ಇತ್ತೀಚಿನ ದಿನಗಳಲ್ಲಿ ಜನ ಜೀವನ ಶೈಲಿಯಿಂದಾಗಿ, ಒತ್ತಡದಿಂದಾಗಿ, ಆಹಾರ ಪದ್ದತಿ ಇಂದಾಗಿ ಆರೋಗ್ಯದ ಸಮಸ್ಯೆಯು ಕೂಡ ಹೆಚ್ಚಾಗುತ್ತಿದೆ. ಅದರಲ್ಲಿಯೂ ಪ್ರಸ್ತುತ ಅಸಿಡಿಟಿ ತೊಂದರೆಯು ಪ್ರತಿ ಒಬ್ಬರಲ್ಲು ಕಂಡು ಬರುತ್ತಿದೆ. ಈ ಅಸಿಡಿಟಿಯು ಹೆಚ್ಚಾಗಿ ಅಂದರೆ ಹೈಪರ್ ಅಸಿಡಿಟಿ ಆಗಿ ಹೆಚ್ಚಿನ ತೇಗು ಬರುತ್ತದೆ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಸೆಕ್ರೆಟ್ ಆಗಬೇಕು ಆದರೆ ಹೆಚ್ಚಿನ ಆ್ಯಂಟಿ ಆಸಿಡ್ ಔಷಧಿಗಳನ್ನು ತೆಗೆದು ಕೊಳ್ಳುವುದರಿಂದ ಹೈಡ್ರೊ ಕ್ಲೋರಿಕ್ ಆಮ್ಲ ಕಡಿಮೆ ಸೆಕ್ರೆಟ್ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅಜೀರ್ಣ ಉಂಟಾಗಿ ತೇಗು ಬರುತ್ತದೆ. ಈ ಅಸಿಟಿಡಿಗೇ ಕಾರಣ ಏನು ಇದು ಹೇಗೆ ಆಗುತ್ತದೆ ಹಾಗೂ ಇದನ್ನು ಹೇಗೆ ಕಂಟ್ರೋಲ್ ಮಾಡಬಹುದು ಎಂದು ಇಲ್ಲಿ ತಿಳಿಸಲಾಗಿದೆ.
ನಮ್ಮ ದೇಹದಲ್ಲಿ ನಾವು ತಿಂದ ಆಹಾರವನ್ನು ಜೀರ್ಣಿಸಲು ಹೈಡ್ರೋ ಕ್ಲೋರಿಕ್ ಆಮ್ಲ ನಮ್ಮ ಹೊಟ್ಟೆಯಲ್ಲಿ ಇರುವುದು ಮುಖ್ಯ ವಾಗಿರುತ್ತದೆ. ಅಸಿಡಿಟಿ ಬಂದಾಗ ಆ್ಯಂಟಿ ಅಸಿಟಿಡಿ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ ಅದು ಎರಡು ಮೂರು ವಾರಗಳ ಕಾಲ ಶಮನವಾಗುತ್ತದೆ ಆದರೆ ನಂತರ ಈ ಮೆಡಿಸಿನ್ ಇಂದ ಹೊಟ್ಟೆಯಲ್ಲಿ ಹೈಡ್ರೋ ಕ್ಲೋರಿಕ್ ಆಮ್ಲ ಉತ್ಪತ್ತಿ ಕಡಿಮೆ ಆಗಿ ಅದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದೆ ಇಲ್ಲ. ಇದರಿಂದ ಉಂಟಾಗುವ ಅಸಿಡಿಟಿ ಅನ್ನು ಹೈಪರ್ ಅಸಿಡಿಟಿ ಎನ್ನಲಾಗುತ್ತದೆ. ಈ ಅಸಿಡಿಟಿ ಇದ್ದಲ್ಲಿ , ತೇಗು ಬರುವುದು ವಾಂತಿ ಆಗುವುದು ಇದೆಲ್ಲ ಹೈಪೋ ಅಸಿಡಿಟಿಯ ಗುಣ ಲಕ್ಷಣಗಳಾಗಿ ಇವೆ. ಎರಡನೆಯದಾಗಿ ನಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಹೆಚ್ಚಿನ ಪ್ರೋಟೀನ್ ಅಂಶ ಇರುವ ಆಹಾರವನ್ನು ಸೇವಿಸುತ್ತಿಲ್ಲವಾದರೆ ಹೈಪೋ ಅಸಿಡಿಟಿ ಉಂಟಾಗುತ್ತದೆ. ಏಕೆಂದರೆ ಹೊಟ್ಟೆಯಲ್ಲಿ ಹೈಡ್ರೋ ಕ್ಲೋರಿಕ್ ಆಮ್ಲ ಉತ್ಪತ್ತಿ ಆಗಬೇಕು ಅಂದರೆ ಈ ಪ್ರೋಟೀನ್ ನ ಅವಶ್ಯಕತೆ ತುಂಬಾ ಇದೆ.
ಹೊಟ್ಟೆಯಲ್ಲಿ ಹೈಡ್ರೋ ಕ್ಲೋರಿಕ್ ಆಮ್ಲ ಕಡಿಮೆ ಆದರೆ ಹೈಪೋ ಅಸಿಡಿಟಿ ಉಂಟಾಗುತ್ತದೆ, ಹಾಗೆಯೇ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಹೆಚ್ಚಾದರೆ ಹೈಪರ್ ಅಸಿಡಿಟಿ ಉಂಟಾಗುತ್ತದೆ. ಈ ಎರಡು ಅಸಿಡಿಟಿಗಳ ಗುಣ ಲಕ್ಷಣಗಳು ಒಂದೇ ಆಗಿವೆ ಆದರೂ ಹೈಪೋ ಅಸಿಡಿಟಿ ಇರುವವರಿಗೆ ಎದೆ ಉರಿ ಇರುವುದಿಲ್ಲ ಹಾಗೂ ಹೈಪೋ ಅಸಿಡಿಟಿ ಅನ್ನು ಎರಡು ರೀರಿಯಲ್ಲಿ ಕಂಡುಹಿಡಿಯ ಬಹುದು. ಅದರಲ್ಲಿ ಮೊದಲನೆಯದು ಬೇಕಿಂಗ್ ಸೋಡ ಟೆಸ್ಟ್ ಎಂಬುದು ಇದೆ. ಅದನ್ನು ಮಾಡುವ ವಿಧಾನ 100 ಎಂ ಎಲ್ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಅದಕ್ಕೆ ಕಾಲು ಸ್ಪೂನ್ ಬೇಕಿಂಗ್ ಸೋಡವನ್ನು ಹಾಕಿ ಮಿಕ್ಸ್ ಮಾಡಿ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಕುಡಿದ ನಂತರ ಮೊದಲಿಗೆ ತೇಗು ಯಾವ ಸಮಯದಲ್ಲಿ ಬರುತ್ತದೆ ಎಂಬುದನ್ನು ಗಮನಿಸಬೇಕು, 2 ರಿಂದ 3 ನಿಮಿಷಗಳಲ್ಲಿ ತೇಗು ಬಂದರೆ ನಿಮ್ಮ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿ ಸರಿ ಇದೆ ಎಂದು ಅರ್ಥ ಅಥವಾ 10 ರಿಂದ 15 ನಿಮಿಷಗಳ ನಂತರ ಮೊದಲ ಬಾರಿಗೆ ತೇಗು ಬರುತ್ತದೆ ಅಂದರೆ ನಿಮ್ಮ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿ ತುಂಬಾ ಕಡಿಮೆ ಇದೆ ಎಂದು ಅರ್ಥ.
ಈ ಹೈಪೋ ಅಸಿಡಿಟಿ ಗೆ ಪರಿಹಾರ ಅಂದರೆ ಆಸಿಡ್ ಉತ್ಪತ್ತಿಯನ್ನು ಜಾಸ್ತಿ ಮಾಡಿಕೊಳ್ಳುವುದು. ಇದಕ್ಕೆ ಮುಖ್ಯವಾಗಿ ಎಲ್ಲ ಕಡೆ ಸಿಗುವ ಆ್ಯಪಲ್ ಸೈಡರ್ ವಿನೆಗರ್ ಬೇಕಾಗುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಮಿಕ್ಸ್ ಮಾಡಿ ಆಹಾರ ಸೇವಿಸುವ 10-15 ನಿಮಿಷಗಳ ಮುಂಚಿತವಾಗಿ ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸುತ್ತಿರೋ ಅಷ್ಟು ಬಾರಿಯು ಅದನ್ನು ನೇರವಾಗಿ ಗಂಟಲಿಗೆ ಹಾಕಿ ಕುಡಿಯಬೇಕು. ಹಲ್ಲುಗಳಿಗೆ ಆ್ಯಪಲ್ ಸೈಡರ್ ವಿನೆಗರ್ ಸೋಕಿದರೆ ಹಲ್ಲಿನ ತೊಂದರೆ ಉಂಟಾಗುತ್ತದೆ. ಆದ್ದರಿಂದ ನೇರವಾಗಿ ಗಂಟಲಿಗೆ ಹಾಕಬೇಕು ಇಲ್ಲವಾದಲ್ಲಿ ಆ್ಯಪಲ್ ಸೈಡರ್ ವಿನೆಗರ್ ನ ಮಾತ್ರೆಗಳು ಸಿಗುತ್ತವೆ ಅದನ್ನಾದರು ತೆಗೆದುಕೊಳ್ಳಬಹುದು, . ಅಥವಾ ಆಯುರ್ವೇದದಲ್ಲಿ ಚಿತ್ರ ಕಾತಿ ಒಟಿ ಎಂದು ಸಿಗುತ್ತದೆ ಅದನ್ನು ದಿನದ ಮೂರು ಬಾರಿಯು ಎರಡೆರಡು ಮಾತ್ರೆಗಳನ್ನು ಆಹಾರ ಸೇವಿಸುವುದಕ್ಕಿಂತ ಮುಂಚೆ ತೆಗೆದುಕೊಳ್ಳುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಹೈಪೋ ಅಸಿಡಿಟಿ ಗುಣವಾಗುತ್ತದೆ. ಈ ಹೈಪೋ ಅಸಿಡಿಟಿ ತೊಂದರೆಗಳು ಇದ್ದಲ್ಲಿ ಜೀವನ ಶೈಲಿಯನ್ನು, ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು, ಟೆನ್ಷನ್ ಕಡಿಮೆ ಮಾಡಿಕೊಳ್ಳಬೇಕು, ಯೋಗ, ಧ್ಯಾನಗಳನ್ನು ಮಾಡುವುದರ ಜೊತೆಗೆ ಆ್ಯಪಲ್ ಸೈಡರ್ ವಿನೆಗರ್ ಅಥವಾ ಚಿತ್ರ ಕಾತಿ ಒಟಿಯನ್ನು ದಿನಕ್ಕೆ ಮೂರು ಬಾರಿ ಸೇವಿಸುತ್ತಾ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುವ ಹೈಪೋ ಅಸಿಡಿಟಿಅನ್ನು ಕಡಿಮೆ ಮಾಡಿಕೊಳ್ಳಬಹುದು.