. ಈ ರೀತಿಯಾದ ಸಕರಾತ್ಮಕ ಶಕ್ತಿ ಹಾಗೂ ದೈವ ಶಕ್ತಿ, ದೈವ ಅನುಗ್ರಹ ನಮ್ಮ ಮೇಲೆ ಆಗಬೇಕು ಎಂದರೆ ಪೂಜೆ ಪುರಸ್ಕಾರ ಮಾಡುವುದರ ಜೊತೆಗೆ ಮಂತ್ರಗಳ ಉಚ್ಚಾರಣೆಯನ್ನು ಕೂಡ ಮಾಡಬೇಕು. ಅದನ್ನೇ ನಮ್ಮ ಹಿರಿಯರು ಶಾಸ್ತ್ರಗಳಲ್ಲಿ ತಿಳಿಸಿ ಹೋಗಿರುವುದು.
ಮಂತ್ರಗಳಲ್ಲಿ ಹಲವು ನಿಗೂಢ ಅರ್ಥಗಳು ಇರುತ್ತವೆ. ಅವುಗಳ ಉಚ್ಚಾರಣೆಯಿಂದ ಒಂದು ಶಕ್ತಿ ಫಾರ್ಮ್ ಆಗುತ್ತದೆ, ಆ ಶಕ್ತಿಯು ನಮ್ಮನ್ನು ಕಾಯುತ್ತದೆ. ಇವುಗಳ ಮೇಲೆ ನಂಬಿಕೆ ಇದ್ದವರು ಇದನ್ನು ಪಾಲಿಸಬಹುದು. ಜೀವನದಲ್ಲಿ ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದರೆ ಈಗ ನಾವು ಹೇಳುವ ಈ ಒಂದು ಮಂತ್ರದ ಉಚ್ಚಾರಣೆ ಮಾಡಿ, ನಿಮ್ಮ ಜೀವನದಲ್ಲಿ ಇರುವ ಸಮಸ್ಯೆ 24 ಗಂಟೆ ಒಳಗಡೆ ಸರಿಹೋಗುವ ಮುನ್ಸೂಚನೆಯನ್ನು ನೀವು ಕಾಣುತ್ತೀರಿ.
ಇದು ಕಾಲಭೈರವ ಮಂತ್ರ ಆಗಿದೆ. ಈ ಮಂತ್ರವನ್ನು ಉಚ್ಚಾರಣೆ ಮಾಡುವುದಕ್ಕೆ ಮುನ್ನ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ನೀವು ಕೂಡ ಸ್ನಾನ ಮಾಡಿ ಮಾಡಿಯುಟ್ಟುಕೊಳ್ಳಬೇಕು, ಗಂಡು ಮಕ್ಕಳು ಹೆಣ್ಣು ಮಕ್ಕಳು ಯಾರು ಬೇಕಾದರೂ ಉಚ್ಚಾರಣೆ ಮಾಡಬಹುದು. ಬೆಳಗ್ಗೆ ಅಥವಾ ಸಂಜೆ ಇದರ ಉಚ್ಚಾರಣೆ ಮಾಡಿದರೂ ನಡೇಯುತ್ತದೆ. ಮೊದಲು ಒಂದು ಪುಸ್ತಕದಲ್ಲಿ ಇದನ್ನು ಬರೆದಿಟ್ಟುಕೊಳ್ಳಬೇಕು.
ಆ ಮಂತ್ರವು ಹೀಗಿದೆ, ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯo ವೃದ್ಧಿ ಕರಾಯ ಶ್ರೀಘ್ರ ಧನಧಾನ್ಯo ಸ್ವರ್ಣo ದೇಹಿ ದೇಹಿ ವಸ್ಯ ವಸ್ಯ ಕುರು ಕುರು ಸ್ವಾಹ ಇದನ್ನು ಪುಸ್ತಕದ ಮೇಲೆ ಬರೆದು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹೂವು ಇಟ್ಟು ಭಕ್ತಿಯಿಂದ ನಮಸ್ಕರಿಸಿ. ಮನಸ್ಸಿನಲ್ಲಿ ಕಾಲಭೈರವವನ್ನು ಪ್ರಾರ್ಥನೆಯನ್ನು ಮಾಡಿ ನಿಮ್ಮ ಶಕ್ತಿ ಅನುಸಾರ 9, 16, 21 ಅಥವಾ 108 ಹೀಗೆ ಎಷ್ಟು ಬಾರಿ ಸಾಧ್ಯ ಅಷ್ಟು ಬಾರಿ ಈ ಮಂತ್ರವನ್ನು ಜಪ ಮಾಡಿ ನಮ್ಮ ಸಮಸ್ಯೆ ಹೇಗೆ ಪರಿಹಾರ ಆಗುತ್ತದೆ ಎಂದು ನೀವೇ ನೋಡಿ. ಭಾನುವಾರ, ಸೋಮವಾರ ಗುರುವಾರ ಪಠಿಸಿದರೆ ಇನ್ನು ಹೆಚ್ಚು ಶೀಘ್ರಫಲ ಕೊಡುತ್ತದೆ, ಪ್ರತಿದಿನವೂ ಕೂಡ ಪಠಿಸಬಹುದು.