ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಆರಂಭ.! ಮತ್ತೆ 9 ದಿನಗಳ ಕಾಲವಕಾಶ ನೀಡಿದ ಸರ್ಕಾರ, ತಪ್ಪದೇ ಈ ಬಾರಿ ಅವಕಾಶ ಸದುಪಯೋಗ ಪಡಿಸಿಕೊಳ್ಳಿ.!

ರೇಷನ್ ಕಾರ್ಡ್ (Ration Card) ಎಷ್ಟು ಅಗತ್ಯ ದಾಖಲೆಯಾಗಿದೆ ಎಂದು ಈಗ ಎಲ್ಲರಿಗೂ ಮನವರಿಕೆಯಾಗಿದೆ. APL, BPL ಅಥವಾ ಅಂತ್ಯೋದಯ ಯಾವುದಾದರೂ ಒಂದು ರೇಷನ್ ಕಾರ್ಡ್ ನ್ನು ನಾವು ಗುರುತಿನ ಚೀಟಿಯಾಗಿ ಹೊಂದಿರಲೇಬೇಕು, ಆದರೆ ಅನೇಕರು ಇದರ ಬಗ್ಗೆ ಗಮನಹರಿಸಿರಲಿಲ್ಲ. ರೇಷನ್ ಕಾರ್ಡ್ ಇದ್ದರೂ ಕೂಡ ಅದರಲ್ಲಿ ಮ’ರ’ಣ ಹೊಂದಿದವರ ಹೆಸರು ತೆಗೆಸಿ ಹಾಕಿರಲಿಲ್ಲ ಮತ್ತು ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಿರಲಿಲ್ಲ ಮತ್ತು ಅದಕ್ಕೆ ಇ-ಕೆವೈಸಿ ಅಪ್ಡೇಟ್ ಮಾಡಿರಲಿಲ್ಲ.

WhatsApp Group Join Now
Telegram Group Join Now

ಆದರೆ ರಾಜ್ಯದಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ರೇಷನ್ ಕಾರ್ಡ್ ಆಧಾರದ ಮೇಲೆ ನೀಡುತ್ತಿರುವ ಕಾರಣ ಜನರು ಈಗ ತಿದ್ದುಪಡಿ (Ration card correction) ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಸರ್ಕಾರ (government) ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿತ್ತು.

ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

ಆಗಸ್ಟ್ 18 ರಿಂದ 21 ರವರೆಗೆ ಮಧ್ಯಾಹ್ನ 12 ರಿಂದ ಸಂಜೆ 4:30 ತನಕ, ಆಗಸ್ಟ್ 23 ರಂದು ಒಂದು ದಿನ ಪೂರ್ತಿ ಮತ್ತು ಸೆಪ್ಟೆಂಬರ್ 1 ರಿಂದ 10 ರವರೆಗೆ ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ರಜಾದಿನಗಳು ಹೆಚ್ಚಿದ್ದರಿಂದ ಮುಖ್ಯವಾಗಿ ಸರ್ವರ್ ಸಮಸ್ಯೆ ಪದೇ ಪದೇ ಕಾಡಿದ್ದರಿಂದ 3 ಅವಕಾಶಗಳನ್ನು ನೀಡಿದ್ದರು ಕೂಡ ಹೆಚ್ಚಿನ ಜನರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲಾಗದೆ ಉಳಿದಿದ್ದಾರೆ.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಆಘ್ರಾಣಿಸುತ್ತಿರುವೆ ಹಾಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ಮತ್ತು ಸರ್ಕಾರದ ಇತರೆ ಯೋಜನೆಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿರುವುದರಿಂದ ಕೆಲವು ತಿದ್ದುಪಡಿಗೆ ಮಾತ್ರ ಮತ್ತೊಮ್ಮೆ ಅವಕಾಶ ನೀಡಿದೆ.

ಬಾಯಿ ಹುಣ್ಣು ಸುಲಭವಾಗಿ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದುಗಳು ಇವು.!

ಈ ಮೊದಲು ಅವಕಾಶ ನೀಡಿದ್ದಂತೆ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಸಿಕೊಳ್ಳಲು, ಹೆಸರಿನಲ್ಲಿ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳಲು, ನ್ಯಾಯಬೆಳೆ ಅಂಗಡಿ ಬದಲಾಯಿಸಿಕೊಳ್ಳಲು, ಮ’ರ’ಣ ಹೊಂದಿರುವ ಸದಸ್ಯರ ಹೆಸರು ತೆಗೆದು ಹಾಕಿಸಲು, ಹೊಸ ಸದಸ್ಯರ ಹೆಸರು ಸೇರಿಸಲು ಅನುಮತಿ ನೀಡಿದೆ. ಅಕ್ಟೋಬರ್ 5ರಿಂದ 13ರವರೆಗೆ 9 ದಿನಗಳ ಕಾಲ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಜಿಲ್ಲಾವಾರು ವಿಭಾಗ ಮಾಡಿ ಅನುಮತಿಸಲಾಗಿದೆ.

ನೀಡಿರುವ ದಿನಾಂಕದಂದು ಆಯಾ ಜಿಲ್ಲೆಯವರು ಮಾತ್ರ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಹತ್ತಿರದಲ್ಲಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಗ್ರಾಮ ಒನ್ ಸೇವಾಕೇಂದ್ರದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ದಾನಪತ್ರದ ಮೂಲಕ ಬಂದ ಆಸ್ತಿಯನ್ನು ಪಡೆದುಕೊಂಡವರು ತಪ್ಪದೆ ನೋಡಿ.!

● ಅಕ್ಟೋಬರ್ 5ರಿಂದ 7ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ.
● ಅಕ್ಟೋಬರ್ 8 ರಿಂದ 10ರವರೆಗೆ ದಕ್ಷಿಣ ಕನ್ನಡ, ಚಾಮರಾಜನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾಸನ, ಹಾವೇರಿ, ಗದಗ, ಉಡುಪಿ, ಮೈಸೂರು, ಮಂಡ್ಯ, ಉತ್ತರ ಕನ್ನಡ, ಕೊಡಗು, ವಿಜಯಪುರ ಸೇರಿದಂತೆ 15 ಜಿಲ್ಲೆಗಳು.
● ಅಕ್ಟೋಬರ್ 11 ರಿಂದ 13 ರವರೆಗೆ ಕಲ್ಬುರ್ಗಿ, ಬೀದರ್, ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು, ಕೋಲಾರ, ಶಿವಮೊಗ್ಗ, ರಾಮನಗರ, ವಿಜಯನಗರ, ತುಮಕೂರು, ಯಾದಗಿರಿ ಸೇರಿದಂತೆ 14 ಜಿಲ್ಲೆಗಳು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now