ನಿವೃತ್ತರಾದ ಹಿರಿಯ ವಯಸ್ಕರಿಗೂ ಅವರದ್ದೇ ಆದ ಖರ್ಚು ವೆಚ್ಚಗಳು ಇರುತ್ತವೆ. ದುಡಿಯುತ್ತಾ ಇರುವಾಗ PPF, NPS ಮತ್ತ್ಯಾವುದೋ ಯೋಜನೆಗೆ ಮೂಲಕ ಸ್ವಲ್ಪ ಹಣ ಉಳಿತಾಯ ಮಾಡಿದ್ದರು ಅದನ್ನು ಹಾಗೆಯೇ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹಣವನ್ನು ಒಂದೊಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರ ಮೂಲಕ ಬರುವ ಲಾಭವನ್ನು ಪ್ರತಿ ತಿಂಗಳ ಖರ್ಚಿಗಾಗಿ ಇಟ್ಟುಕೊಳ್ಳಬಹುದು.
ಈ ರೀತಿ ಯೋಚಿಸುವವರಿಗೆ ಅನುಕೂಲ ಆಗಲಿ ಎಂದು ಕೇಂದ್ರ ಸರ್ಕಾರವು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಜಾರಿಗೆ ತಂದಿದೆ. ಯೋಜನೆ ಕುರಿತ ಪ್ರಮುಖ ಮಾಹಿತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
ಯೋಜನೆ ಹೆಸರು:- ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme)
● ಭಾರತದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಹರು.
● 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಷ್ಟೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ, ಆದರೆ ನೀವು ಎಕ್ಸ್ ಸರ್ವಿಸ್ ಮ್ಯಾನ್ ಆಗಿದ್ದರೆ 50 ವರ್ಷಕ್ಕೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ಯೋಜನೆಯಡಿ ಹೂಡಿಕೆ ಮಾಡಿದ 8% ಬಡ್ಡಿದರ ನಿಗದಿಯಾಗಿದೆ.
● ವರ್ಷದಲ್ಲಿ 4 ಬಾರಿ ಅಂದರೆ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಅನ್ವಯವಾಗುವ ಬಡ್ಡಿದರವು ಲಾಭದ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಗೆ ಬರುತ್ತದೆ.
● ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 31 ಈ ದಿನಾಂಕಗಳಂದು ನಿಮ್ಮ ಉಳಿತಾಯ ಖಾತೆಗೆ ಇಂಟರೆಸ್ಟ್ ಹಣ ಜಮೆ ಆಗುತ್ತದೆ.
● ಈ ಯೋಜನೆಯಡಿ ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡಬೇಕು.
● ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು, ಈ ಅವಧಿ ಮುಗಿದ ಬಳಿಕವು ಮುಂದುವರೆಸುವ ಇಚ್ಛೆ ಇದ್ದರೆ ಅದಕ್ಕೂ ಅವಕಾಶವಿದೆ.
● ಈಗಾಗಲೇ ನೀವು ಒಂದು ಬಾರಿ ಖಾತೆ ತೆರೆದು ಹಣ ಹೂಡಿಕೆ ಮಾಡಿದ್ದೀರಾ ಮತ್ತೊಮ್ಮೆ ನಿಮ್ಮ ಬಳಿ ಹಣ ಇದೆ, ಈಗ ಅದನ್ನು ಹಳೆ ಯೋಜನೆಗೆ ಸೇರಿಸಬಹುದೇ ಎಂದರೆ ಸಾಧ್ಯವಿಲ್ಲ, ನೀವು ಮತ್ತೊಮ್ಮೆ ಹೊಸ ಖಾತೆಯಲ್ಲಿ ಹೂಡಿಕೆ ಮಾಡಬೇಕು.
● ಕನಿಷ್ಠ 1,000 ದಿಂದ ಗರಿಷ್ಠ 30 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು.
● ಉದಾಹರಣೆಯೊಂದಿಗೆ ವಿವರಿಸುವುದಾದರೆ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 30 ಲಕ್ಷ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯಡಿ ಹೂಡಿಕೆ ಮಾಡಿದ್ದಾರೆ ಎಂದುಕೊಳ್ಳೋಣ. ಈಗ ಅವರಿಗೆ 8% ಬಡ್ಡಿದರದಲ್ಲಿ, 5 ವರ್ಷ ಮುಗಿದ ಬಳಿಕ ಸಿಗುವ ಮೊತ್ತ 42 ಲಕ್ಷವಾಗಿರುತ್ತದೆ. ಅಂದರೆ ಬರೋಬ್ಬರಿ 12 ಲಕ್ಷ ಹಣವನ್ನು ನೀವು ಲಾಭವಾಗಿ ಪಡೆದಿರುತ್ತೀರಿ. ಪ್ರತಿ ತ್ರೈಮಾಸಿಕವಾಗಿ ಈ ಬಡ್ಡಿ ಜನರೇಟ್ ಆಗಿರುವುದರಿಂದ ಅದನ್ನ ನೀವು ತ್ರೈಮಾಸಿಕವಾಗಿ ಪಡೆದು ಬಳಸುವುದರಿಂದ ಪ್ರತಿ ತ್ರೈಮಾಸಿಕದ ಲೆಕ್ಕ ಹೇಳುವುದಾದರೆ 60,000ರೂ. ಅಂದರೆ ತಿಂಗಳಿಗೆ 20,000 ನಿಮ್ಮ ಆದಾಯವಾಗುತ್ತದೆ.
● ನೀವೇನಾದರೂ 10 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರೆ ಅಂತ್ಯದಲ್ಲಿ 14 ಲಕ್ಷ ಹಣವನ್ನು ಪಡೆದಿರುತ್ತೀರಿ. 4 ಲಕ್ಷವು ನಿಮಗೆ ಬಡ್ಡಿರೂಪದಲ್ಲಿ ಬಂದಿರುತ್ತದೆ ಅಂದರೆ ಪ್ರತಿ ತ್ರೈಮಾಸಿಕಕ್ಕೆ 20,000ರೂ. ಹಣ ನಿಮ್ಮ ಖಾತೆಗೆ ಬರುತ್ತದೆ.
● ನೀವು ಈ ಯೋಜನೆಯಲ್ಲಿ ಹೂಡಿಕೆ ಹಣಕ್ಕೆ 1.5 ಲಕ್ಷದವರೆಗೆ 80C ನಿಯಮದಡಿ ತೆರಿಗೆ ವಿನಾಯಿತಿ ಇದೆ.ನೀವು ಪಡೆಯುವ ಲಾಭವು ವಾರ್ಷಿಕವಾಗಿ 60,000 ಮೇಲಿದ್ದರೆ TDS ಕೂಡ ಅನ್ವಯವಾಗುತ್ತದೆ.
● ಮೆಚ್ಯುರಿಟಿ ಅವಧಿಗೂ ಮುನ್ನ ನೀವು ಹೂಡಿಕೆ ಹಿಂಪಡೆಯುವುದಾದರೆ ದಂಡ ಕೂಡ ಬೀಳುತ್ತದೆ. 1 ವರ್ಷದ ಒಳಗಾದರೆ ನಿಮ್ಮ ಖಾತೆಗೆ ಬಿದ್ದ ಬಡ್ಡಿ ಮೊತ್ತವನ್ನು ಕಳೆದು ಹಣ ಮಾಡಲಾಗುತ್ತದೆ. 1-2 ವರ್ಷದಲ್ಲಿ ಹಿಂಪಡೆಯುವುದಾದರೆ 1.5% ಹಣವನ್ನು ಫೈನ್ ಆಗಿ ಕಡಿತಗೊಳಿಸಲಾಗುತ್ತದೆ. 2-5 ವರ್ಷಗಳಲ್ಲಿ ಹಿಂಪಡೆಯುವುದಾದರೆ ಹೂಡಿಕೆಯ 1% ಕಡಿತಕೊಳ್ಳುತ್ತದೆ.
● ಒಂದು ವೇಳೆ ಹೂಡಿಕೆದಾರರು ಮೃ’ತ ಪಟ್ಟರೆ ಅಸಲು ಹಾಗೂ ಬಡ್ಡಿರೂಪದ ಹಣ ನಾಮಿನಿಗೆ ಸೇರುತ್ತದೆ.