ಬಡತನ ರೇಖೆಗಿಂತ ಕೆಳಗಿರುವ (Below poverty line) ಕುಟುಂಬಗಳು ಪಡೆಯುವ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅನೇಕರು ಸರ್ಕಾರಕ್ಕೆ ವಂಚಿಸಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ ರೇಷನ್ ಕಾರ್ಡ್ (ration card) ಪಡೆದು ಬಡವರ ಸವಲತ್ತುಗಳನ್ನು ದೋಚುತ್ತಿದ್ದಾರೆ.
ಉಚಿತ ಪಡಿತರ ಮಾತ್ರವಲ್ಲದೆ ಇನ್ನು ಅನೇಕ ಸೇವೆಗಳು ಈ ಮೂಲಕ ಉಳ್ಳವರ ಪಾಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಾದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇದೇ ಕಾರಣಕ್ಕಾಗಿ ರೇಷನ್ ಕಾರ್ಡಿಗೆ E-kyc ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿತ್ತು. ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು E-kyc ಎಂದು ಕರೆಯಲಾಗುತ್ತದೆ.
ಹಸು ಎಮ್ಮೆ ಖರೀದಿಗೆ ಬಡ್ಡಿ ಇಲ್ಲದೆ 50,000 ಸಾಲ, ಹಾಲು ಒಕ್ಕೂಟ ಸಂಘದಿಂದ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!
ಈ ಕ್ರಮದ ಮೂಲಕ ಪಡಿತರ ಚೀಟಿಯಲ್ಲಿ ಇರುವ ಸದಸ್ಯರ ನಿರ್ದಿಷ್ಟ ಮಾಹಿತಿಯನ್ನು ಕಲೆಹಾಕಲು ಸರ್ಕಾರ ಮುಂದಾಗಿತ್ತು. ಹಲವು ಬಾರಿ ಇದಕ್ಕೆ ಕಾಲಾವಕಾಶ ಮುಂದೂಡಿದರು ಇನ್ನು ಸಹ ನೂರಕ್ಕೆ ನೂರರಷ್ಟು ಈ ಕಾರ್ಯ ಪೂರ್ತಿಗೊಂಡಿಲ್ಲ. ಈಗ ಅಂತಿಮವಾಗಿ ಆಗಸ್ಟ್ 31ರ ಒಳಗೆ ಕಡ್ಡಾಯವಾಗಿ ಎಲ್ಲರೂ ಕೂಡ ರೇಷನ್ ಕಾರ್ಡ್ E-kyc ಮಾಡಿಸಬೇಕು.
ಒಂದು ವೇಳೆ ಇದನ್ನು ತಪ್ಪಿಸಿದರೆ ಸೆಪ್ಟೆಂಬರ್ ತಿಂಗಳಿಂದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಉಚಿತ ಪಡಿತರ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ (food and civil supply department) ಆದೇಶ ಹೊರಡಿಸಿದೆ. ದಿನಾಂಕ 11.08.2023 ನಡೆದ ಸಭೆಯಲ್ಲಿ ಈ ಸಂಬಂಧ ನ್ಯಾಯಬೆಲೆ ಅಂಗಡಿಗಳಿಗೆ ಕೆಲ ಸೂಚನೆ ಕೂಡ ಕೊಟ್ಟಿದೆ.
ವೋಟರ್ ಐಡಿಗೆ ಹೊಸ ವೆಬ್ಸೈಟ್ ಪ್ರಾರಂಭ, ಬದಲಾದ ಹೊಸ ವಿಧಾನದ ಪ್ರಕಾರ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
31.08.2023ರ ಒಳಗೆ E-kyc ಪೂರ್ಣಗೊಳಿಸುವಂತೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಜಿಲ್ಲೆಗಳ ಜಂಟಿ/ಉಪನಿರ್ದೇಶಕರು E-kyc ಆಗಿರದ ಪಡಿತರ ಚೀಟಿದಾರರ ಹೆಸರನ್ನು ನ್ಯಾಯಬೆಲೆ ಅಂಗಡಿ ಮುಂದೆ ಪ್ರದರ್ಶಿಸಬೇಕು.
ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿಯಲ್ಲಿ ಬೆರಳಚ್ಚು ಪಡೆಯಲು ಆಗದೆ ಇರುವ ಪಡಿತರ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಅಮಾನತ್ತು ಪಡಿಸದೆ ಸದರಿ ಫಲಾನುಭವಿಗಳಿಂದ ಪುನಃ ಬೆರಳಚ್ಚು ಪಡೆಯಲು ಪ್ರಯತ್ನಿಸತಬೇಕು, ಇಲ್ಲದಿದ್ದಲ್ಲಿ IRIS ತಂತ್ರಾಂಶವನ್ನು ಆಹಾರ ತಂತ್ರಾಂಶದೊಂದಿಗೆ ಜೋಡನೆಯಾಗುವವರೆಗೆ ಕಾಯಕಬೇಕು ಎಂದು ಸೂಚನೆ ನೀಡಲಾಗಿದೆ.
E-kyc ಮಾಡಿಸುವ ವಿಧಾನ:-
● ಆಫ್ಲೈನ್ ಮೂಲಕ E-kyc ಮಾಡಿಸಲು ನಿಮ್ಮ ನ್ಯಾಯ ಬೆಲೆ ಅಂಗಡಿಗೆ ದಾಖಲೆಗಳ ಜೊತೆ ಭೇಟಿ ಕೊಡಿ. ನ್ಯಾಯಬೆಲೆ ಅಂಗಡಿಯಲ್ಲಿ ನೀವು ಬ್ಯಾಂಕ್ ಖಾತೆಗೆ ಆಧಾರ್ ಕೂಡ ಲಿಂಕ್ ಮಾಡಿಸಿಕೊಳ್ಳಬಹುದು.
1. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
2. ಕುಟುಂಬದ ಸದಸ್ಯರ ಭಾವಚಿತ್ರ
3. ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್
4. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದಾದರೆ ಪಾಸ್ ಬುಕ್ ವಿವರ.
● ನೇರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು UID Linking for RC Members ಆಪ್ಷನ್ ಮೇಲೆ ಕ್ಲಿಕ್ ಮಾಡಿ Aadhar no. ಎನ್ನುವುದನ್ನು ಟಿಕ್ ಮಾಡಿ Aadhar number entry ಮಾಡಿ GO ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ OTP ಬರ್ತದೆ ಅದನ್ನು ಸಬ್ಮಿಟ್ ಮಾಡಿದರೆ E-kyc ಕಂಪ್ಲೀಟ್ ಆಗಿ ಇದರ ಸಂಬಂಧಿತ SMS ಕೂಡ ಬರುತ್ತದೆ.