ಹಿಂದೆಲ್ಲ ಮನೆಯಲ್ಲಿ ಗೋವುಗಳನ್ನು ಸಾಕುತ್ತಿದ್ದರು. ರೈತರ ಕುಟುಂಬದಲ್ಲಂತೂ ಹಸು ದನ ಕರುಗಳಿಗೆ ಬಹಳ ದೊಡ್ಡ ಸ್ಥಾನವನ್ನೇ ಕೊಡುತ್ತಿದ್ದರು. ಹೆಚ್ಚಿನ ಮನೆಗಳಲ್ಲಿ ಮನೆಯಿಂದ ಹೊರಗೆ ಹಸುವಿನ ಕೊಟ್ಟಿಗೆ ಇರುತ್ತಿರಲಿಲ್ಲ, ಮನೆ ಒಳಗಡೆಗೆ ಹಟ್ಟಿ ಇರುತ್ತಿತ್ತು. ಬೆಳಗ್ಗೆ ಎದ್ದ ಕೂಡಲೇ ಗೋವುಗಳ ಮುಖ ನೋಡುವುದಕ್ಕೆ ಮತ್ತು ಗೋವುಗಳನ್ನು ಜೋಪಾನ ಮಾಡುವುದಕ್ಕೆ ಇದು ನೆರವಾಗುತ್ತಿತ್ತು.
ಆ ಕಾಲದಲ್ಲಿ ನಾಯಿಗಳು ಮನೆ ಹೊರಗೆ ಇರುತ್ತಿದ್ದವು. ನಾಯಿಯನ್ನು ಮನೆ ಕಾಯಲು ಇಡಲಾಗುತ್ತಿತ್ತು. ನಾಯಿ ಮನೆ ಒಳಗಡೆ ಬಂದರೆ ಅದನ್ನು ಅಶುಭ ಎಂದು ಹೇಳಿ ಶುದ್ದಿ ಮಾಡುತ್ತಿದ್ದರು. ನಾಯಿ ಒಳಗೆ ಬರಬಾರದು ಎಂದೇ ಭಾವನೆ ಇತ್ತು, ಆದರೆ ಈಗ ಕಾಲ ಎಷ್ಟೊಂದು ಬದಲಾಗಿ ಹೋಗಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆ ಮನೆಗಳಲ್ಲಿ ನಾಯಿ ಸಾಕುತ್ತಾರೆ. ನಾಯಿ ಸಾಕುವುದು ಸಾಮಾನ್ಯ ಸಂಗತಿಯೇ ಸರಿ ಆದರೆ ಒಂದು ನಾಯಿಯನ್ನು ಒಂದು ಮಗುವಿನ ರೀತಿ ಮನೆಯಲ್ಲಿ ಕೇರ್ ಮಾಡುತ್ತಾರೆ ಇದು ಕೂಡ ಒಪ್ಪವುದೇ ಆದರೆ ಅನೇಕರು ತಮ್ಮ ಬೆಡ್ರೂಮ್ ಒಳಗೆ ನಾಯಿಗಳನ್ನು ಬಿಟ್ಟುಕೊಳ್ಳುತ್ತಾರೆ, ನಾಯಿಗಳನ್ನು ಮುದ್ದು ಮಾಡುತ್ತಾರೆ.
ಈ ರೀತಿ ನಿಮಗೂ ಕೂಡ ಅಭ್ಯಾಸ ಇದ್ದರೆ ಒಮ್ಮೆ ಈ ಅಂಕಣವನ್ನು ನೋಡಿ ನಾಯಿಗಳನ್ನು ಇಷ್ಟು ಹಚ್ಚಿಕೊಳ್ಳುವುದು ಬೇಕಾ ಅಥವಾ ಇದೆಷ್ಟು ಒಳ್ಳೆಯದು ಎನ್ನುವುದನ್ನು ಒಂದೊಮ್ಮೆ ಅವಲೋಕಿಸಿ. ಯಾಕೆಂದರೆ ನೀವು ಪ್ರೀತಿಯಿಂದ ಸಾಕುತ್ತಿರುವ ಪ್ರಾಣಿಯೇ ಮುಂದೊಂದು ದಿನ ನಿಮ್ಮ ಆರೋಗ್ಯದ ವ್ಯತ್ಯಾಸಕ್ಕೆ ಅಥವಾ ಗಂಭೀರ ಕಾಯಿಲೆಗೆ ಕಾರಣವಾಗಿ ಬಿಡಬಹುದು.
ಮನುಷ್ಯ ಸಂಘ ಜೀವಿ, ಪಶು ಪಕ್ಷಿಗಳು ಕೂಡ ಆತನ ಜೀವನದ ಒಂದು ಭಾಗ. ಹಿಂದೆ ಅನುಕೂಲತೆಗಾಗಿ ಅಥವಾ ಈಗ ಮನರಂಜನೆಗಾಗಿ ಅಥವಾ ಹವ್ಯಾಸಕ್ಕಾಗಿ ಈ ರೀತಿ ಪ್ರಾಣಿಗಳನ್ನು ಸಾಕುವ ಅಭ್ಯಾಸ ಇದ್ದೇ ಇರುತ್ತದೆ. ಆದರೆ ಈ ಬಗ್ಗೆ ಜೋಪಾನವಾಗಿರಬೇಕು ಯಾಕೆಂದರೆ ಒಂದು ಗೋವು ಶುದ್ದವಾಗಿರುವಷ್ಟು ಒಂದು ನಾಯಿಯು ಶುದ್ಧವಾಗಿರುವುದಿಲ್ಲ.
ಅದರಲ್ಲೂ ನಾಯಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿರುತ್ತೇವೆ ಅಥವಾ ಹೊರಗಡೆ ಹೋಗಲು ಬಿಡುತ್ತೇವೆ. ಅಂತಹ ಸಮಯದಲ್ಲಿ ಅದು ಎಲ್ಲಿ ಹೋಗಿರುತ್ತದೆ ಯಾವುದರ ಮೇಲೆ ಬಿದ್ದಿರುತ್ತದೆ ಅದು ಬಂದು ಮತ್ತೆ ನಿಮ್ಮ ಬೆಡ್ ಮೇಲೆ ಮಲಗಿಕೊಳ್ಳುತ್ತದೆ ನೀವು ಅದೇ ಬೆಡ್ಡಿನಲ್ಲಿ ಅದರ ಜೊತೆ ಮಲಗಿಕೊಂಡರೆ ಖಂಡಿತವಾಗಿಯೂ ಅದರಲ್ಲಿರುವ ಇನ್ಫೆಕ್ಷನ್, ವೈರಸ್ ಎಲ್ಲವೂ ನಿಮಗೂ ಸಹ ಹಬ್ಬಿ ಇದು ನಿಮ್ಮ ಆರೋಗ್ಯ ವ್ಯವಸ್ಥೆಯನ್ನು ಉಲ್ಟಾಪಲ್ಟ ಮಾಡಿಬಿಡಬಹುದು.
ಮನುಷ್ಯನಿಂದ ಮನುಷ್ಯನಿಗೆ ವೈರಸ್ ಹರಡುತ್ತದೆ, ಅದರಲ್ಲೂ ಮನುಷ್ಯ ಬಹಳ ಶುದ್ಧವಾಗಿರುತ್ತಾನೆ. ಆದರೂ ಅನೇಕ ಬಾರಿ ವೈರಲ್ ಅಥವಾ ಬ್ಯಾಕ್ಟೀರಿಯಾ ಫೀವರ್ ಯಿಂದ ನರಳಾಡುತ್ತಾನೆ. ಇಂತಹದರಲ್ಲಿ ಒಂದು ನಾಯಿಯನ್ನು ಮನುಷ್ಯರಿಗಿಂತ ಹೆಚ್ಚಾಗಿ ಟ್ರೀಟ್ ಮಾಡುವುದರಿಂದ ಅದು ಯಾವ ರೀತಿ ಪರಿಣಾಮ ಬೀರಬಹುದು ಅಲ್ಲವೇ?
ನಿಮಗೆ ಸಾಕಲೇ ಬೇಕು ಎನ್ನುವ ಇಚ್ಛೆ ಇದ್ದರೆ ಮನೆಯ ಮಹಡಿ ಮೇಲೆ ಅಥವಾ ನಿಮ್ಮ ಮನೆಯಲ್ಲಿ ಯಾವುದು ಕೋಣೆಯಲ್ಲಿ ಒಂದಿಷ್ಟು ಜಾಗ ಮೀಸಲಿಡಿ, ಮನೆ ಪೂರ್ತಿ ಅದನ್ನು ಓಡಾಡಲು ಬಿಡಬೇಡಿ. ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಬಹಳಷ್ಟು ಈ ಬಗ್ಗೆ ಕಾಳಜಿ ತೋರಿ ನಾಯಿಗಳ ಮೇಲೆ ದಯೆ ಪ್ರೀತಿ ಕರುಣೆ ಎಲ್ಲವನ್ನು ತೋರಿಸಿ ಆದರೆ ಅತಿಯಾಗಿ ಬೇಡ ಅಷ್ಟೇ.