ದುಡಿಯುವ ಸಮಯದಲ್ಲಿಯೇ ಭವಿಷ್ಯದ ಬಗ್ಗೆ ಚಿಂತಿಸಿ ಒಂದು ಮೊತ್ತದ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವುದು ಜಾಣತನ ಎಂದು ಹೇಳಬಹುದು ಅಥವಾ ಇದನ್ನು ಭವಿಷ್ಯದ ಬಗ್ಗೆ ಇರುವ ಮಂದಾಲೋಚನೆ ಎಂದರೂ ಕೂಡ ತಪ್ಪಾಗಲಾರದು. ಯಾಕೆಂದರೆ, ಈಗಿನ ಕಾಲದಲ್ಲಿ ಎಲ್ಲಾ ಉದ್ಯೋಗಗಳಿಗೂ ಕೂಡ ಪಿಂಚಣಿ ವ್ಯವಸ್ಥೆ ಇರುವುದಿಲ್ಲ.
ಹಾಗಾಗಿ ಈ ಸೌಲಭ್ಯ ಇಲ್ಲದವರು ಈಗಿನಿಂದಲೇ ಹಣ ಕೂಡಿಟ್ಟುಕೊಂಡು ಅದನ್ನು ಒಂದೆಡೆ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಅದರ ಲಾಭದಿಂದ ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಾಗಿ ಕಳೆಯಬಹುದು. ಇಂತಹ ಒಂದು ಅನುಕೂಲತೆಯನ್ನು ಸರ್ಕಾರ ಅಂಚೆಕಛೇರಿಯ ಕೆಲ ಯೋಜನೆಗಳ ಮೂಲಕ ನೀಡುತ್ತಿದೆ. ಜೊತೆಗೆ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಇದಕ್ಕಾಗಿ ಸಾಕಷ್ಟು ವ್ಯವಸ್ಥೆ ಇದೆ. ಇವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು ಖ್ಯಾತಿಗಳಿಸಿರುವ ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ SBI ಬ್ಯಾಂಕ್ ನಲ್ಲಿ ಭವಿಷ್ಯದ ಚಿಂತನೆಯಿಂದ ಹಣ ಹೂಡಿಕೆ ಮಾಡುವವರಿಗೆ ಈಗ ಸುವರ್ಣ ಅವಕಾಶವಿದೆ. ಯಾಕೆಂದರೆ SBI ಇತ್ತೀಚೆಗಷ್ಟೇ ಹೊಸದಾದ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ನೀವು ನಿಮ್ಮ ಹಣವನ್ನು ಠೇವಣಿ ಇಟ್ಟರೆ ಅತಿ ಹೆಚ್ಚಿನ ಮೊತ್ತದ ಬಡ್ಡಿದರವನ್ನು ಪಡೆಯುತ್ತೀರಿ ಹಾಗೂ ಶೀಘ್ರದಲ್ಲಿ ನಿಮ್ಮ ಹಣ ದುಪ್ಪಟ್ಟು ಕೂಡ ಆಗುತ್ತದೆ.
SBI ಬ್ಯಾಂಕ್ ಜಾರಿಗೆ ತಂದಿರುವ We care FD ಮತ್ತು ಅಮೃತ್ ಕಳಸ್ ಈ ಯೋಜನೆಗಳ ಬಗ್ಗೆ ದೇಶದ ಎಲ್ಲರಿಗೂ ಕೂಡ ಅರಿವಿರಬೇಕು. We care FD ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡುವುದರಿಂದ 10 ವರ್ಷಕ್ಕೆ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಕೊರೋನ ಸಂಕಷ್ಟದ ಸಮಯದಲ್ಲಿ ಭವಿಷ್ಯದಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ SBI ಬ್ಯಾಂಕ್ ಈ ಯೋಜನೆಯನ್ನು ಪರಿಚಯಿಸಿತು.
ಪ್ರಸ್ತುತವಾಗಿ ಬ್ಯಾಂಕಿನಲ್ಲಿ 6.5% ಬಡ್ಡಿದರ ನಿಮ್ಮ ಹಣಕ್ಕೆ ಸಿಗುತ್ತದೆ, ಆದರೆ ಈ ಯೋಜನೆಯಲ್ಲಿ ಠೇವಣಿ ಇಟ್ಟವರಿಗೆ 7.50% ಸಿಗುತ್ತದೆ. ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ಸಹ ಸಿಗುತ್ತದೆ. ಇದರ ಅರ್ಥದಲ್ಲಿ ನೀವು 5 ಲಕ್ಷ ಈಗ ಹೂಡಿಕೆ ಮಾಡಿದರೆ ಇನ್ನು 10 ವರ್ಷದಲ್ಲಿ ನಿಮಗೆ 10 ಲಕ್ಷ ಹಣ ಸಿಗುತ್ತದೆ. ಮಾಸಿಕವಾಗಿ ತ್ರೈಮಾಸಿಕವಾಗಿ ಹಾಗೂ ವಾರ್ಷಿಕವಾಗಿ TDS ಕಡಿತಗೊಳ್ಳುತ್ತದೆ.
ನಾಮಿನೇ ಫೆಸಿಲಿಟಿ ಕೂಡ ಲಭ್ಯವಿದ್ದು ಒಂದು ವೇಳೆ ಹೂಡಿಕೆದಾರ ಮೃ’ತಪಟ್ಟಲ್ಲಿ ಕಾನನ ಪ್ರಕಾರವಾಗಿ ಸಲ್ಲಬೇಕಾದ ಮೊತ್ತ ನಾಮಿನಿಗೆ ಸಲ್ಲುತ್ತದೆ. ಈ ಯೋಜನೆಯನ್ನು ಖರೀದಿಸಲು ನೀವು ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇಲ್ಲ .ನೆಟ್ ಬ್ಯಾಂಕಿಂಗ್ ಅಥವಾ ಯುನೋ ಬ್ಯಾಂಕಿಂಗ್ ಆಪ್ ಬಳಸುವ ಮೂಲಕ SBI ಬ್ಯಾಂಕಿನ ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡಬಹುದು.
ಇದೇ ರೀತಿ ಅಮೃತ ಕಳಸ್ ಯೋಜನೆ ಎನ್ನುವ ಯೋಜನೆಯನ್ನು 2023-24 ನೇ ಸಾಲಿನಲ್ಲಿ ಕೇಂದ್ರದಲ್ಲಿ ಬಜೆಟ್ ಘೋಷಣೆಯಾದ ನಂತರ ಜಾರಿಗೆ ತರಲಾಗಿದೆ. ಇದು ಮಹಿಳೆಯರಿಗಾಗಿ ಇರುವ ಯೋಜನೆಯಾಗಿದ್ದು 2 ಲಕ್ಷದವರೆಗೆ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.1% ಬಡ್ಡಿದರ ಪಡೆಯುತ್ತಾರೆ, ಹಿರಿಯ ನಾಗರಿಕರಿಗೆ 7.60% ಬಡ್ಡಿದರ ಸಿಗುತ್ತದೆ.
ಉಳಿದ ಯೋಜನೆಗಳಂತೆ ಎಲ್ಲಾ ಕಂಡಿಷನ್ ಗಳು ಕೂಡ ಈ ಯೋಜನೆಗೂ ಅನ್ವಯಿಸುತ್ತದೆ. ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ SBI ಬ್ಯಾಂಕ್ ಖಾತೆ ಶಾಖೆಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.