ವೈದ್ಯೋ ನಾರಾಯಣ ಹರಿ ಎನ್ನುವ ಉಕ್ತಿಯಿದೆ. ಹೀಗೆಂದರೆ ವೈದ್ಯರು ದೇವರಿಗೆ ಸಮಾನ ಎಂದರ್ಥ. ಯಾಕೆಂದರೆ ಒಂದು ಪ್ರಾಣವನ್ನು ಉಳಿಸುವ ಶಕ್ತಿ ಆ ವೈದ್ಯರಲ್ಲಿ ಇರುತ್ತದೆ. ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಟ್ಟು ರೋಗಿಗಳನ್ನು ಹಾರೈಕೆ ಮಾಡಿ ಸಾಂತ್ವನ ನೀಡುವುದರಿಂದ ಅವರಿಗೆ ಆತ್ಮವಿಶ್ವಾಸ ತುಂಬಿಸುವುದರಿಂದ ಆತ ಚೇತರಿಸಿಕೊಂಡು ತನ್ನ ಆಯುಷ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾನೆ ಇಂತಹ ಒಂದು ವಿಶೇಷವಾದ ಶಕ್ತಿ ವೈದ್ಯರಿಗೆ ಮಾತ್ರ ಇರುವುದು.
ಈ ರೀತಿ ಸರಿಯಾದ ಸಮಯಕ್ಕೆ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ಸಿಕ್ಕಿ ಗುಣವಾದರೆ ಆ ಕುಟುಂಬವು ಅಂತಹ ದೈವಸ್ವರೂಪವಾದ ವೈದ್ಯರಿಗೆ ಚಿರಋಣಿಯಾಗಿ, ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಈಗಿನ ಕಾಲದಲ್ಲಿ ಇಂತಹ ಗುಣವುಳ್ಳ ವೈದ್ಯರು ಎಷ್ಟು ಜನ ಸಿಗುತ್ತಾರೆ ಎನ್ನುವುದೇ ಯಕ್ಷಪ್ರಶ್ನೆ ಯಾಕೆಂದರೆ ಈಗಿನ ಬಹುತೇಕ ಆಸ್ಪತ್ರೆಗಳು ದುಡ್ಡು ಮಾಡುವ ದಂದೆಗೆ ಇಳಿದು ಬಿಟ್ಟಿದೆ.
ಆಸ್ತಿ ಖರೀದಿ & ಮಾರಟ ಮಾಡುವವರಿಗೆ ಪ್ರಮುಖ ಸುದ್ದಿ ನಾಳೆಯಿಂದ ಜಾರಿ ಆಗಲಿದೆ ಹೊಸ ರೂಲ್ಸ್.!
ಮೆಡಿಕಲ್ ಮಾಫಿಯಾ ಎನ್ನುವುದು ಇಡೀ ಪ್ರಪಂಚವನ್ನು ಆಳವಾಗಿ ಆವರಿಸಿದ್ದು ಇದು ಎಷ್ಟು ಚೆನ್ನಾಗಿ ತನ್ನ ಅಜಾನಬಾಹುಗಳನ್ನು ಚಾಚಿ ಸೆಳೆದಿದೆ ಎಂದರೆ ಒಂದು ಹಳ್ಳಿಯಲ್ಲಿರುವ ಕ್ಲಿನಿಕ್ ನ ವೈದ್ಯ ಕೂಡ ತನ್ನ ಬಳಿ ಬರುವ ಪೇಷಂಟ್ ಗುಣವಾಗಲಿ ಎನ್ನುವುದಕ್ಕಿಂತ ತನ್ನದೇ ಮೆಡಿಕಲ್ ಶಾಪ್ ಗೆ ಮಾತ್ರೆಗಳನ್ನು ಬರೆದು ಕೊಟ್ಟು, ತನ್ನದೇ ಒಡೆತನದ ಅಥವಾ ಒಪ್ಪಂದದ ಲ್ಯಾಬೋರೇಟರಿಗಳಿಗೆ ಟೆಸ್ಟ್ ಗಳಿಗೆ ಬರೆದು ಕೊಟ್ಟು ಹೈರಳಾಗಿರುವ ರೋಗಿಗಿಂತ ಹಣ ಪೀಕುವ ಕೀಳು ಮನಸ್ಥಿತಿಗೆ ಇಳಿದು ಬಿಟ್ಟಿದೆ.
ಇಂತಹ ಈ ಜಮಾನದಲ್ಲಿ ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಮನಸ್ಪೂರ್ತಿಯಾಗಿ ಸೇವಾ ಮನೋಭಾವದಿಂದ ರೋಗಿಗಳನ್ನು ದೇವರೆನ್ನುವ ಹಾಗೂ ಅದೇ ರೀತಿ ಅವರನ್ನು ನೋಡಿಕೊಳ್ಳುವ ವೈದ್ಯರು ಹಾಗು ಅವರದ್ದೆ ಆದ ಆಸ್ಪತ್ರೆ ಒಂದಿದೆ ಈ ವೈದ್ಯರು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬಾರದು ಎನ್ನುತ್ತಾರೆ. ರೋಗಿಗೆ ಔಷಧಿಗಿಂತ ಸಾಂತ್ವನ ಮುಖ್ಯ, ಆತನ ಇಮ್ಯುನಿಟಿ ಪವರ್ ಹೆಚ್ಚಾಗುವುದು ಆತ ಖುಷಿಯಾಗಿದ್ದಾಗ ಅದನ್ನು ಮಾಡಬೇಕು ಎನ್ನುತ್ತಾರೆ, ನನ್ನ ರೋಗಿಗಳಿಂದಲೇ ನನ್ನ ಆಸ್ಪತ್ರೆ ಕನಸು ನನಸಾಯಿತು ಹಾಗಾಗಿ ಅವರೇ ನನಗೆ ದೇವರು ಎನ್ನುತ್ತಾರೆ.
ಸಾಲದಕ್ಕೆ ಯಾವುದೇ ಒಂದು ರೋಗಿ ಇಲ್ಲಿ ಬಂದು ಗುಣವಾಗಿ ಹಣ ನೀಡಲು ಸಾಧ್ಯವಾಗದೆ ಇದ್ದಾಗ ಅದರ ಬಗ್ಗೆಯೂ ಕೂಡ ಇವರು ತಲೆಕೆಡಿಸಿಕೊಳ್ಳುವುದಿಲ್ಲ, ಇವರ ಆಸ್ಪತ್ರೆಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಬಿಲ್ ದಾಟಿದಾಗ ಬಿಲ್ ಮಾಡುವುದಕ್ಕೆ ಇಲ್ಲಿನ ಸಿಬ್ಬಂದಿ ಹಿಂದೆ ಮುಂದೆ ನೋಡುತ್ತಾರೆ. ಆ ರೀತಿಯಾದ ವಿಜ್ಞಾನದ ಜೊತೆ ಸಂಸ್ಕೃತಿಯನ್ನು ಕೂಡ ನಂಬುವ ಅಪರೂಪದ ವೈದ್ಯರು ಬೆಂಗಳೂರಿನಲ್ಲಿದ್ದಾರೆ.
ಬೆಂಗಳೂರಿನ ಲಿಂಕ್ ರೋಡ್ ನಲ್ಲಿ ಬರುವ ಜಯಭೀಮ್ ನಗರದ ಡಾಕ್ಟರ್ ವಿಷ್ಣು ಹಯಗ್ರೀವ ಅವರ ಆಸ್ಪತ್ರೆ ಮಾರುತಿ ಕ್ಲಿನಿಕ್. ಇಲ್ಲಿ ರೋಗಿಗಳ ಸಲುವಾಗಿ ನಾರಾಯಣ ಹರಿಯಾಗಿರುವುದು ಡಾ. ವಿಷ್ಣು ಅವರು. 50 ಹಾಸಿಗೆಗಳುಳ್ಳ ಈ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ಕಾಯಿಲೆಗೂ ಚಿಕಿತ್ಸೆ ಇರುತ್ತದೆ. ಬೆಂಗಳೂರಿನಲ್ಲಿ ಯಾವುದೇ ಆಟೋ ಡ್ರೈವರ್ ಬಳಿ ಮಾರುತಿ ಕ್ಲಿನಿಕ್ ಎಂದು ಕೇಳಿದರೆ ಸೀದಾ ಇಲ್ಲಿಗೆ ತಂದು ಬಿಡುತ್ತಾರೆ.
ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!
ಅಷ್ಟು ಫೇಮಸ್ ಹಾಸ್ಪಿಟಲ್ ಇದು ಬೆಂಗಳೂರಿನ ಕೆಸಿ ಜನರಲ್ ಹಾಸ್ಪಿಟಲ್ ಬಿಟ್ಟು ಅತಿ ಕಡಿಮೆ ವೆಚ್ಚವಾಗುವ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಒಂದೇ ಒಂದು ಖಾಸಗಿ ಆಸ್ಪತ್ರೆ ಎನ್ನುವ ಖ್ಯಾತಿಗೂ ಒಳಗಾಗಿದೆ. ಈ ವೈದ್ಯರ ಹಾಗೂ ಈ ಆಸ್ಪತ್ರೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.