ಒಂದು ಹೊಸ ಮನೆ ಕಟ್ಬೇಕು ಅನ್ನೋದು ಎಲ್ಲರ ದೊಡ್ಡ ಕನಸು. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ವಸತಿ, ಆಹಾರ, ಉದ್ಯೋಗ ಇತ್ಯಾದಿಯ ಕೊರತೆ ಉಂಟಾಗುತ್ತಿದೆ. ಜನರಿಗೆ ಅವರು ಕನಸು ಕಂಡಂತಹ ಮನೆಯನ್ನು ಕಟ್ಟಿಸಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಜಾಗದ ಅಭಾವ ತುಂಬಾ ಇದೆ ನಾವು ಅಂದುಕೊಂಡಂತಹ ಜಾಗ ನಮಗೆ ಮನೆ ಕಟ್ಟಲು ಸಿಗುತ್ತಿಲ್ಲ.
ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ವಾಸ್ತುಶಿಲ್ಪದ ಏರಿಕೆಯು ಹೊಸ ವಸತಿ ಆಯ್ಕೆಯ ರಚನೆಗೆ ಕಾರಣವಾಗಿದೆ ಕಂಟೈನರ್ ಮನೆಗಳು. ಈ ಮನೆಗಳನ್ನು ಮರುಬಳಕೆಯ ಶಿಪ್ಪಿಂಗ್ ಕಂಟೈನರ್‌ಗಳಿಂದ ತಯಾರಿಸಲಾಗುತ್ತದೆ ಮತ್ತು ಅವುಗಳ ಕೈಗೆಟುಕುವಿಕೆ, ಬಹುಮುಖತೆ ಮತ್ತು ಪರಿಸರ ಸ್ನೇಹಪರತೆಗಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.
ಬೆಳೆಯುತ್ತಿರುವ ಸಿಟಿ ಮಧ್ಯೆ ಇದ್ದ ದಂಪತಿಗಳು ಈಗ ಹಳ್ಳಿಯಲ್ಲಿ ಬಂದು ಕಂಟೇನರ್ (Container House) ಮನೆಯನ್ನು ಸ್ಥಾಪಿಸಿದ್ದಾರೆ. ಇದು ಹಳ್ಳಿಯ ಜನಕ್ಕೆ ಆಶ್ಚರ್ಯ ತಂದಿದೆ ಮತ್ತು ಎಲ್ಲರೂ ಅದನ್ನು ನೋಡಲು ಉತ್ಸುಕರಾಗಿ ಹೋಗುತ್ತಿದ್ದಾರೆ. ದಂಪತಿಗಳಿಗೆ ಕೃಷಿಯಲ್ಲಿ ಆಸಕ್ತಿ ಇದ್ದು ಕೃಷಿ ಮಾಡಲೆಂದು 15 ಎಕರೆ ಜಮೀನು ಖರೀದಿಸಿದ್ದರು. ಆದರೆ, ಅವರಿಗೆ ಅಲ್ಲಿ ವಸತಿಯ ತೊಂದರೆ ಉಂಟಾಯಿತು. ಅಲ್ಲಿ ಯಾವುದೇ ರೀತಿಯ ಬಾಡಿಗೆ ಮನೆ ಸಿಗಲಿಲ್ಲ. ಆಗ ಅವರು ಕಂಟೇನರ್ ಮನೆ ಕಟ್ಟಲು ನಿರ್ಧರಿಸಿದರು.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ. ಮದುವೆಯಾದರೂ ಸ್ವಲ್ಪ ಖರ್ಚಿನಲ್ಲಿ ಸರಳವಾಗಿ ಮಾಡಬಹುದು. ಆದರೆ, ಮನೆ ಕಟ್ಟುವ ವಿಷಯ ಬಹಳ ಕಷ್ಟವಾದದ್ದು ಹಾಗೂ ಕಟ್ಟಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಅವರು ಕಂಟೇನರ್ ಮನೆ ನಿರ್ಮಿಸುವ ಯೋಚನೆ ಮಾಡಿದರು. ನಗರದಲ್ಲಿದ್ದ ಕಂಟೇನರ್ ಮನೆ ಈಗ ಹಳ್ಳಿಗೂ ಬಂದಿದೆ.
ಎರಡು ಅಂತಸ್ತಿನ ಕಂಟೇನರ್ ಮನೆಯನ್ನು ಕಟ್ಟಿಕೊಂಡು ಕೃಷಿ ಮಾಡಲು ಮುಂದಾಗಿದ್ದಾರೆ. ದಂಪತಿಗಳು ಇಂಜಿನಿಯರ್ಸ್ ಆಗಿದ್ದರು ಕೂಡ, ಕೃಷಿಯ ಬಗ್ಗೆ ಆಸಕ್ತಿ ತೋರಿಸಿರುವುದು ಬಹಳ ಸಂತೋಷ ನೀಡುವಂತಹ ವಿಷಯ ಹಾಗೂ ತುಂಬಾ ಜನರಿಗೂ ಮಾದರಿ ಕೂಡ ಆಗಿದೆ. ಕೃಷಿ ಮಾಡಿದರೆ ಮಾತ್ರ ಮನುಷ್ಯನಿಗೆ ಆಹಾರ, ಅಂತಹ ರೈತನನ್ನು ಯಾವಾಗಲೂ ಗೌರವಿಸಿ. ಈ ರೀತಿಯ ಮನೆ ನಿರ್ಮಾಣ ನೀವು ಮಾಡಿಕೊಳ್ಳಬೇಕು ಅನ್ನೋದಾದರೆ ಹೆಚ್ಚಿನ ಮಾಹಿತಿಗೆ ಪುಷ್ಪಕ್ ನರಸಿಂಹನ್ ಅವರ ಮೊಬೈಲ್ ಸಂಖ್ಯೆ: 9663493831
ಕಂಟೈನರ್ ಹೋಮ್ಸ್ ಎಂದರೇನು?
ಕಂಟೈನರ್ ಮನೆಗಳು ಶಿಪ್ಪಿಂಗ್ ಕಂಟೈನರ್‌ಗಳಿಂದ ಮಾಡಿದ ಮನೆಗಳಂತೆ ನಿಖರವಾಗಿ ಕಾಣಿಸುತ್ತದೆ. ಕಂಟೇನರ್‌ಗಳು ಸಾಮಾನ್ಯವಾಗಿ 8 ಅಡಿ ಅಗಲ ಮತ್ತು 20 ಅಥವಾ 40 ಅಡಿ ಉದ್ದವಿರುತ್ತವೆ ಮತ್ತು ಕಸ್ಟಮೈಸ್ ಮಾಡಿದ ವಾಸದ ಸ್ಥಳವನ್ನು ರಚಿಸಲು ಅವುಗಳನ್ನು ಜೋಡಿಸಬಹುದು ಮತ್ತು ಸಂಯೋಜಿಸಬಹುದು. ಕಂಟೈನರ್ ಮನೆಗಳನ್ನು ಬಲವಾದ, ಬಾಳಿಕೆ ಬರುವ ಮತ್ತು ಹವಾಮಾನ-ನಿರೋಧಕವಾಗಿ ವಿನ್ಯಾಸಗೊಳಿಸಲಾಗಿದೆ, ಅವುಗಳನ್ನು ಮನೆಗಳಾಗಿ ಬಳಸಲು ಸೂಕ್ತವಾಗಿದೆ.
ಕಂಟೈನರ್ ಹೋಮ್ ನಿರ್ಮಾಣ
ಕಂಟೇನರ್ ಮನೆಯನ್ನು ನಿರ್ಮಿಸುವುದು ಕಷ್ಟವಲ್ಲ. ನಿಮ್ಮ ಮನೆಯನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ನಿಮಗೆ ಸಹಾಯ ಮಾಡುವ ಪ್ರತಿಷ್ಠಿತ ಕಂಟೇನರ್ ಹೋಮ್ ಬಿಲ್ಡರ್ ಅನ್ನು ಕಂಡುಹಿಡಿಯುವುದು ಮೊದಲ ಹಂತವಾಗಿದೆ. ಕಂಟೇನರ್ ಹೋಮ್ ಅನ್ನು ನಿರ್ಮಿಸುವ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುವ ಹಲವಾರು ಆನ್‌ಲೈನ್ ಸಂಪನ್ಮೂಲಗಳು ಸಹ ಲಭ್ಯವಿವೆ.