ಪ್ರತಿಯೊಬ್ಬ ವ್ಯಕ್ತಿಯು ಕೂಡ ಒಂದು ಜೀವವಿಮೆ ಹೊಂದಿರಲೇಬೇಕು. ಯಾಕೆಂದರೆ ಮನುಷ್ಯನಿಗೆ ಯಾವಾಗ ಬೇಕಾದರೂ ಅ’ಪ’ಘಾ’ತವಾಗಬಹುದು ಅಥವಾ ಅ’ಪ’ಮೃ’ತ್ಯು ಬರಬಹುದು ಅಂತಹ ಸಂದರ್ಭಗಳಲ್ಲಿ ಜೀವ ವಿಮೆಗಳು ಕುಟುಂಬಕ್ಕೆ ಆಧಾರವಾಗುತ್ತದೆ. ಮನೆಗೆ ಆಧಾರವಾಗಿದ್ದ ಕುಟುಂಬದ ಸದಸ್ಯನೇ ಇಲ್ಲವಾದಾಗ ಅಥವಾ ಇನ್ನೇನಾದರೂ ಗಂಭೀರ ಸಮಸ್ಯೆಗಳಾಗಿ ದುಡಿಯಲು ಸಾಧ್ಯವಾಗದೇ ಹೋದಾಗ ಜೀವವಿಮೆಗಳು (Life Insurance) ಕೈ ಹಿಡಿಯುತ್ತವೆ.
LIC ಸೇರಿದಂತೆ ಅನೇಕ ಖಾಸಗಿವಲಯದ ಸಂಸ್ಥೆಗಳಲ್ಲಿ ಜೀವವಿಮೆಗಳನ್ನು ಖರೀದಿಸಬಹುದು. ಈಗ ಕೇಂದ್ರ ಸರ್ಕಾರ ಕೂಡ ಅಂಚೆಕಛೇರಿಗಳಲ್ಲಿ ಕಡಿಮೆ ಪ್ರೀಮಿಯಂ ಗೆ ಈ ಟರ್ಮ್ ಇನ್ಸೂರೆನ್ಸ್ (term Insurance) ಮಾಡಿಸಬಹುದಾದ ಅನುಕೂಲತೆ ಮಾಡಿಕೊಟ್ಟಿದೆ ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಯೋಜನೆಯ ಹೆಸರು:- ಪೋಸ್ಟ್ ಆಫೀಸ್ ಗಾರ್ಡ್ ಇನ್ಸೂರೆನ್ಸ್ ಪಾಲಿಸಿ (Post office Insurance policy).
● ಭಾರತದ ನಾಗರಿಕರಾಗಿರಬೇಕು
● 18 ವರ್ಷ ಮೇಲ್ಪಟ್ಟ 65 ವರ್ಷ ವಯಸ್ಸಿನ ಒಳಗಿನವರು ಮಾತ್ರ ಈ ಯೋಜನೆಯನ್ನು ಖರೀದಿಸಬಹುದು.
● ಅಂಚೆ ಕಚೇರಿಯಲ್ಲಿ ಮಾತ್ರ ಈ ಯೋಜನೆ ಖರೀದಿಸಲು ಅವಕಾಶ
● ಈ ಇನ್ಶೂರೆನ್ಸ್ ಮಾಡಿಸುವ ಸಮಯದಲ್ಲಿ ಕೇಳಲಾಗುವ ದಾಖಲೆಗಳು
1. ಆಧಾರ್ ಕಾರ್ಡ್
2. ಬ್ಯಾಂಕ್ ಅಕೌಂಟ್ ಮಾಹಿತಿ
3. ಮೊಬೈಲ್ ನಂಬರ್
4. ನಾಮಿನಿ ವಿವರ
● ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ಆ ಖಾತೆ ಮೂಲಕವೇ ಇನ್ಶೂರೆನ್ಸ್ ಮಾಡಿಸಬಹುದು.
ಈ ಇನ್ಶುರೆನ್ಸ್ ಗೆ ನೀವು ವಾರ್ಷಿಕವಾಗಿ 399ರೂ. ಪಾವತಿಸಿದರೆ ಸಾಕು 10 ಲಕ್ಷದ ವರೆಗೂ ಕೂಡ ನಿಮಗೆ ಬೆನಿಫಿಟ್ ಇರುತ್ತದೆ.
● ನೀವು 399ರೂ. ಪ್ರೀಮಿಯಂ ಪಾವತಿಸಿದ ಮೇಲೆ ಆ ವರ್ಷ ಪೂರ್ತಿ ನಿಮಗೆ ಅ’ಪ’ಘಾ’ತ ವಿಮೆ ಇರುತ್ತದೆ. ಇದು ಮುಂದಿನ ವರ್ಷಕ್ಕೆ ಮುಂದುವರೆಯಬೇಕು ಎಂದರೆ ಒಂದು ವರ್ಷ ಮುಗಿದ ಬಳಿಕ ಅದೇ ದಿನಾಂಕದಂದು ತಪ್ಪದೆ ನೀವು ಮತ್ತೊಮ್ಮೆ ಈ ಪ್ರೀಮಿಯಂ ಪಾವತಿಸಿ ರಿನಿವಲ್ ಮಾಡಿಕೊಳ್ಳಬೇಕು.
● ಉದಾಹರಣೆಯೊಂದಿಗೆ ವಿವರಿಸುವುದಾದರೆ,
1. ಒಬ್ಬ ವ್ಯಕ್ತಿಯು 30ನೇ ವರ್ಷದಲ್ಲಿ ಈ ಇನ್ಶುರೆನ್ಸ್ ಖರೀದಿಸಿದ್ದಾನೆ ಎಂದು ಇಟ್ಟುಕೊಳ್ಳೋಣ, 2 ವರ್ಷ ಆತ 399ರೂ. ಕೊಟ್ಟು ಇನ್ಸೂರೆನ್ಸ್ ಚಾಲ್ತಿಯಲ್ಲಿ ಇರಿಸಿಕೊಂಡಿದ್ದಾಗ ಎರಡನೇ ವರ್ಷದಲ್ಲಿ ಆತನಿಗೆ ಅ’ಪ’ಘಾ’ತವಾಗುತ್ತದೆ. ಆ ಅ’ಪ’ಘಾ’ತದಲ್ಲಿ ವ್ಯಕ್ತಿ ಮೃ’ತ ಪಟ್ಟಿದ್ದಲ್ಲಿ ಅವನ ಕುಟುಂಬಕ್ಕೆ 10 ಲಕ್ಷ ಜೀವವಿಮೆ ಸಿಗುತ್ತದೆ ನಂತರ ಈ ಇನ್ಸೂರೆನ್ಸ್ ಕ್ಲೋಸ್ ಆಗುತ್ತದೆ.
2. ಅ’ಪ’ಘಾ’ತಂದ ವ್ಯಕ್ತಿ ದೇಹದ ಯಾವುದೇ ಭಾಗ ಹೂನವಾದರೆ ಆಗಲೂ ಸಹ ಯೋಜನೆ ಖರೀದಿಸಿದ ಗ್ರಾಹಕನಿಗೆ 10 ಲಕ್ಷ ಜೀವ ವಿಮೆ ಸಿಗುತ್ತದೆ.
3. ಇದಲ್ಲದೆ ಆತ ಚಿಕಿತ್ಸೆ ಹೊಂದುತ್ತಿದ್ದರೆ ಆತನ ಮೆಡಿಕಲ್ ಎಮರ್ಜೆನ್ಸಿಗಾಗಿ ಸೀರಿಯಸ್ ಕಂಡಿಷನ್ ಗಳಲ್ಲಿ 60,000ರೂ. ಹಾಗೂ ಸಾಮಾನ್ಯ ಕಂಡಿಷನ್ ಗಳಲ್ಲಿ 30,000ರೂ. ಹಣ ಸಿಗುತ್ತದೆ.
4. ಈ ಗ್ರೂಪ್ ಆಕ್ಸಿ-ಡೆಂಟ್ ಗಾರ್ಡ್ ಇನ್ಸೂರೆನ್ಸ್ ಪಾಲಿಸಿ ಖರೀದಿಸಿ ಅ’ಪ’ಘಾ’ತ ಹೊಂದಿದ್ದ ವ್ಯಕ್ತಿಯ ಇಬ್ಬರು ಮಕ್ಕಳಿಗೆ ವಾರ್ಷಿಕವಾಗಿ ತಲಾ 1 ಲಕ್ಷ ಶೈಕ್ಷಣಿಕ ವಿದ್ಯಾಭ್ಯಾಸದ ಖರ್ಚಿಗೆ ಹಣ ನೀಡುತ್ತದೆ.
5. ಅ’ಪ’ಘಾ’ತ ಆದ ವ್ಯಕ್ತಿಯು ಹಾಸ್ಪಿಟಲ್ ಆದಾಗ 10 ದಿನಗಳವರೆಗೆ ಆತನಿಗೆ 1,000 ನೀಡಲಾಗುತ್ತದೆ.
6. ಫ್ಯಾಮಿಲಿ ಟ್ರಾಸ್ಪೊರೇಷನ್ ಬೆನಿಫಿಟ್ಸ್ ಎನ್ನುವ ಮತ್ತೊಂದು ಅನುಕೂಲತೆ ಕೂಡ ಸಿಗುತ್ತದೆ. ಹೀಗೆಂದರೆ ಅ’ಪ’ಘಾ’ತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಚಾರ್ಜಿಂಗ್ 25,000 ಕ್ಲೈಮ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಭೇಟಿ ಮಾಡಿ.! ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ