ಪೋಸ್ಟ್ ಆಫೀಸ್ ಬಡ್ಡಿದರದಲ್ಲಿ ಏರಿಕೆ, 200 ರೂಪಾಯಿ ಹೂಡಿಕೆ ಮಾಡಿ ಸಾಕು 4,28,000 ಸಿಗುತ್ತೆ.! ಹೆಚ್ಚು ಲಾಭ ತಂದುಕೊಡುವ ಬೆಸ್ಟ್ ಸ್ಕೀಮ್

 

WhatsApp Group Join Now
Telegram Group Join Now

ಭಾರತೀಯ ಅಂಚೆ ಇಲಾಖೆಯು (Post office) ಸಾಕಷ್ಟು ಬದಲಾಗಿದೆ ಉಳಿತಾಯ ಯೋಜನೆಗಳನ್ನು ಖರೀದಿಸಲು ಜನರು ಅಂಚೆ ಇಲಾಖೆಗಳ ಮೊರೆ ಹೋಗುತ್ತಿದ್ದಾರೆ. ಹತ್ತಕ್ಕಿಂತ ಹೆಚ್ಚು ಯೋಜನೆಗಳು ಅಂಚೆ ಕಛೇರಿಯಲ್ಲಿ ಲಭ್ಯವಿದ್ದು ಇದಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಹೂಡಿಕೆ ಮಾಡಿದ ಮೊತ್ತಕ್ಕೆ ಒಂದು ಭದ್ರತೆ ಇರುತ್ತದೆ ಹಾಗೂ ನಿಶ್ಚಿತ ಲಾಭವು ಸಿಗುತ್ತದೆ.

ಪ್ರತಿ ತ್ರೈಮಾಸಿಕಕೊಮ್ಮೆ ಅಂಚೆ ಇಲಾಖೆಯಲ್ಲಿ ಬಡ್ಡಿದರವನ್ನು ಪರೀಷ್ಕೃತಗೊಳಿಸಲಾಗುತ್ತಿರುತ್ತದೆ. ಹಾಗಾದರೆ ಈಗ ಅಕ್ಟೋಬರ್ 1, 2023 ರಿಂದ ಡಿಸೆಂಬರ್ 31, 2023ರವರೆಗೆ ಅಂಚೆ ಕಛೇರಿ ಯಾವ ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ ನಿಗದಿಯಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ತಲೆ ಹತ್ತಿರ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ.? ಇದು ಎಷ್ಟು ಡೇಂಜರ್ ಗೊತ್ತಾ.? ಮಕ್ಕಳಾಗದಿರಲು ಇದೇ ಕಾರಣನಾ.? ವೈದ್ಯರು ಬಿಚ್ಚಿಟ್ಟ ಮಾಹಿತಿ ನೋಡಿ.!

● ಸೇವಿಂಗ್ ಅಕೌಂಟ್ ಗೆ (Saving account) ಈ ಹಿಂದೆ 4% ಬಡ್ಡಿದರ ಇತ್ತು, ಈಗಲೂ ಕೂಡ ಅದೇ ಮುಂದುವರೆದಿದೆ. ಪ್ರತಿ ವರ್ಷಾಂತ್ಯದಲ್ಲಿ ಗ್ರಾಹಕರು ಉಳಿತಾಯ ಖಾತೆಯಲ್ಲಿ ಹೊಂದಿರುವ ಹಣಕ್ಕೆ ಈ ಬಡ್ಡಿದರವು ಜಮೆ ಆಗುತ್ತದೆ.

● RD ಯೋಜನೆ (Recurring deposit) ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಒಂದು ನಿಶ್ಚಿತ ಮೊತ್ತವನ್ನು ಪ್ರತಿ ತಿಂಗಳು ಅದೇ ತಾರೀಕಿಗೆ ಐದು ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳಾದ ಬಳಿಕ ನೀವು ನಿಮ್ಮ ಹೂಡಿಕೆ ಹಾಗೂ ಅದರ ಮೇಲೆ ಬಡ್ಡಿದರ ರೂಪದಲ್ಲಿ ಲಾಭವನ್ನು ಪಡೆಯುತ್ತಿರಿ. ಈವರೆಗೆ ಯೋಜನೆಯಲ್ಲಿ 6.5% ಇತ್ತು, ಇನ್ನು ಮುಂದೆ ಅದು 6.7% ಪರ್ಸೆಂಟ್ ಆಗಲಿದೆ.

ಎಷ್ಟೇ ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ ಆಗಿದ್ರೂ ವಾರದಲ್ಲೇ ಕರಗಿ ಹೋಗುತ್ತೆ ಈ ಮನೆ ಮದ್ದು ಒಮ್ಮೆ ಟ್ರೈ ಮಾಡಿ.!

● ಒಂದು ವರ್ಷದ ಅವಧಿಗೆ ನೀವು ಅಂಚೆ ಕಚೇರಿಯಲ್ಲಿ ನಿಮ್ಮ ಹಣವನ್ನು ನಿಶ್ಚಿತ ಠೇವಣಿ ಯೋಜನೆಯಡಿ (fixed deposit) ಹೂಡಿಕೆ ಮಾಡಿದರೆ ಇದುವರೆಗೆ 6.9% ಬಡ್ಡಿದರ ಸಿಗುತ್ತಿತ್ತು, ಇನ್ನು ಮುಂದೆ ಕೂಡ ಅದೇ ಮುಂದುವರೆಯಲಿದೆ. ಹಾಗೆಯೇ ಎರಡು ಮತ್ತು ಮೂರು ವರ್ಷಗಳಿಗೆ 7.0%, 5 ವರ್ಷಗಳಿಗೆ 7.5% ಬಡ್ಡಿದರ ಅನ್ವಯವಾಗುತ್ತಿತ್ತು ಅದೇ ಮುಂದುವರಿಯಲಿದೆ.

● ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ (Senior Citizen Savings Scheme) 60 ವರ್ಷ ಮೇಲ್ಪಟ್ಟವರು ಹೂಡಿಕೆ ಮಾಡಬಹುದಿತ್ತು, ಈ ಯೋಜನೆಗೆ 8.2% ಅನ್ವಯವಾಗಿತ್ತು ಇದರಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.
● NSC ಯೋಜನೆಯಡಿ ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ ಆದಾಯ ಪಡೆಯಬಹುದು. ಈ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು, ಇದಕ್ಕೆ 7.7% ರೇಟ್ ಆಫ್ ಇಂಟರೆಸ್ಟ್ ಇತ್ತು ಅದೇ ಮುಂದುವರೆಯಲಿದೆ.

ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್

● ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS Scheme) ಬಹಳ ವಿಶೇಷವಾದ ಯೋಜನೆ ಈ ಯೋಜನೆ ಅಡಿ ಒಂದು ಬಾರಿಗೆ ಹೂಡಿಕೆ ಮಾಡಿ ಪ್ರತಿ ತಿಂಗಳು ಕೂಡ ಯಾಕೆ ಅನ್ಭಯವಾಗುವ ಬಡ್ಡಿ ದರವನ್ನು ವಾಪಸ್ ಪಡೆಯಬಹುದು ಈ ಯೋಜನೆ ಮೆಚುರಿಟಿ ಅವಧಿ ಕೂಡ ಐದು ವರ್ಷಗಳು ಇರುತ್ತದೆ. ಈ ಯೋಜನೆಗೆ 7.4% ಪಟ್ಟಿದರ ಅನ್ವಯವಾಗುತ್ತಿತ್ತು. ಈ ತ್ರೈಮಾಸಿಕದಲ್ಲೂ ಅದೇ ಮುಂದುವರಿಯಲಿದೆ.

● ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ (PPF Scheme) 7.1% ಬಡ್ಡಿದರ ನಿಗದಿಯಾಗಿತ್ತು, ಇದರಲ್ಲೂ ಸಹಾ ಯಾವುದೇ ಬದಲಾವಣೆಯಾಗಿಲ್ಲ.
● ಕಿಸಾನ್ ವಿಕಾಸ್ ಪತ್ರ (KVP Scheme) ಯೋಜನೆಯಡಿ 7.5% ಬಡ್ಡಿದರ ಸಿಗುತ್ತಿತ್ತು. ಆದರೆ ಇದರ ಮೆಚ್ಯುರಿಟಿ ಅವಧಿ 110 ತಿಂಗಳು, ಬಡ್ಡಿದರ ಲೆಕ್ಕ ಹಾಕುವುದಕ್ಕಿಂತ ಹಣ ಡಬಲ್ ಆಗುವ ಯೋಜನೆ ಎಂದೆ ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿದರೆ 10 ವರ್ಷದಲ್ಲಿ ಅದು 2 ಲಕ್ಷ ಆಗುತ್ತದೆ.

ಕಳೆದುಕೊಂಡ ದುಡ್ಡು, ಒಡವೆ, ಸೈಟ್, ಆಸ್ತಿ ವಾಪಸ್ ಬರಬೇಕು, ಆರೋಗ್ಯ ಸಮಸ್ಯೆ ಸರಿ ಹೋಗಬೇಕಾದರೆ ಈ ಮಂತ್ರವನ್ನು 3 ನಿಮಿಷ ಪಠಿಸಿ ಸಾಕು…!

● ಸುಕನ್ಯಾ ಸಮೃದ್ಧಿ ಯೋಜನೆಗೆ (SSY) 8.0% ಬಡ್ಡಿದರ ನಿಗದಿಯಾಗಿತ್ತು. ಇದರಲ್ಲೂ ಕೂಡ ಯಾವುದೇ ಬದಲಾವಣೆಯಾಗಿಲ್ಲ.
● ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ (MSSC) ಯೋಜನೆಯನ್ನು ಕೂಡ ಬಡ್ಡಿದರ ವ್ಯತ್ಯಾಸವಾಗಿಲ್ಲ.

ಒಟ್ಟಾರೆಯಾಗಿ ಈ ತ್ರೈಮಾಸಿಕದಲ್ಲಿ RD ಯೋಜನೆಗೆ ಮಾತ್ರ ಬಡ್ಡಿದರ ಬದಲಾಗಿದೆ ನೀವು ಈಗ ಒಂದು ದಿನಕ್ಕೆ 200ರೂ. ಅಂದರೆ ತಿಂಗಳಿಗೆ 6000ರೂ ಈ ಯೋಜನೆಗೆ ಹೂಡಿಕೆ ಮಾಡಿದರೆ ಇದರ ಅವಧಿ ಐದು ವರ್ಷಗಳ ಮುಗಿದ ಬಳಿಕ ನಿಮ್ಮ ಹೂಡಿಕೆ ಹಣ 3,60,000ರೂ. ಆಗಿರುತ್ತದೆ. ಅದಕ್ಕೆ 6.7% ಬಡ್ಡಿದರ ಅನ್ವಯ ಆಗುವುದರಿಂದ 68,197ರೂ ಇಂಟ್ರೆಸ್ಟ್ ಸೇರಿ 4,28,197ರೂ. ಗಳನ್ನು ರಿಟರ್ನ್ಸ್ ಪಡೆಯಬಹುದು.

ಕೇವಲ 10 ಲಕ್ಷದಲ್ಲಿ 2BHK ಮನೆ ಕಟ್ಟಬಹುದು.! ಕಡಿಮೆ ದುಡ್ಡಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಬೇಕು ಅನ್ನುವವರು ತಪ್ಪದೆ ನೋಡಿ.!

ನೀವು POMIS ಯೋಜನೆಯಡಿ ಮಾಸಿಕ ಆದಾಯ ಬರುವಂತೆ ಒಂದು ಮೊತ್ತವನ್ನು ಹೂಡಿಕೆ ಮಾಡಿದರೆ, ಅದರಿಂದ ಪ್ರತಿ ತಿಂಗಳು ಬರುವ ಆದಾಯವನ್ನು RD ಯೋಜನೆಯಡಿ ಹೂಡಿಕೆ ಮಾಡಿದರೆ ಎರಡು ಯೋಜನೆಗಳಿಂದ ಕೂಡ ಲಾಭ ಪಡೆದ ರೀತಿ ಆಗುತ್ತದೆ. ಹೆಚ್ಚಿನ ವಿವರಕ್ಕಾಗಿ ಅಂಚೆ ಕಚೇರಿ ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now