ನಮ್ಮ ದೇಶದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು, ಸ್ಮಾಲ್ ಫೈನಾನ್ಸ್ ಕಂಪನಿಗಳು ಈ ರೀತಿ ಆರ್ಥಿಕ ವಹಿವಾಟು ನಡೆಸುವ ಎಲ್ಲ ಕಂಪನಿಗಳು ಕೂಡ RBI ನಿಯಮಗಳ ಅನುಸಾರವಾಗಿಯೇ ಕಾರ್ಯ ನಿರ್ವಹಿಸುತ್ತವೆ. ಒಂದು ವೇಳೆ ಇವುಗಳು RBI ನ ಗೈಡ್ಲೈನ್ಸ್ ಉಲ್ಲಂಘಿಸಿದರೆ ಆ ಹಣಕಾಸು ಸಂಸ್ಥೆಗಳಿಗೆ ದಂಡ ವಿಧಿಸುವ ಅಥವಾ ಅವುಗಳು ಪಡೆದಿರುವ ಪರವಾನಗಿ ರದ್ದುಪಡಿಸುವ ಸುಪ್ರೀಂ ಅಧಿಕಾರವನ್ನು ಬ್ಯಾಂಕುಗಳ ಬ್ಯಾಂಕ್ ಎನ್ನುವ ಖ್ಯಾತಿಗೆ ಒಳಗಾಗಿರುವ RBI ಹೊಂದಿದೆ.
ಸದಾ ಭಾರತದಲ್ಲಿರುವ ನಾಗರಿಕರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಜಾರಿಗೆ ತರುವ RBI ಈ ಬಾರಿಯೂ ಕೂಡ 2023-24 ನೇ ವರ್ಷದಿಂದ ಜಾರಿಗೆ ಬರುವಂತೆ ಸರ್ಕ್ಯೂರಲ್ ಒಂದನ್ನು ಹೊರಡಿಸಿದ್ದು ಇದನ್ನು ಎಲ್ಲಾ ಹಣಕಾಸು ಸಂಸ್ಥೆಗಳು ಕೂಡ ಪಾಲಿಸಲೇಬೇಕಾಗಿದೆ. ಏನೆಂದರೆ, ಈಗ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ.
ಗೃಹ ಸಾಲ, ಬೆಳೆ ಸಾಲ ಅಥವಾ ಶೈಕ್ಷಣಿಕ ಸಾಲ ವಾಣಿಜ್ಯ ಸಾಲ, ವಾಹನ ಸಾಲ ಈ ರೀತಿ ಯಾವುದಾದರೂ ರೂಪದ ಸಾಲವನ್ನು ಮಾಡಿರುತ್ತಾರೆ. ಈ ಸಾಲಗಳನ್ನು ಮಾಡುವಾಗ ಆ ಸಂಸ್ಥೆ ಮತ್ತು ಸಾಲಗಾರನ ನಡುವೆ ಅಗ್ರಿಮೆಂಟ್ ಕೂಡ ಆಗಿರುತ್ತದೆ. ಆತ ಪಡೆದ ಸಾಲಕ್ಕೆ ಇಂತಿಷ್ಟು ವರ್ಷಗಳ ಗಡುವು, ಬಡ್ಡಿದರ ಇಷ್ಟು ಅನ್ವಯವಾಗುತ್ತದೆ ಮತ್ತು ತಪ್ಪದೇ ಇಷ್ಟು ಮೊತ್ತವನ್ನು EMI ಆಗಿ ಪಾವತಿಸಬೇಕು ಎನ್ನುವ ನಿಯಮ ಇರುತ್ತದೆ.
ಒಂದು ವೇಳೆ ಯಾವುದಾದರೂ ಕಾರಣಕ್ಕಾಗಿ ಸಾಲ ಪಡೆದ ವ್ಯಕ್ತಿ ಅದನ್ನು ಪಾಲಿಸದೆ ಹೋದಲ್ಲಿ ಆತನಿಗೆ ದಂಡ ವಿಧಿಸುವ ಬದಲು ಸಾಲದ ಬಡ್ಡಿ ಮೊತ್ತಕ್ಕೆ ಮತ್ತಷ್ಟು ಬಡ್ಡಿಯನ್ನು ವಸೂಲಿ ಮಾಡುತ್ತವೆ ಬ್ಯಾಂಕ್ ಗಳು. ಈಗ ಈ ವಿಷಯದ ಕುರಿತು ಅತಿ ಮುಖ್ಯವಾದ ಸರ್ಕುಲರ್ ನ್ನು RBI ಬಿಡುಗಡೆ ಮಾಡಿದೆ ಇದು ದೇಶದಲ್ಲಿರುವ ಎಲ್ಲಾ ಹಣಕಾಸು ಸಂಸ್ಥೆಗಳಿಗೂ ಕೂಡ ಅನ್ವಯವಾಗುತ್ತದೆ.
ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!
ಅದೇನೆಂದರೆ ಯಾವುದೇ ಸಾಲವನ್ನು ಮರುಪಾವತಿ ಮಾಡಲು ಸಾಲ ಪಡೆದ ಗ್ರಾಹಕನು ವಿಫಲವಾದಲ್ಲಿ ಆತನಿಗೆ ದಂಡವನ್ನು ವಿಧಿಸಬಹುದೇ ಹೊರತು ಯಾವುದೇ ಕಾರಣಕ್ಕೂ ಬಡ್ಡಿಯ ಮೇಲೆ ಬಡ್ಡಿಯನ್ನು ವಿಧಿಸಬಾರದು. ಇದು ಪೆನಾಲ್ಟಿ ರೂಪದಲ್ಲಿ ಇರಬೇಕೆ ಹೊರತು ಪೀನಲ್ ಇಂಟರೆಸ್ಟ್ ಆಗಬಾರದು ಎಂದು RBI ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದೆ ಇದು ಎಲ್ಲ ರೀತಿಯ ಸಾಲಗಳ ಮೇಲು ಕೂಡ ಅಪ್ಲೈ ಆಗಲಿದೆ ಎಂದು ತಿಳಿಸಿದೆ.
RBI ನ ಈ ನೀತಿಯು ಎಲ್ಲ ರೀತಿಯ ಸಾಲ ಪಡೆದವರಿಗೆ ಅವರ ಸಾಲದ ಹೊರೆ ಇಳಿಸುವುದಕ್ಕೆ ಬಹಳ ಅನುಕೂಲಕರವಾದ ನಿರ್ಧಾರ ಆಗಿದೆ ಅಂತಲೇ ಹೇಳಬಹುದು. ಯಾಕೆಂದರೆ ಈಗಾಗಲೇ ಪಡೆದ ಸಾಲದ ವಂತಿಕೆ ಅಥವಾ ಬಡ್ಡಿ ಕಟ್ಟಲಾಗದೆ ಪರಿತಪಿಸುತ್ತಿದ್ದ ಸಾಲಗಾರನಿಗೆ ಬಡ್ಡಿಯ ಮೇಲೆ ಬಡ್ಡಿ ಬೀಳುತ್ತಿರುವುದು ಬಹಳ ದೊಡ್ಡ ನ’ಷ್ಟವಾಗುತ್ತಿತ್ತು ಹಾಗಾಗಿ ಗ್ರಾಹಕನ ಹಿತ ದೃಷ್ಟಿಯಿಂದಲೇ RBI ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಬಹುದು.
60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!
ಇದರ ಜೊತೆಗೆ ಗ್ರಾಹಕರು ತಮ್ಮ ಕಂತುಗಳನ್ನು ಕಟ್ಟಲು ವಿಫಲವಾದಾಗ ಮೊದಲಿಗೆ ಅವರಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಸಬೇಕು, ಸಾಧ್ಯವಾದರೆ ಅವರ ಸಂಪರ್ಕ ಸಂಖ್ಯೆಗೆ SMS ನೋಟಿಫಿಕೇಶನ್ ಕೂಡ ಕಳುಹಿಸಬೇಕು ಎಂದು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಒಂದು ವೇಳೆ ಬ್ಯಾಂಕ್‌ಗಳು ಈ ನಿಯಮವನ್ನು ಮೀರಿ ಗ್ರಾಹಕರಿಗೆ ಸುಲಿಗೆ ಮಾಡಿದರೆ ಅವುಗಳ ಮೇಲೆ ಕ್ರಮವಾಗಬಹುದು.
ಸದ್ಯಕ್ಕೆ RBI ವತಿಯಿಂದ ಬ್ಯಾಂಕ್ ಗಳಿಗೆ ಈ ಸರ್ಕ್ಯುಲರ್ ಬಿಡುಗಡೆ ಆಗಿದ್ದು, ಈ ಸಂಬಂಧಿತವಾಗಿ ಗ್ರಾಹಕರಿಗೆ ಯಾವುದೇ ಮಾಹಿತಿ ತಲುಪಿಲ್ಲ, ಶೀಘ್ರದಲ್ಲಿ ಇದು ಅಧಿಕೃತವಾಗಿ ಅನೌನ್ಸ್ ಆಗಲಿದೆ ಎಂದು ತಿಳಿದು ಬಂದಿದೆ.