ಕ್ಯಾನ್ಸರ್ ಪೇಶಂಟ್ ಗಳಿಗೆ (Cancer) ಮೂರು ರೀತಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಕಿಮೋಥಿರಪಿ, ಆಪರೇಷನ್ ಮತ್ತು ರೇಡಿಯೇಶನ್ ಮೂಲಕ. ಕ್ಯಾನ್ಸರ್ ಯಾವ ಸ್ಟೇಜ್ ನಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಟ್ರೀಟ್ಮೆಂಟ್ ನಿರ್ಧಾರವಾಗುತ್ತದೆ ಆರಂಭಿಕ ಸ್ಟೇಜಾ ಗಳಲ್ಲಿ ಕಿಮೋಥೆರಫಿ (Chemotherapy) ಮೂಲಕವೇ ರೋಗವನ್ನು ಗುಣ ಪಡಿಸಬಹುದು.
ಕಿಮೋಥೆರಪಿ ಎಂದರೇನು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನೋಡಿ ಕ್ಯಾನ್ಸರ್ ಪೇಷಂಟ್ ಗೆ ಕಿಮೋಥೆರಪಿ ಎಂದು ಹೇಳಿದ ತಕ್ಷಣವೇ ಕೂದಲು ಹೋಗುತ್ತದೆ ಎಂದು ಆಪರೇಷನ್ ಬೇಕಾದರೂ ಮಾಡಿ ಕಿಮೋಥೆರಪಿ ಬೇಡ ಎನ್ನುತ್ತಾರೆ ಎಲ್ಲರಿಗೂ ಹೀಗೆ ಮಾಡುತ್ತಾರೆ ಎಂದುಕೊಂಡು ಬಿಟ್ಟಿರುತ್ತಾರೆ.
ಆದರೆ ಎಲ್ಲರಿಗೂ ಇದೇ ಚಿಕಿತ್ಸೆ ರೆಫರ್ ಮಾಡುವುದಿಲ್ಲ, ಆದರೆ ಒಂದು ಪ್ರಾಣವೇ ಹೋಗುತ್ತಿರುವಾಗ ಕೂದಲು ಮುಖ್ಯವಾಗುತ್ತದೆಯೇ ಹೇಳಿ. ಈ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕಿಮೋಥೆರಪಿ ಯಾಕೆ ಮಾಡುತ್ತಾರೆ ಎಂದರೆ ಒಬ್ಬ ಜ್ವರ ಬಂದಿರುವ ವ್ಯಕ್ತಿಗೆ ಆಂಟಿ ಬಯೋಟಿಕ್ ನೀಡಿ ರೋಗದ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಅದೇ ರೀತಿಯಾಗಿ ದೇಹದಲ್ಲಿ ಇರುವ ಕ್ಯಾನ್ಸರ್ ಸೆಲ್ಸ್ ಗಳನ್ನು ನಾಶ ಮಾಡಲು ಕಿಮೋಥೆರಪಿ ಮಾಡಲಾಗುತ್ತದೆ.
ಕ್ಯಾನ್ಸರ್ ಆಗಿದೆ ಎಂದರೆ ದೇಹದ ಒಂದು ಭಾಗ ಹಾಳಾಗಿದೆ, ಇದರಿಂದ ದೇಹದ ಆರೋಗ್ಯ ಕೆಡುತ್ತಿದೆ, ಹಾಗೇ ಬಿಟ್ಟರೆ ಇದು ಮಾರಣಾಂತಿಕ ಹಂತ ತಲುಪಬಹುದು ಎಂದರ್ಥ. ಇದು ದೇಹದಲ್ಲಿ ಈ ಸೆಲ್ಸ್ ಮಲ್ಟಿಪಲ್ ಆಗದಂತೆ ತಡೆಯಲು ಕಿಮೋಥೆರಫಿ ಮಾಡುತ್ತಾರೆ. ಆದರೆ ಸಮಸ್ಯೆ ಏನು ಎಂದರೆ ಈ ಕ್ಯಾನ್ಸರ್ ಗಳು ಸೆಲ್ ಗಳಂತೆ ನಮ್ಮ ದೇಹದಲ್ಲಿ ಇನ್ನೂ ಕೆಲವು ಸೇಲ್ಸ್ ಗಳು ಮಲ್ಟಿಪೈ ಆಗುತ್ತಿರುತ್ತವೆ.
ನಮ್ಮ ರಕ್ತ ಕಣ, ಕೂದಲು, ಉಗುರು, ಚರ್ಮ ಇವುಗಳ ಸೆಲ್ಸ್ ಗಳು ಪ್ರತಿದಿನವೂ ಬೆಳೆಯುತ್ತಿರುತ್ತವೆ ಆದರೆ ಕಿಮೋಥೆರಫಿ ಮಾಡಿದಾಗ ಅದು ದೇಹಕ್ಕೆ ಅನುಕೂಲಕರವಾಗಿರುವ ಸೆಲ್ ಗಳು ಹಾಗೂ ಈ ಕಾಯಿಲೆಯ ಸೆಲ್ಸ್ ಗಳನ್ನು ಗುರುತಿಸಲು ವಿಫಲವಾಗುತ್ತದೆ. ಆದ ಕಾರಣ ಕೂದಲು ಉದುರುವುದು, ಚರ್ಮ ಕಪ್ಪಾಗುವುದು, ಉಗುರು ನೀಲಿಯಾಗುವುದು ಆಗುತ್ತದೆ.
ಆದರೆ ಒಮ್ಮೆ ನಿಮ್ಮ ದೇಹವು ಸಂಪೂರ್ಣವಾಗಿ ಕ್ಯಾನ್ಸರ್ ನಿಂದ ಗುಣಮುಖವಾದಾಗ ಮದರ್ ಸೆಲ್ಸ್ ಗಳು ಚೆನ್ನಾಗಿರುವುದರಿಂದ ಮತ್ತೆ ಕೂದಲು ಬೆಳೆಯಲು ಶುರು ಆಗುತ್ತದೆ, ಉಗುರು ಕೂಡ ಬೆಳೆಯುತ್ತಾ ಇದ್ದಂತೆ ಸರಿ ಹೋಗುತ್ತದೆ, ಚರ್ಮದ ಬಣ್ಣವೂ ಸರಿ ಹೋಗುತ್ತದೆ, ರಕ್ತಕಣದ ಜೀವಿತಾವಧಿ ಮೂರು ತಿಂಗಳಾಗಿರುವುದರಿಂದ ಹೊಸ ಜೀವಕಣಗಳು ಸೃಷ್ಟಿಯಾಗುತ್ತವೆ.
ಹಾಗಾಗಿ ಕೆಮೋಥೆರಪಿಯಿಂದ ಕೂದಲು ಹೋಗುತ್ತದೆ ಎನ್ನುವ ಭಯ ಬೇಡ ಎನ್ನುತ್ತಾರೆ ತಜ್ಞ ವೈದ್ಯರು. ಈಗ ಟೆಕ್ನಾಲಜಿ ಸಾಕಷ್ಟು ಬದಲಾಗುತ್ತಿದೆ ಕಿಮೋಥೆರಪಿ ದ್ವಿಗಣವಾಗುತ್ತಿದ್ದ ಎಲ್ಲಾ ಸೆಲ್ಸ್ ಗಳನ್ನು ಕೊಲ್ಲುತ್ತಿದ್ದ ಕಾರಣ ಅದರ ಬದಲು ಟಾರ್ಗೆಟ್ ಕತೆರಪಿ ಎಂದು ಬಂದಿದೆ. ಇದರಲ್ಲಿ ಕ್ಯಾನ್ಸರ್ ನ್ನು ಗುರಿ ಮಾಡಿ ಇಟ್ಟುಕೊಂಡು ಕೊಲ್ಲಲಾಗುತ್ತಿದೆ.
ಮಾತ್ರೆಗಳ ರೂಪದಲ್ಲೂ ಕೂಡ ಚಿಕಿತ್ಸೆ ಇದೆ ಮನೆಗಳಲ್ಲಿ ಔಷಧಿ ಸೇವಿಸುವ ಅವಕಾಶಗಳಿವೆ. ಔಷಧಿ ಸೇವಿಸಿ ಆಸ್ಪತ್ರೆಗೆ, ಶಾಲೆಗೆ ಹೋಗಿರುವ ರೋಗಿಗಳ ಉದಾಹರಣೆ ಇದೆ. ಅದೇ ರೀತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾನವನ ದೇಹದ ರೋಗ ನಿರೋಧಕ ಶಕ್ತಿ ಮೂಲಕವೇ ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಔಷಧಿ ಕಂಡು ಹಿಡಿಯಲಾಗುತ್ತಿದೆ.
ಹೀಗಾಗಿ ಉದುರಿ ಹೋಗುವ ಕೂದಲ ಬಗ್ಗೆ ಚಿಂತೆ ಬೇಡ, ಮದರ್ ಸೆಲ್ಸ್ ಜೀವಂತವಾಗಿ ಇರುವುದರಿಂದ ನಿಮ್ಮ ಕಾಯಿಲೆ ಗುಣವಾದರೆ ಮೊದಲಿಗಿಂತ ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಹೊಸ ಕೂದಲು ಬೆಳೆಯುತ್ತದೆ ಎಂದು ಹೇಳುತ್ತಾರೆ ತಜ್ಞ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!