ಕೇಂದ್ರ ಸರ್ಕಾರವು (Central government) ದೇಶದ ಎಲ್ಲಾ ವರ್ಗಗಳ ಏಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿವರ್ಗಕ್ಕೂ ಅನುಕೂಲವಾಗುವಂತಹ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುತ್ತದೆ. ಈ ಪೈಕಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಭದ್ರ ಭವಿಷ್ಯವನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಭೇಟಿ ಬಚಾವೋ ಭೇಟಿ ಪಡವೋ (Beti bachao, Beti padhao) ಎನ್ನುವ ಧ್ಯೇಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi) ಎನ್ನುವ ಯೋಜನೆಯನ್ನು 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದರು.
ಹೆಣ್ಣು ಮಕ್ಕಳ (girl child) ಹೆಸರಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ತೆರೆದು ಸಣ್ಣ ಉಳಿತಾಯ ಮಾಡುವ ಯೋಜನೆ ಇದಾಗಿದೆ. ಹಿರಿಯ ನಾಗರಿಕರ ಯೋಜನೆಯ ನಂತರ ಅತಿ ಹೆಚ್ಚು ಬಡ್ಡಿದರವನ್ನು ಪಡೆಯುವಂತಹ ಯೋಜನೆ ಎಂದು ಖ್ಯಾತಿಗಳಿಸಿಕೊಂಡಿದೆ. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಅವರ ಹೆಚ್ಚಿನ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹಣ ಬಳಕೆಗೆ ಬರುವಂತೆ ಯೋಜನೆಯನ್ನು ರೂಪಿಸಲಾಗಿದೆ.
ಹೆಂಡತಿ 2ನೇ ಮದುವೆ ಆದ್ರೂ ಕೂಡ ಮೊದಲನೇ ಪತಿ ಜೀವನಾಂಶ ಕೊಡಲೇಬೇಕಾ.?
ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಒಂದು ವೇಳೆ ಎರಡನೇ ಮಗುವಿನ ಜನನದ ವೇಳೆ ಎರಡು ಅವಳಿ ಮಕ್ಕಳಾಗಿದ್ದರೆ ಆ ಕುಟುಂಬದ ಮೂರು ಹೆಣ್ಣು ಮಕ್ಕಳು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹೆಣ್ಣು ಮಗುವಿಗೆ 10 ವರ್ಷ ತುಂಬುವುದರ ಒಳಗೆ ಈ ಯೋಜನೆಗೆ ನೋಂದಣಿ ಮಾಡಿಸಬೇಕಾಗುತ್ತದೆ.
ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆಯಾದರೂ ಈ ಯೋಜನೆಗೆ ಪ್ರೀಮಿಯಂ ಗಳನ್ನು ಪಾವತಿ ಮಾಡುವ ಮೂಲಕ ಯೋಜನೆಯನ್ನು ಜೀವಂತವಾಗಿ ಇಟ್ಟುಕೊಳ್ಳಬಹುದು. ಒಂದು ಆರ್ಥಿಕ ವರ್ಷದಲ್ಲಿ 250ರೂ. ಇಂದ 1,50,000 ವರೆಗೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಗುವಿನ ಖಾತೆಗೆ ಹಣ ತುಂಬಿಸಬಹುದು. ಹೂಡಿಕೆ ಮಾಡಿದ ಹಣದ ಆಧಾರದ ಮೇಲೆ ಭವಿಷ್ಯದಲ್ಲಿ ಮಕ್ಕಳಿಗೆ ಒಂದು ಒಳ್ಳೆಯ ಮೊತ್ತದ ಹಣ ರಿಟರ್ನ್ ಸಿಗುತ್ತದೆ.
ಅಲ್ಲದೆ ಸರ್ಕಾರದ ಯೋಜನೆ ಆಗಿರುವ ಕಾರಣ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಅಷ್ಟೇ ಬದ್ಧತೆಯು ಕೂಡ ಇರುತ್ತದೆ. ಯೋಜನೆ ಮೆಚುರಿಟಿ ಆದ ಬಳಿಕ ಹಿಂಪಡೆಯುವ ಹಣವು ಆದಾಯ ತೆರಿಗೆ 80C ನಿಯಮಗಳಡಿ ಬರುವುದರಿಂದ ತೆರಿಗೆ ವಿನಾಯಿತಿ ಕೂಡ ಇರುತ್ತದೆ. ಇಷ್ಟೆಲ್ಲ ಅನುಕೂಲತೆಗಳಿರುವ ಈ ಯೋಜನೆಯನ್ನು ಖರೀದಿ ಮಾಡಿ 15 ವರ್ಷ ಹೂಡಿಕೆ ಮಾಡಿದರೆ 18ನೇ ವಯಸ್ಸಿನಲ್ಲಿ ಆ ಹೆಣ್ಣುಮಗು 50% ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.
ಮೆಚುರಿಟಿ ಅವಧಿ 21 ವರ್ಷಗಳು ಇರುವುದರಿಂದ ಮಗುವಿಗೆ 21 ವರ್ಷ ತುಂಬಿದ ಬಳಿಕ ಸಂಪೂರ್ಣ ಮೊತ್ತವನ್ನು ಹಿಂಪಡೆದು ಆಕೆ ಆರ್ಥಿಕವಾಗಿ ಸದೃಢಳಾಗಿ ಬದುಕನ್ನು ಕಟ್ಟಿಕೊಳ್ಳಬಹುದು. ದೇಶದಲ್ಲಿ ಕೋಟ್ಯಾಂತರ ಹೆಣ್ಣು ಮಕ್ಕಳ ಪೋಷಕರು ಈ ಯೋಜನೆಗೆ ಹಣ ಹೂಡಿಕೆ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!
ಆದರೆ ಇದೀಗ ಇವರಿಗೆಲ್ಲ ಸರ್ಕಾರದಿಂದ ಹೊಸ ಆದೇಶವನ್ನು ಹೊರಬಿದ್ದಿದೆ ಅದೇನೆಂದರೆ, “ಯೋಜನೆಗೆ ನೋಂದಾಯಿಸಿಕೊಂಡ ಆರು ತಿಂಗಳ ಒಳಗೆ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ನೀಡಬೇಕು ಇಲ್ಲವಾದರೆ ಖಾತೆ ಸ್ಥಗಿತಗೊಳ್ಳುತ್ತದೆ ಎನ್ನುವ ನಿಯಮ ಇದೆ”. ಇಲ್ಲಿ ಮಗುವಿನ ಆಧಾರ್ ಕಾರ್ಡ್ ಹಾಗೂ ಪೋಷಕರೊಬ್ಬರ ಖಾತೆಯಿಂದ ಹಣ ಕಡಿತಗೊಳ್ಳುವುದರಿಂದ ಪೋಷಕರೊಬ್ಬರ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ.
ಇನ್ನು ಯಾರು ಆಧಾರ್ ಕಾರ್ಡ್ ನೀಡಿಲ್ಲ ಅವರು ಈ ಕೂಡಲೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಒಂದು ವೇಳೆ ಪೋಷಕರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿದರು ಕೂಡ ಅದನ್ನು ಸಹ ಸಲ್ಲಿಸಬೇಕು ಹಾಗೆಯೇ ಪಾನ್ ಕಾರ್ಡ್ ಇದ್ದ ಪಕ್ಷದಲ್ಲಿ ಪ್ಯಾನ್ ಕಾರ್ಡ್ ಅನ್ನು ಕೂಡ ನೀಡಬೇಕು ಎಂದು ಸರ್ಕಾರ ತಿಳಿಸಿದೆ.