ವಾಂತಿ ಮಾಡುವ ಅಭ್ಯಾಸವನ್ನು ಜೀವನದಿಂದ ಸಂಪೂರ್ಣವಾಗಿ ತೊಲಗಿಸಬೇಕು ಅಂದರೆ ಈ ಮನೆಮದ್ದು ಒಮ್ಮೆ ಬಳಸಿ ನೋಡಿ, ನಿಜಕ್ಕೂ ಆಶ್ಚರ್ಯ ಪಡ್ತಿರಾ ಅಷ್ಟು ಅಧ್ಬುತವಾಗಿ ಕೆಲಸ ಮಾಡುತ್ತೆ ಈ ಚಮತ್ಕಾರಿ ಮನೆಮದ್ದು
ಮಕ್ಕಳು ಮತ್ತು ದೊಡ್ಡವರಲ್ಲಿ ವಾಂತಿ ಆಗುವುದು ಸಾಮಾನ್ಯ. ಹಲವಾರು ಕಾರಣಗಳಿಂದ ಮನುಷ್ಯರು ವಾಂತಿ ಮಾಡಿಕೊಳ್ಳುತ್ತಾರೆ. ನಾವು ದೂರದ ತಿರುವುಗಳು ಇರುವ ಪ್ರಯಾಣ ಮಾಡಿದಾಗ, ನಮ್ಮ ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಇನ್ಫೆಕ್ಷನ್ ಆದಾಗ, ನಮಗೆ ಇಷ್ಟವಾಗದ ಆಹಾರ ಸೇವಿಸಿದಾಗ, ಅಥವಾ ವಿರುದ್ಧ ಕಾಂಬಿನೇಶನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ಅಜೀರ್ಣ ಆದಾಗ, ಡೈರಿಯ ಮುಂತಾದ ಖಾಯಿಲೆಗಳ ಸೋಂಕು ಉಂಟಾದಾಗ, ವಿಪರೀತವಾದ ವೈರಲ್ ಫೀವರ್ ಗಳು ಬಂದಾಗ, ಯಾವುದಾದರೂ ಕೆಟ್ಟವಾಸನೆ ಬಿದ್ದಾಗ, ಯಾವುದಾದರೂ ಕೆಟ್ಟ ಪದಾರ್ಥದ ಟೆಸ್ಟ್ ಮಾಡಿದಾಗ, ಹಲಸಿ ಹೋಗಿರುವ ಆಹಾರಗಳನ್ನು ತಿಂದಾಗ, ಪಿತ್ತ ಹೆಚ್ಚಾದಾಗ ಮತ್ತು ಗ್ಯಾಸ್ಟಿಕ್ ಸಮಸ್ಯೆಯಿಂದ ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಆಗುವ ಹಾರ್ಮೋನ್ಸ್ ವೇರಿಯೇಶನ್ ಇಂದಾಗಿ ಈ ರೀತಿ ಹತ್ತು ಹಲವು ಕಾರಣಗಳಿಂದ ವಾಂತಿ ಆಗುತ್ತದೆ. ಚಿಕ್ಕ ಮಕ್ಕಳಿಗಂತೂ ಯಾವಾಗಲೂ ಈ ರೀತಿ ವಾಂತಿ ಆಗುತ್ತಲೇ ಇರುತ್ತದೆ.
ಈ ರೀತಿ ವಾಂತಿಯಾದಾಗ ಅದು ತಕ್ಷಣ ನಿಲ್ಲುವುದಿಲ್ಲ. ಅದನ್ನು ನಿಲ್ಲಿಸಲು ಸಾಧ್ಯವಾಗದೆ ವಾಂತಿ ಜಾಸ್ತಿಯಾದಾಗ ಗಂಟಲು ಉರಿ ಬರುತ್ತದೆ. ಮತ್ತು ಇನ್ನೂ ಹೆಚ್ಚಾಗಿ ವಾಂತಿಯಾದಾಗ ದೇಹದ ನೀರಿನ ಅಂಶವೆಲ್ಲ ಅದರಲ್ಲೇ ಹೊರಟು ಹೋಗಿ ದೇಹವು ನಿರ್ಜಲೀಕರಣ ಗೊಳ್ಳುತ್ತದೆ ವಾಂತಿ ಮಾಡುವವರು ತುಂಬಾ ಸುಸ್ತಾಗಿ ಬಿಡುತ್ತಾರೆ. ಇದರ ಜೊತೆಜೊತೆಗೆ ತಲೆಸುತ್ತುವುದು ನಿಶಕ್ತಿ ಆಗುವುದು ಇವೆಲ್ಲಾ ಆಗುತ್ತಿರುತ್ತದೆ. ಕೆಲವರಿಗೆ ಹೊಟ್ಟೆಯಲ್ಲಿರುವ ಪೂರ್ತಿ ಆಹಾರ ಆಚೆ ಬರುವತನಕ ಈ ವಾಂತಿಯಾಗುವುದು ನಿಲ್ಲುವುದಿಲ್ಲ. ಹೊಟ್ಟೆಯಲ್ಲಿ ನೀರು ಇದ್ದರೂ ಸಹ ಅದು ಕೂಡ ವಾಂತಿಯಾಗಿ ಆಚೆ ಬರುತ್ತಾ ಇರುತ್ತದೆ. ಕೊನೆಗೆ ರಕ್ತವು ಸಹ ವಾಂತಿಯ ಜೊತೆ ಕಾಣಿಸಿಕೊಳ್ಳುವ ಹಂತವನ್ನು ತಲುಪುತ್ತದೆ. ಇಂತಹ ಸಮಯಗಳಲ್ಲಿ ವಾಂತಿಯನ್ನು ನಿಲ್ಲಿಸುವುದು ಬಹಳ ಕಷ್ಟ. ಆದರೆ ಅದನ್ನು ನಿಲ್ಲಿಸದೇ ಹೋದರೆ ವ್ಯಕ್ತಿ ಸುಸ್ತಾಗಿ ಬಿದ್ದು ಹೋಗಬಹುದು. ಹಾಗಾಗಿ ತಕ್ಷಣಕ್ಕೆ ಆ ಸಮಯದಲ್ಲಿ ಮನೆಮದ್ದು ಮಾಡಿ ವಾಂತಿಯನ್ನು ನಿಲ್ಲಿಸಲೇಬೇಕು.
ವಾಂತಿಯ ಸಮಸ್ಯೆಯು ಅತಿಯಾಗಿ ಆಗುತ್ತಿದ್ದರೆ ಖಂಡಿತವಾಗಿ ಆಸ್ಪತ್ರೆಗೆ ಹೋಗುವುದು ಒಳ್ಳೆಯದು. ಆದರೆ ಅದಕ್ಕಿಂತ ಮುಂಚೆ ವಾಂತಿಯನ್ನು ನಿಲ್ಲಿಸುವ ಸಲುವಾಗಿ ಕೆಲವೊಂದು ಮನೆಮದ್ದನ್ನು ಸಹ ಪ್ರಯೋಗ ಮಾಡಬಹುದು. ಆಗಿನ ಕಾಲದಲ್ಲಿ ನಮ್ಮ ಹಿರಿಯರು ಈ ರೀತಿಯಾಗಿ ವಾಂತಿಯ ಸಮಸ್ಯೆ ಉಂಟಾದಾಗ ಅದಕ್ಕೆ ಮನೆಯಲ್ಲಿಯೇ ಔಷಧಿಗಳನ್ನು ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಆಗ ಜನ ಹೆಚ್ಚಾಗಿ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದರು ಮತ್ತು ಎಲ್ಲಾ ಹಳ್ಳಿಗಳಲ್ಲಿ ಕೂಡ ಆಸ್ಪತ್ರೆ ಹಾಗೂ ವೈದ್ಯರ ವ್ಯವಸ್ಥೆ ಇರುತ್ತಿರಲಿಲ್ಲ. ಇದಕ್ಕಾಗಿ ನಾಟಿವೈದ್ಯರು ಗಳ ಮೊರೆ ಹೋಗುತ್ತಿದ್ದರು. ಅಥವಾ ಮನೆಯಲ್ಲಿಯ ಹಿರಿಯರೇ ತಮಗೆ ತಿಳಿದಿರುವ ಮನೆಮದ್ದನ್ನು ಮಾಡಿಕೊಡುತ್ತಿದ್ದರು. ಇದರಿಂದ ತಕ್ಷಣ ಸಮಸ್ಯೆ ನಿವಾರಣೆಯಾಗಿ ವ್ಯಕ್ತಿ ಸುಧಾರಿಸಿಕೊಳ್ಳುತ್ತಿದ್ದರು. ಈಗಲೂ ಸಹ ಇಂತಹ ಮನೆಮದ್ದುಗಳನ್ನು ನಾವು ಮಾಡಿಕೊಂಡು ಉಪಯೋಗಿಸಿ ಯಾವುದೇ ಸಮಸ್ಯೆ ಇಲ್ಲದೆ ಆಸ್ಪತ್ರೆಗೂ ಹೋಗದೆ ರಿಲೀಫ್ ಆಗಬಹುದು.
ವಾಂತಿಯನ್ನು ನಿಲ್ಲಿಸುವ ಸಲುವಾಗಿ ಹಲವಾರು ರೀತಿಯ ಮನೆಮದ್ದುಗಳನ್ನು ಹಿರಿಯರು ಹೇಳಿದ್ದಾರೆ. ಈ ರೀತಿಯ ಮನೆಮದ್ದುಗಳನ್ನು ಮಾಡುವುದು ತುಂಬಾ ಸುಲಭ ಹಾಗೂ ಖರ್ಚು ಕೂಡ ಕಡಿಮೆ. ಆರೋಗ್ಯಕ್ಕೆ ಯಾವುದೇ ಸೈಡ್ ಎಫೆಕ್ಟ್ ಕೂಡ ಇದರಿಂದ ಇರುವುದಿಲ್ಲ. ಯಾವುದೇ ಆಸ್ಪತ್ರೆ ಅಥವಾ ನಾಟಿ ವೈದ್ಯರ ಬಳಿ ಹೋಗದೆ ಕೂಡ ಮನೆಯಲ್ಲಿ ಇದನ್ನು ಮಾಡಿಕೊಳ್ಳಬಹುದು. ಮನೆಮದ್ದು ಮಾಡುವಾಗ ವಾಂತಿಯ ಸಮಸ್ಯೆಯನ್ನು ನಿವಾರಿಸುವಲ್ಲಿ ಏಲಕ್ಕಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಮಸಾಲೆ ಪದಾರ್ಥಗಳಲ್ಲಿ ಒಂದಾದ ಏಲಕ್ಕಿಯನ್ನು ಅಡಿಗೆ ಮಾಡುವುದಕ್ಕೆ ಬಳಸುತ್ತಾರೆ. ವಿಶೇಷವೆಂದರೆ ಇದನ್ನು ಮಸಾಲೆಯುಕ್ತ ಅಡುಗೆ ಪದಾರ್ಥ ಮಾಡುವಾಗ ಹಾಗೂ ಸಿಹಿ ಪದಾರ್ಥ ಮಾಡುವಾಗ ಎರಡು ಸಮಯ ಗಳಲ್ಲೂ ಕೂಡ ಬಳಸುತ್ತಾರೆ.ಇದು ಆಹಾರಕ್ಕೆ ಮಾತ್ರವಲ್ಲದೆ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಏಲಕ್ಕಿಯಲ್ಲಿರುವ ಉತ್ತಮವಾದ ಔಷಧೀಯ ಗುಣಗಳು ಹಲವಾರು ಕಾಯಿಲೆಗಳನ್ನು ಗುಣ ಮಾಡುತ್ತದೆ.
ಏಲಕ್ಕಿಯನ್ನು ಅಜೀರ್ಣವಾದಾಗ ನಾವು ತಿಂದ ಆಹಾರ ಜೀರ್ಣವಾಗುವಂತೆ ಮಾಡಲು ಏಲಕ್ಕಿಯನ್ನು ತಿನ್ನುತ್ತಾರೆ. ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮವಾದ ಔಷಧಿ. ಹಾಗೆಯೇ ವಾಂತಿ ಆಗುವುದು ನಿಲ್ಲಬೇಕು ಎಂದರೆ ಆಗಲೂ ಸಹ ಎರಡು ಏಲಕ್ಕಿಯನ್ನು ತೆಗೆದುಕೊಂಡು 200 ಮಿಲಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಶೋಧಿಸಿ ಕುಡಿಯಲು ಕೊಡಬೇಕು. ಈ ರೀತಿ ಏಲಕ್ಕಿ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಯಾವುದೇ ಕಾರಣದಿಂದ ವಾಂತಿ ಬರುತ್ತಿದ್ದರು ಕೂಡ ಅದು ತಕ್ಷಣವೇ ನಿಲ್ಲುತ್ತದೆ. ಆದರೆ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಎರಡು ಸ್ಪೂನ್ ಗಳಷ್ಟು ಮಾತ್ರ ಕುಡಿಸಬೇಕು.