ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ (Gruhalakshmi Scheme) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪಡಿತರ ಚೀಟಿ (ration card) ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಗೆ (head of the family) ಪ್ರತಿ ತಿಂಗಳು ಕೂಡ 2000 ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಜುಲೈ 19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪೈಕಿ ಲಕ್ಷಾಂತರ ಮಹಿಳೆಯರು ಮೊದಲ ಕಂತಿನ 2000ರೂ. ಸಹಾಯಧನವನ್ನು ಪಡೆದಿದ್ದಾರೆ. ಅವರೆಲ್ಲರೂ ಕೂಡ ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುವ ತಯಾರಿಯಲ್ಲಿ ಇದ್ದಾರೆ. ಆದರೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಬಹುತೇಕ ಫಲಾನುಭವಿಗಳು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗಿಲ್ಲ ಇದರಿಂದ ಬಹಳಷ್ಟು ಗೊಂದಲದಲ್ಲಿದ್ದಾರೆ.
ಅವರಿಗೆಲ್ಲ ಯೋಜನೆ ಕುರಿತು ಕೆಲ ಮಾಹಿತಿ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಮೂರು ಕಾರಣಗಳಿಂದ ನೀವು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯಲು ಸಾಧ್ಯವಾಗದೇ ಇರಬಹುದು. ಅದೇನೆಂದರೆ, ನೀವು ಅರ್ಜಿ ಸಲ್ಲಿಸಲು ಹೋಗಿದ್ದರೂ ಕೂಡ ತಾಂತ್ರಿಕ ಅಡಚಣೆಗಳಾಗಿ ನಿಮ್ಮ ಅರ್ಜಿ ಸಲ್ಲಿಕೆ ಆಗಿಲ್ಲದೆ ಇರಬಹುದು.
● ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿ ಆಗಿದ್ದರೆ ನೀವು ಮಂಜೂರಾತಿ ಪತ್ರವನ್ನು ಪಡೆದಿರುತ್ತೀರಿ ಕೆಲವು ಅರ್ಜಿ ಸಲ್ಲಿಕೆ ಯಶಸ್ವಿಯಾಗಿದ್ದರು ಮಂಜುರಾತಿ ಪತ್ರವನ್ನು ನೀಡಿಲ್ಲ ಅವರು 8147500500 ಈ ಸಂಖ್ಯೆಗೆ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಕಳುಹಿಸುವ ಮೂಲಕ ತಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಏನಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎನ್ನುವ ಅಥವಾ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಕೂಡಲೇ ಹತ್ತಿರದ ಸೇವಾಕೇಂದ್ರ ಸಂಪರ್ಕಿಸಿ ಎನ್ನುವ ರೀತಿಯ SMS ಸರ್ಕಾರದಿಂದ ಬರುತ್ತದೆ.
● ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು ಅದರಲ್ಲೂ ಮುಖ್ಯವಾಗಿ ಹೆಸರಿನಲ್ಲಿ ದೋಷಗಳಾಗಿದ್ದು ಸಮಸ್ಯೆಗಳಾಗಿದ್ದರೆ ಪರೀಕ್ಷಿಸಿಕೊಂಡು ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಿ ಈ ಕಾರಣದಿಂದ ಕೂಡ ಹಣ ಕೈತಪ್ಪಿರಬಹುದು.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಡೀಟೇಲ್ಸ್ ತೆಗೆದುಕೊಂಡಿಲ್ಲ, ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಆಗಿರಬೇಕು. ಅನೇಕರಿಗೆ ಇದು InActive ಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಹಣ ವರ್ಗಾವಣೆ ಆಗಿಲ್ಲ. ಕೂಡಲೇ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯೇ ಮತ್ತು ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲವಾದಲ್ಲಿ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಇದನ್ನು ಸರಿಪಡಿಸಿಕೊಳ್ಳಿ.
● ನಿಮ್ಮ ರೇಷನ್ ಕಾರ್ಡ್ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು e-kyc ಅಪ್ಡೇಟ್ ಆಗಿರಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ. ಪಡಿತರಚೀಟಿಯಲ್ಲಿ ಎಲ್ಲಾ ವಿವರಗಳು ಸರಿಯಾಗಿದ್ದರೆ ಕುಟುಂಬದ ಮುಖ್ಯಸ್ಥಾನದಲ್ಲಿರುವ ಮಹಿಳೆ ಖಾತೆಗೆ ಈಗಾಗಲೇ ಅನ್ನ ಭಾಗ್ಯ ಯೋಜನೆ ಯ ಹಣ ಬಂದಿರುತ್ತದೆ. ನೀವು ಅನ್ನಭಾಗ್ಯ ಯೋಜನೆ ಹಣವನ್ನು ಪಡೆದಿದ್ದು ಖಂಡಿತವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇರುವುದಿಲ್ಲ ಹಣ ಬರುತ್ತದೆ ತಡವಾಗಿರಬಹುದು ಅಷ್ಟೇ.
● ಕೆಲವರಿಗೆ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದ್ದರೂ SMS ಸಂದೇಶ ಬಂದಿರುವುದಿಲ್ಲ. ಹಾಗಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಚೆಕ್ ಮಾಡಿಸಿ, ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಿ.