ಸ್ಟೈಲಿಶ್ ಲುಕ್ ನೊಂದಿಗೆ ಮೈಲೇಜ್ ಅಲ್ಲೂ ಕೂಡ ಕಾಂಪ್ರಮೈಸ್ ಇಲ್ಲದ ಎಲ್ಲಾ ವರ್ಗದ ಗ್ರಾಹಕರಿಗೂ ಖರೀದಿ ಮಾಡಬಹುದಾದಂತಹ ಅನುಕೂಲತೆ ಹೊಂದಿರುವ ಹೊಸ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಒಬೆನ್ ಎನ್ನುವ ಕಂಪನಿಯು ರೋರ್ ನಿಮ್ಮ ಹೆಸರಿನ ಈ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಈ ಎಲೆಕ್ಟ್ರಿಕಲ್ ಬೈಕ್ ಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ತೈಲಗಳ ಬೆಲೆ ಏರಿಕೆ ಆಗಿರುವುದು ಹಾಗೂ ಅವುಗಳ ನಿವಾಹಣಾ ವೆಚ್ಚದ ದುಬಾರಿ ಖರ್ಚು ಮತ್ತು ಪರಿಸರದ ಕಾಳಜಿಯ ವಿಷಯದಿಂದಾಗಿ ಜನ ಎಲೆಕ್ಟ್ರಿಕಲ್ ಬೈಕ್ ಗಳತ್ತ ವಾಲ ತೊಡಗಿದ್ದಾರೆ.
ಪರಿಸರ ಮಾಲಿನ್ಯ ಮತ್ತು ಇಂಧನ ಬೆಲೆ ಏರಿಕೆಗೆ ಪರ್ಯಾಯ ಮಾರ್ಗವಾಗಿರುವ ಈ ಎಲೆಕ್ಟ್ರಿಕಲ್ ಬೈಕ್ ಗಳು ಈಗ ಕೈಗೆಟುಕವ ಬೆಲೆಗೆ ಸಿಗುವುದರಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿವೆ. ಇಷ್ಟು ಕಡಿಮೆ ಬೆಲೆಗೆ ಮೊದಲ ಬಾರಿಗೆ ಒಬೆನ್ ರೋರ್ ಎಲೆಕ್ಟ್ರಿಕಲ್ ಬೈಕ್ ಅನ್ನು ನೀವು ಡೌನ್ ಪೇಮೆಂಟ್ 30,000 ಪಾವತಿಸಿ ಖರೀದಿಸ ಮಾಡಬಹುದು.
ಆ ಅವಕಾಶವನ್ನು ಕಂಪನಿ ನೀಡಿದೆ. ನಿಯೋ ಕ್ಲಾಸಿಕ್ ಡಿಸೈನ್ ಇಂದ ಹೆಚ್ಚು ಸ್ಟೈಲಿಶ್ ಆಗಿ ಕಾಣುವ ಈ ಬೈಕ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 187 ಕಿಲೋಮೀಟರ್ ವರೆಗೂ ಕೂಡ ನಿಶ್ಚಿಂತೆಯಾಗಿ ರೈಡ್ ಮಾಡಬಹುದು, ಅಷ್ಟು ಮೈಲೇಜ್ ಕೊಡುತ್ತದೆ. ಹಾಗೂ ಒಂದು ಬಾರಿ ಈ ಬ್ಯಾಟರಿಯನ್ನು 80% ವರೆಗೂ ಚಾರ್ಜ್ ಮಾಡುವುದಕ್ಕೆ ಎರಡು ತಾಸು ಚಾರ್ಜ್ ಹಾಕಿದರೆ ಸಾಕು ಈ ವಿಷಯದಲ್ಲೂ ಕೂಡ ಗ್ರಾಹಕ ಸ್ನೇಹಿ ಆಗಿದೆ. 100km/h ಇದರ ಸಾಮರ್ಥ್ಯವಾಗಿದೆ.
ವಾಟರ್ ಪ್ರೂಫ್ ಬ್ಯಾಟರಿ, ಡ್ರೈವರ್ ಅಲರ್ಟ್ಸ್ ಸಿಸ್ಟಮ್, ಆಂಟಿ-ಥೆಪ್ಟ್ ಮೆಕಾನಿಸಂ ಕಳ್ಳತನದ ರಕ್ಷಣೆ, ಜಿಪಿಎಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಈ ವೈಶಿಷ್ಟಗಳು ಅದರ ಸೆಕ್ಯೂರಿಟಿ ಮತ್ತು ಕ್ರಿಯಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವಾರಂಟಿ ಬಗ್ಗೆ ಕೂಡ ಅನುಕೂಲತೆ ನೀಡುತ್ತಿದ್ದು ಬ್ಯಾಟರಿ ಮತ್ತು ಮೋಟರ್ ಗೆ ಎರಡು ವರ್ಷಗಳ ವಾರಂಟಿ ಇದೆ, ಮೂರು ಸಾರಿ ಫ್ರೀ ಸರ್ವಿಸ್ ನೀಡುವ ಮೂಲಕ ಮೂರು ಬಾರಿ ಉಚಿತವಾಗಿ ನಿಮ್ಮ ಬೈಕ್ ಯಾವ ಸ್ಥಿತಿಯಲ್ಲಿ ಇದೆ ಎಂದು ಪರೀಕ್ಷಿಸಿ ಕೊಡುತ್ತದೆ.
ಸ್ಮಾರ್ಟ್‌ಫೋನ್ ಸಂಪರ್ಕವು ನಿಮ್ಮ ಬೈಕಿನ ಅಂಕಿಅಂಶಗಳನ್ನು ಮೀಸಲಾದ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಲು ಅನುಮತಿ ಸಹ ಇರುವುದರಿಂದ ನಿಮ್ಮ ಬೆರಳ ತುದಿಯಲ್ಲಿ ವಾಹನದ ಕಂಟ್ರೋಲನ್ನು ಹೊಂದಿರುತ್ತೀರಿ. ಈ ಎಲೆಕ್ಟ್ರಿಕಲ್ ಬೈಕ್ ನ ಎಕ್ಸ್ ಶೋ ರೂಂ ಬೆಲೆ 1,49,000 ಇದೆ. ನೀವು 30,000 ಮುಂಗಡ ಪಾರ್ವತಿ ಮಾಡಿದರೆ ಉಳಿದ 1,19,000 ರೂಪಾಯಿಗಳಿಗೆ 8.5% ಬಡ್ಡಿದರದಲ್ಲಿ ಸಾಲದ ರೂಪದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಬಹುದು.
ಮಾಸಿಕ EMI 5454ರೂ. ಇರುತ್ತದೆ ನೀವು 24 ತಿಂಗಳು ಪಾವತಿಸಬೇಕಾಗುತ್ತದೆ. ಇದರಲ್ಲಿ ಬೈಕ್ ವಿಮೆ ಮತ್ತು ನೋಂದಣಿ ಶುಲ್ಕಗಳು ಹೆಚ್ಚುವರಿ ವೆಚ್ಚಗಳನ್ನು ಹೊರತುಪಡಿಸಿ ಹೇಳಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಮತ್ತು ಬುಕಿಂಗ್ ಮಾಡಲು ನೀವು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದೇ ತಿಂಗಳಿನಿಂದ ಒಬೆನ್ ರೋರ್ ಕಂಪನಿ ಎಲೆಕ್ಟ್ರಿಕ್ ಬೈಕ್ ವಿತರಣೆ ಶುರು ಮಾಡಲಿದೆ.