ಕೇಂದ್ರ ಸಿಬ್ಬಂದಿ ಆಯೋಗವು(SSC) ಪ್ರತಿ ವರ್ಷವೂ ಕೂಡ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ. ಈ ವರ್ಷ ಅದೇ ರೀತಿ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಬೇಡಿಕೆ ಇರುವ 50,000 ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (Police Constable recruitment) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಆಯ್ಕೆಗೆ ಅಧಿಸೂಚನೆ ಹೊರಡಿಸಿದೆ.
ಈ ಹುದ್ದೆಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆ ತಿಳಿಸಿರುವ ಮಾನದಂಡಗಳನ್ನು ಪೂರೈಸಬೇಕು ಮತ್ತು ಅರ್ಜಿ ಸಲ್ಲಿಸಿ ಪರೀಕ್ಷೆಗಳಲ್ಲಿ ಎದುರಿಸಿ ಉದ್ಯೋಗ ಪಡೆದುಕೊಳ್ಳಬೇಕು ಹಾಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳಲು ಹುದ್ದೆಗಳ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕೇಂದ್ರ ಸಿಬ್ಬಂದಿ ಆಯೋಗ (Staff Selection Commission)
ಉದ್ಯೋಗ ಸ್ಥಳ:- ಭಾರತದಾತ್ಯಂತ…
ವಿಭಾಗಗಳು:-
 ● ಸಶಸ್ತ್ರ ಪೊಲೀಸ್ ಪಡೆ
 ● ರಾಷ್ಟ್ರೀಯ ತನಿಖಾ ಸಂಸ್ಥೆ
 ● ಸಶಸ್ತ್ರ ಸೀಮಾ ಬಲ
 ● ಅಸ್ಸಾಂ ರೈಫಲ್ಸ್
 ● ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
ಹುದ್ದೆ ಹೆಸರು:- ಕಾನ್ಸ್ಟೇಬಲ್
 ಒಟ್ಟು ಹುದ್ದೆಗಳ ಸಂಖ್ಯೆ:- 50,000+
ವೇತನ ಶ್ರೇಣಿ:-
 ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 21,700 ರಿಂದ 69,100 ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
 ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ರೇಷನ್ ಕಾರ್ಡ್ ಬಂದ್
ವಯೋಮಿತಿ:-
 ● ಕನಿಷ್ಠ 18 ವರ್ಷಗಳು
 ● ಗರಿಷ್ಠ 23 ವರ್ಷಗಳು.
ವಯೋಮಿತಿ ಸಡಿಲಿಕೆ:-
 ● SC/ST ಅಭ್ಯರ್ಥಿಗಳಿಗೆ 05 ವರ್ಷಗಳು
 ● OBC ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
 ● ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
 ● SSC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.
 ● ಇದೇ ವೇಬ್ ಸೈಟ್ ನಲ್ಲಿ ಅಧಿಸೂಚನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು.
 ● ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿಲ್ಲ, ಶೀಘ್ರದಲ್ಲಿಯೇ ಶುರುವಾಗಲಿದೆ.
ಕರ್ನಾಟಕದಲ್ಲಿ ಪರೀಕ್ಷೆ ನಡೆಯುವ ಕೇಂದ್ರಗಳು:-
 ● ಹುಬ್ಬಳ್ಳಿ, ಮಂಗಳೂರು ಮೈಸೂರು, ಮಂಡ್ಯ, ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳು.
 ● ಕನ್ನಡ ಭಾಷೆಯಲ್ಲಿ ಕೂಡ ಪರೀಕ್ಷೆ ಬರೆಯಲು ಅವಕಾಶವಿದೆ.
 ● ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಜನರಲ್ ಇಂಟೆಲಿಜೆನ್ಸ್, ರೀಸನಿಂಗ್ ಅಂಡ್ ಅನ್ಸರಿಂಗ್, ಜನರಲ್ ನಾಲೆಡ್ಜ್, ಕರೆಂಟ್ ಅಫೇರ್ಸ್, ಎಲಿಮೆಂಟರಿ ಮ್ಯಾಥಮೆಟಿಕ್ಸ್ ಮತ್ತು ಇಂಗ್ಲಿಷ್ ಭಾಷಾ ಜ್ಞಾನದ ಕುರಿತು ಇರುತ್ತದೆ.
ಆಯ್ಕೆ ವಿಧಾನ:-
 ● ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ
 ● ದೇಹದಾಢ್ಯತೆ ಪರೀಕ್ಷೆ
 ● ವೈದ್ಯಕೀಯ ಪರೀಕ್ಷೆ
 ● ಸಂದರ್ಶನ
 ● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
 ● ಇತ್ತೀಚಿನ ಭಾವಚಿತ್ರ ಮತ್ತು ಸಹಿ
 ● ಆಧಾರ್ ಕಾರ್ಡ್
 ● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
 ● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
 ● ನಿವಾಸ ದೃಢೀಕರಣ ಪತ್ರ
 ● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
 ● ಇನ್ನಿತರ ಪ್ರಮುಖ ದಾಖಲೆಗಳು.
ಕಳೆದುಕೊಂಡ ದುಡ್ಡು, ಒಡವೆ, ಸೈಟ್, ಆಸ್ತಿ ವಾಪಸ್ ಬರಬೇಕು, ಆರೋಗ್ಯ ಸಮಸ್ಯೆ ಸರಿ ಹೋಗಬೇಕಾದರೆ ಈ ಮಂತ್ರವನ್ನು 3 ನಿಮಿಷ ಪಠಿಸಿ ಸಾಕು…!
ಪ್ರಮುಖ ದಿನಾಂಕಗಳು:-
 ● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 24 ನವೆಂಬರ್, 2023.
 ● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಡಿಸೆಂಬರ್, 2023
 ● ಪರೀಕ್ಷೆ ನಡೆಯುವ ದಿನಾಂಕ – ಫೆಬ್ರವರಿ 2024.
