ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಕೆಲವರು ಹಣ ಕೂಡಿಟ್ಟು ಮನೆ ಕಟ್ಟಿದರೆ, ಕೆಲವರು ಲೋನ್ ಪಡೆದುಕೊಂಡು ಮನೆ ಕಟ್ಟುತ್ತಾರೆ. ಆದರೆ ಯಾವುದೋ ಒಂದು ಅನಿವಾರ್ಯ ಸಂದರ್ಭದಲ್ಲಿ ನೀವು ಬಹಳ ಬೇಗ ಮನೆ ಕಟ್ಟಲೇಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಉಳಿತಾಯವೂ ಕಡಿಮೆ ಇರುತ್ತದೆ, ಸಾಲವೂ ಕೂಡ ಸಿಗುವುದಿಲ್ಲ ಆಗ ಇರುವ ಬಜೆಟ್ ನಲ್ಲಿಯೇ ಯಾವ ರೀತಿ ಸುಂದರವಾದ ಮನೆ ಕಟ್ಟಿಕೊಳ್ಳಬಹುದು ಎನ್ನುವ ಡೀಟೇಲ್ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಈಗ ಒಂದು ಚಿಕ್ಕ ಕುಟುಂಬ ಅಂದರು ಅದಕ್ಕೆ 2BHK ಮನೆ ಬೇಕೇ ಬೇಕು. 30×25 ವಿಸ್ತೀರ್ಣದಲ್ಲಿ ಏಳೂವರೆ ಚದರ ಅಡಿ ಮನೆ ಕಟ್ಟಿಕೊಳ್ಳಲು 10 ಲಕ್ಷಕ್ಕಿಂತ ಹೆಚ್ಚು ಹಣ ಬೇಕು. ಆದರೆ ಈಗ ನಾವು ಹೇಳುವ ಈ ವಿಧಾನವನ್ನು ನೀವು ಪಾಲಿಸುವುದರಿಂದ 10 ಲಕ್ಷ ಬಜೆಟ್ ಒಳಗಡೆ ನೀವು ಪೂರ್ತಿ ಮನೆ ಕಂಪ್ಲೀಟ್ ಮಾಡಬಹುದು ಅದಕ್ಕಾಗಿ ಕೆಲವೊಂದು ಸಣ್ಣಪುಟ್ಟ ಕಾಂಪ್ರಮೈಟ್ ಕೂಡ ಮಾಡಿಕೊಳ್ಳಬೇಕು.
ಮನೆ ದಾಖಲೆಗಳು ಕಳೆದು ಹೋದಲ್ಲಿ ಇ-ಸ್ವತ್ತು ದಾಖಲೆಗಳು ಮರಳಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಆದರೆ ನೋಡಲು ಸುಂದರವಾದ ಹಾಗೂ ಅಷ್ಟೇ ಸುರಕ್ಷಿತವಾದ, ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲದಂತಹ ಮನೆ ನಿರ್ಮಾಣ ಮಾಡಬಹುದು. ನೀವು ಈ ಮನೆಯನ್ನು ಫೌಂಡೇಶನ್ ಹಾಕಿ ನಿರ್ಮಿಸಿದರೆ ಇಷ್ಟೇ ಸಾಕು, ಆದರೆ ನೀವು ಮುಂದೆ ಇದರ ಮೇಲೆ ಒಂದು ಅಥವಾ ಎರಡು ಫ್ಲೋರ್ ಹಾಕಲು ಬಯಸಿದರೆ ಕಾಲಂಮ್ ಸ್ಟ್ರಕ್ಚರ್ ಗೆ ಹೋಗ ಬೇಕಾಗುತ್ತದೆ.
ಆಗ ನಿಮ್ಮ ಬಜೆಟ್ 10 ಲಕ್ಷ ದಾಟಬಹುದು, ಇಲ್ಲ ಮುಂದೆ ಕನ್ಸ್ಟ್ರಕ್ಷನ್ ಕಂಟಿನ್ಯೂ ಮಾಡುವ ಐಡಿಯಾ ಇಲ್ಲ ಎಂದರೆ ಫೌಂಡೇಶನ್ ಹಾಕಿ ಮನೆ ನಿರ್ಮಿಸಬಹುದು. ನೀವೇನಾದರೂ ನಿಮ್ಮ ಮನೆ ಸುತ್ತ ಫೋರ್ ಇಂಚ್ ವಾಲ್ ನಲ್ಲಿ ಕಾಂಪೌಂಡ್ ನಿರ್ಮಿಸಿಕೊಳ್ಳಬೇಕು ಎಂದು ಬಯಸಿದರೆ ಆಗ ಇದಕ್ಕಿಂತ 50,000 ಹೆಚ್ಚಿಗೆ ಹಣ ಬೇಕಾಗಬಹುದು, ಹಾಗೆ ಸಂಪ್ ಬೇಕು ಎಂದರು ಕೂಡ ಸಂಪ್ ನಿರ್ಮಾಣ ಮಾಡಲು ಮತ್ತೆ 50,000 ಹೆಚ್ಚಿಗೆ ಖರ್ಚು ಮಾಡಬೇಕಾಗುತ್ತದೆ.
ದಾನವಾಗಿ ಕೊಟ್ಟ ಆಸ್ತಿ ಹಿಂಪಡೆಯಬಹುದ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಈ ಮನೆಯನ್ನು ನಾಲ್ಕು ಭಾಗದಂತೆ ವಿಂಗಡಿಸಿಕೊಂಡು ಒಂದು ಭಾಗದಲ್ಲಿ ಹಾಲ್ ಒಂದು ಭಾಗದಲ್ಲಿ ಕಿಚನ್ ಮತ್ತೆರಡು ಭಾಗದಲ್ಲಿ ಬೆಡ್ರೂಮ್, ಅದರಲ್ಲಿ ಒಂದು ಬೆಡ್ರೂಮ್ ಸ್ವಲ್ಪ ದೊಡ್ಡದಾಗಿ ಮಾಡಿ ಅದರಲ್ಲೇ ಅಟ್ಯಾಚ್ ಬಾತ್ರೂಮ್ ನಿರ್ಮಾಣ ಮಾಡಲಾಗುತ್ತದೆ. ಆದರೆ ದೇವರ ಮನೆಗೆ ಕಾನ್ಸೆಪ್ಟ್ ಇರುವುದಿಲ್ಲ ಆರ್ಟಿಫಿಶಿಯಲ್ ಆಗಿ ಈಗ ದೇವರ ಕೋಣೆ ರೀತಿ ಸಿಗುತ್ತದೆ ಅಥವಾ 5-6k ಚೆನ್ನಾಗಿರುವ ಸೆಟ್ ಸಿಗುತ್ತದೆ ಅದನ್ನು ಫಿಕ್ಸ್ ಮಾಡಿಸಿಕೊಳ್ಳಬಹುದು.
ಫೌಂಡೇಶನ್ ಗಾಗಿ ನಿಮಗೆ 1.5ಲಕ್ಷದವರೆಗೂ ಖರ್ಚಾಗಬಹುದು, ಮತ್ತು ಲೇಬರ್ ಚಾರ್ಜಸ್ ಗಾಗಿ ಖಂಡಿತವಾಗಿಯೂ 2.5 ಲಕ್ಷ ಹಣ ಬೇಕಾಗುತ್ತದೆ. ಲಿವಿಂಗ್ ರೂಮ್ ಮತ್ತು ಸ್ಲಾಬ್ ಗಳಿಗಾಗಿ ತಲಾ 1.5 ಲಕ್ಷ ಹಣ ಖರ್ಚಾಗುತ್ತದೆ. ಇನ್ನು ಉಳಿದ ಹಣದಲ್ಲಿ ನೀವು ಮನೆ ಪ್ಲಾಸ್ಟರಿಂಗ್, ಕೆಟಕಿ ಬಾಗಿಲುಗಳು, ಗ್ರಿಲ್ ಪೇಂಟಿಂಗ್, ಸಿಂಪಲಾ ಆದ ಕಿಚನ್ ಸ್ಲಾಬ್, ಸ್ಟೇರ್ ಕೇಸ್ ಪ್ಲಂಬಿಂಗ್, ಎಲೆಕ್ಟ್ರಿಕಲ್ಸ್ ಇದನ್ನೆಲ್ಲಾ ನಿಭಾಯಿಸಬೇಕು.
ಹಾಗಾಗಿ ಇವುಗಳನ್ನು ಖರೀದಿಸುವಾಗ ಚೀಪ್ ಅಂಡ್ ಬೆಸ್ಟ್ ಕ್ವಾಲಿಟಿ ಖರೀದಿಸಿ ಟೈಲ್ಸ್ ಗಳನ್ನು 2×2 ಸೈಜ್ ಖರೀದಿಸಿ ರೂ. 40 ಗಿಂತ ಹೆಚ್ಚಿಗೆ ಬೆಲೆಯನ್ನು ಖರೀದಿಸಬೇಡಿ, 16mm ರಾಡ್ಸ್ ಬದಲು 10:12:8mm ಕಾಂಬಿನೇಷನ್ ಸೆಲೆಕ್ಟ್ ಮಾಡಿ, 43 ಗ್ರೇಡ್ ಜುವಾರಿ ಅಥವಾ ಪ್ರಿಯ ಸಿಮೆಂಟ್ ಬಳಸಿ. ಹೊರಗಿನ ಗೋಡೆಗೆ ಸಿಕ್ಸ್ ಇಂಚ್ ಬ್ರಿಕ್ಸ್ ಒಳಗಿನ ಗೋಡೆಗೆ ನಾಲ್ಕು ಇಂಚು ಬ್ರಿಕ್ಸ್ ಬಳಸಿ ಕಟ್ ಲಿಂಟಲ್ ಬಳಸಿ ಸಾಲ್ಕ್ ವುಟರ್ ಫ್ರೇಮ್ ಹಾಗೂ ಪ್ರೈಮರಿಕೋಟೆಡ್ ಡೋರ್ ಸೆಲೆಕ್ಟ್ ಮಾಡಿ.
ಬಾತ್ರೂಮಿಗೆ PVC ಡೋರ್ ಹಾಗೂ ಕಿಟಕಿಗಳನ್ನು ಅಲ್ಯೂಮಿನಿಯಂ ವಿಂಡೋಸ್ ಸೆಲೆಕ್ಟ್ ಮಾಡಿ ಬಾತ್ರೂಮ್ಗಳಿಗೆ ಪ್ಯಾರಗಾನ್ ಅಥವಾ ಮಾರ್ವಲ್ ಈ ಫಿಟ್ಟಿಂಗ್ಗಳನ್ನು ಬಳಸಿ, ಪ್ಲಗ್ ಪಾಯಿಂಟ್ ಗಳು ಅವಶ್ಯಕತೆ ಇರುವಲ್ಲಿ ಮಾತ್ರ ನಾಲ್ಕರಿಂದ ಐದು ಇರಲಿ ಸಾಕು, 5೦೦ ಲೀಟರ್ ಡಬಲ್ ಲೇಯರ್ ಟ್ಯಾಂಕನ್ನು ಹಾಕಿಸಿ. ಇವುಗಳಿಂದ ಆದಷ್ಟು ಹಣ ಉಳಿಸಬಹುದು ಬಾಳಿಕೆ ಕೂಡ ಚೆನ್ನಾಗಿರುತ್ತದೆ.