ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, PM ಕಿಸಾನ್ ಸಮ್ಮಾನ್ ನಿಧಿ 14ನೇ ಕಂತಿನ ಬಿಡುಗಡೆ, ಫಲಾನುಭವಿಗಳ ಪಟ್ಟಿಯಲ್ಲಿ ನೀವು ಇದ್ದೀರಾ ಚೆಕ್ ಮಾಡಿ. ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

 

WhatsApp Group Join Now
Telegram Group Join Now

ರೈತರ ಏಳಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆ ಪೈಕಿ ಮೊದಲ ಬಾರಿಗೆ ರೈತರಿಗೂ ಕೂಡ ಸಹಾಯಧನ ಸಿಗಬೇಕು ಎಂದು ರೈತರನ್ನು ಆರ್ಥಿಕವಾಗಿ ಸಧೃಡಗೊಳಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು (Central government) Pm ಕಿಸಾನ್ ಸಮ್ಮಾನ್ ನಿಧಿ (PM Kisan Samman sceme) ಎನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು.

ಈ ಯೋಜನೆ ಫಲಾನುಭವಿಗಳಾಗಿರುವ ರೈತರಿಗೆ ಒಂದು ಆರ್ಥಿಕ ವರ್ಷದಲ್ಲಿ ಮೂರು ಕಂತುಗಳಂತೆ ನಾಲ್ಕು ತಿಂಗಳ ಅಂತರದಲ್ಲಿ 2000ರೂ. ಸಹಾಯಧನವು ನೇರವಾಗಿ ರೈತನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಇದುವರೆಗೂ 13 ಕಂತುಗಳನ್ನು ದೇಶದ ಅರ್ಹ ರೈತರು ಪಡೆದಿದ್ದಾರೆ, ಇಂದು ಜುಲೈ 22ರ ಬೆಳಗ್ಗೆ 11 ಗಂಟೆ ಸಮಯಕ್ಕೆ 14ನೇ ಕಂತಿನ ಹಣವು ಬಿಡುಗಡೆ ಆಗಲಿದೆ.

ದೇಶದಾದ್ಯಂತ ಇರುವ 8.5 ಕೋಟಿ ಫಲಾನುಭವಿಗಳು ಈ 14ನೇ ಕಂತಿನ ಸಹಾಯಧನವನ್ನು ಪಡೆಯಲಿದ್ದಾರೆ. ನಮ್ಮ ಕರ್ನಾಟಕ ರಾಜ್ಯದ 51 ಲಕ್ಷ ರೈತರುಗಳಿಗೆ ಈ ಬಾರಿ PM ಕಿಸಾನ್ ಸಮ್ಮಾನ್ ನಿಧಿ ಹಣ ಸಿಗುತ್ತಿದೆ. ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಕೊಟ್ಟಿರುವ ದಾಖಲೆಗಳಲ್ಲಿ ಹೊಂದಾಣಿಕೆ ಆಗದೆ ಇರುವುದು, ನಕಲಿ ದಾಖಲೆಗಳನ್ನು ನೀಡಿರುವುದು ಅಥವಾ ಕಾಲಕಾಲಕ್ಕೆ ಯೋಜನೆಗೆ ತಕ್ಕಂತೆ ಸರ್ಕಾರ ಕೇಳುವ ಅಪ್ಡೇಡ್ ಗಳನ್ನು ರೈತರು ಮಾಡಿಸದೆ ಇರುವುದು.

ಈ ಸುದ್ದಿ ತಪ್ಪದೆ ನೋಡಿ;-ಹೈನುಗಾರಿಕೆಗೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂಪಾಯಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

ಇತ್ತೀಚೆಗಷ್ಟೇ ಈ ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ e-kyc ಕಡ್ಡಾಯ ಎಂದು ಹೇಳಿತ್ತು ಅದನ್ನು ಪಾಲಿಸದ ರೈತರು ಈ ಬಾರಿ ಸಹಾಯದಿಂದ ವಂಚಿತರಾಗಿದ್ದಾರೆ. ಒಂದು ವೇಳೆ ನಿಮ್ಮ ಹೆಸರು PM ಕಿಸಾನ್ ಸಮಾನ್ ನಿಧಿ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೋ ಎನ್ನುವ ಗೊಂದಲಗಳಿದ್ದರೆ ಈಗ ನಾವು ಹೇಳುವ ವಿಧಾನದಿಂದ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

● ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಆದ https://pmkisan.gov.in ಗೆ ಭೇಟಿ ಕೊಡಿ.
● ಮುಖಪುಟದ ಬಲಭಾಗದ ಆಯ್ಕೆಗಳಲ್ಲಿ ಕೊನೆಯದರಲ್ಲಿ know your status ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ Registration number ಹಾಗೂ ಅಲ್ಲಿರುವ Captcha code ನಮೂದಿಸಲು ಹೇಳಲಾಗಿರುತ್ತದೆ. ನಿಮಗೆ ನಿಮ್ಮ Registration number ಗೊತ್ತಿದ್ದರೆ ಅದನ್ನು ನಮೂದಿಸಿ Captcha ಹಾಕಿ ಡೈರೆಕ್ಟ್ ಆಗಿ ನಿಮ್ಮ ಸ್ಟೇಟಸ್ ತಿಳಿಯಬಹುದು.

● ಒಂದು ವೇಳೆ Registration number ಗೊತ್ತಿಲ್ಲ ಎಂದರೆ ಅದಕ್ಕೂ ಅವಕಾಶವಿದೆ. know your registration number ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ಫಲಾನುಭವಿಗಳು ತಮ್ಮ ನೋಂದಾಯಿತ mobile number ಹಾಕಿ Captcha ಎಂಟ್ರಿ ಮಾಡಿ ಅದನ್ನು ನಿಮ್ಮ Registration number ತಿಳಿದುಕೊಳ್ಳಬಹುದು.
● ಹಿಂದಿನ ಮೆನುವಿಗೆ ಬಂದು know your status ನಲ್ಲಿ Registration number ಹಾಕಿ ಅಲ್ಲಿರುವ Captcha ಹಾಕಿ ನಿಮ್ಮ ಸ್ಟೇಟಸ್ ಚೆಕ್ ಮಾಡಬಹುದು.

● ಮೊದಲಿಗೆ beneficier Personal details ಬರುತ್ತದೆ. ನಂತರ Eligibility status ಇರುತ್ತದೆ.
ಅದರಲ್ಲಿ land seeding, e-kyc update, adhar seeding to bank account ಈ ಮೂರು ಆಪ್ಷನ್ ಅಲ್ಲೂ ಕೂಡ ಹಸಿರು ಬಣ್ಣದಲ್ಲಿ right mark click ಆಗಿದ್ದರೆ ನೀವು 14ನೇ ಕಂತಿನ ಹಣ ಪಡೆಯುವುದಕ್ಕೂ ಕೂಡ ಅರ್ಹರಾಗಿರುತ್ತೀರಾ ಎಂದು ಅರ್ಥ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now