ಸರ್ಕಾರಿ ಹುದ್ದೆ (governments job) ಪಡೆಯಬೇಕು ಎನ್ನುವುದು ಅನೇಕರು ಕನಸು. ಅದಕ್ಕಾಗಿ ಹಲವಾರು ವರ್ಷಗಳಿಂದ ತರಬೇತಿ ಪಡೆದು ಅಭ್ಯಾಸ ಮಾಡುತ್ತಿರುತ್ತಾರೆ. ಪ್ರತಿ ವರ್ಷವೂ ಕೂಡ ಕೇಂದ್ರ (Central) ಹಾಗೂ ರಾಜ್ಯ (State) ಸರ್ಕಾರಗಳಿಂದ ಸಾವಿರಾರು ಖಾಲಿ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ವರ್ಷವೂ ಕೂಡ ಕೇಂದ್ರ ಸರ್ಕಾರದ ಸಂಸ್ಥೆಯಾದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದೇಶದ ಅನೇಕ ಕಾರ್ಯಲಾಯ ಹಾಗೂ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಶೀಘ್ರಲಿಪಿಗಾರ (Stenographer group C, group D) ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು (notification) ಹೊರಡಿಸಿದೆ. ಅರ್ಹರು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಹುದ್ದೆಗಳ ಕುರಿತು ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹೆಂಡತಿ 2ನೇ ಮದುವೆ ಆದ್ರೂ ಕೂಡ ಮೊದಲನೇ ಪತಿ ಜೀವನಾಂಶ ಕೊಡಲೇಬೇಕಾ.?
ಉದ್ಯೋಗದ ವಿಧ:- ಕೇಂದ್ರ ಸರ್ಕಾರದ ಹುದ್ದೆಗಳು.
ನೇಮಕಾತಿ ಸಂಸ್ಥೆ:- ಸ್ಟಾಪ್ ಸೆಲೆಕ್ಷನ್ ಕಮಿಷನ್.
ಒಟ್ಟು ಹುದ್ದೆಗಳ ಸಂಖ್ಯೆ:- 1207.
ಹುದ್ದೆಗಳ ವಿವರ:-
● ಶೀಘ್ರಲಿಪಿಗಾರ (ಗ್ರೂಪ್ ಸಿ) – 93
●”ಶೀಘ್ರಲಿಪಿಗಾರ (ಗ್ರೂಪ್ ಡಿ) – 1114.
ಉದ್ಯೋಗ ಸ್ಥಳ:- ಭಾರತದಾದ್ಯಂತ.
ವೇತನ ಶ್ರೇಣಿ:-
● ಶೀಘ್ರಲಿಪಿಗಾರ (ಗ್ರೂಪ್ ಸಿ) – 9,300 ರಿಂದ 34,800
● ಶೀಘ್ರಲಿಪಿಗಾರ (ಗ್ರೂಪ್ ಡಿ) – 5,200 ರಿಂದ 20,200
ಶೈಕ್ಷಣಿಕ ವಿದ್ಯಾರ್ಹತೆ:-
● ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
● ಶೀಘ್ರಲಿಪಿಗಾರರ ತರಬೇತಿ ಪಡೆದು ಉತ್ತೀರ್ಣರಾಗಿ ಸರ್ಟಿಫಿಕೇಟ್ ಹೊಂದಿರಬೇಕು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
● ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು.
● ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC / ST ಅಭ್ಯರ್ಥಿಗಳಿಗೆ 5 ವರ್ಷಗಳು
●”PWD ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಶುಲ್ಕ:-
● SC/ST , PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ.
● ಉಳಿದ ಅಭ್ಯರ್ಥಿಗಳಿಗೆ 100ರೂ.
ಅರ್ಜಿ ಸಲ್ಲಿಸುವ ವಿಧಾನ:-
● ssc.nic.in ವೆಬ್ಸೈಟ್ಗೆ ಭೇಟಿ ಕೊಡಬೇಕು.
● ssc.nic.in Steno Application 2023 ಅರ್ಜಿ ಫಾರ್ಮ್ ನಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ಕೂಡ ಸರಿಯಾಗಿ ಭರ್ತಿ ಮಾಡಬೇಕು.
● ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅದು ಶುಲ್ಕ ಪಾವತಿ ಮಾಡಿದ ನಂತರ ಅರ್ಜಿ ಸಲ್ಲಿಕೆ ಪೂರ್ತಿ ಆಗುತ್ತದೆ.
● ಅರ್ಜಿ ಶುಲ್ಕ ಪಾವತಿ ಮಾಡಿ e-reciept ಪಡೆದುಕೊಳ್ಳಬೇಕು ಹಾಗೂ ಅರ್ಜಿ ಸಲ್ಲಿಸಿರುವ Ref. num. ಬರೆದಿಟ್ಟುಕೊಂಡು, ಅರ್ಜಿ ಸಲ್ಲಿಸಿರುವ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬೇಕು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸ್ಕಿಲ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ.
ಬೇಕಾಗುವ ಪ್ರಮುಖ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮಾನ್ಯವಾಗಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ನಿವಾಸ ದೃಢೀಕರಣ ಪತ್ರ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 02 ಆಗಸ್ಟ್, 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಆಗಸ್ಟ್, 2023
● ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ – 28 ಆಗಸ್ಟ್, 2023
● ಪರೀಕ್ಷೆ ನಡೆಯುವ ದಿನಾಂಕ – 12 & 13 ಆಗಸ್ಟ್, 2023.
ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!