ಸುಮ್ಮನೆ ನಮ್ಮ ಸುತ್ತಲೂ ಕಾಣಿಸುತ್ತಿರುವವರ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ ಸಾಕು. ಎಲ್ಲರ ಕೈ ನಲ್ಲೂ ಸ್ಮಾರ್ಟ್ ಫೋನ್. ಅದರಲ್ಲೂ ತಾವೇನು ಕೇಳುತ್ತಿದ್ದಾರೆ ಅಥವಾ ತಾವೇನು ನೋಡುತ್ತಿದ್ದರೆ ಎನ್ನುವುದು ಇನ್ನೊಬ್ಬರಿಗೆ ಡಿಸ್ಟರ್ಬ್ ಆಗಬಾರದು ಎನ್ನುವ ಕಾರಣಕ್ಕಾಗಿಯೋ ಅಥವಾ ಅವರ ಗುಟ್ಟು ತಿಳಿಯಬಾರದು ಎನ್ನುವದಕ್ಕಾಗಿಯೋ ಬ್ಲೂಟೂತ್ ಕಿವಿಯಲ್ಲಿ ಹಾಕಿಕೊಂಡಿರುತ್ತಾರೆ.
ಬ್ಲೂ ಟೂತ್ ಇಲ್ಲದಿದ್ದರೆ ಇಯರ್ ಫೋನ್ ಅಥವಾ ಇಯರ್ ಬಡ್ಸ್ ಹಾಕಿರುತ್ತಾರೆ. ಸಾಲದಕ್ಕೆ ಕೈಯಲೊಂದು ಸ್ಮಾರ್ಟ್ ವಾಚ್ ಕೂಡ ಇರುತ್ತದೆ ಇಷ್ಟೆಲ್ಲ ಸ್ಮಾರ್ಟ್ ಆಗುವ ಸ್ಮಾರ್ಟ್ ಟೆಕ್ನಾಲಜಿ ಬಳಸುವ ಅವಶ್ಯಕತೆ ಇದೆಯೇ ಎಂದು ವೈದ್ಯರನ್ನು ಕೇಳಿದರೆ ಖಂಡಿತವಾಗಿಯೂ ಇದ್ಯಾವುದೂ ಇಲ್ಲದಿದ್ದರೆ ಉತ್ತಮ ಎಂದು ಹೇಳುತ್ತಾರವರು.
ಆದರೆ ನಾವೆಲ್ಲ ಇದಕ್ಕೆ ಅಡಿಕ್ಟ್ ಆಗಿ ಎಷ್ಟೋ ದಿನಗಳಾಗಿದೆ ಇದಕ್ಕೆ ಪರ್ಯಾಯ ಏನಿರಬಹುದು ಎನ್ನುವುದಕ್ಕೆ ಕೂಡ ವೈದ್ಯರು ಪರಿಹಾರ ತಿಳಿಸಿದ್ದಾರೆ, ಅದರ ವಿವರ ಇಲ್ಲಿದೆ ನೋಡಿ. ಮೊದಲೆಲ್ಲಾ ಹೊರಗೆ ಹೋದಾಗ ಸಮಯ ನೋಡಿಕೊಳ್ಳುವ ಸಲುವಾಗಿ ಕೈಗಳಲ್ಲಿ ವಾಚ್ ಧರಿಸುತ್ತಿದ್ದರು. ನಂತರ ಅದು ಪ್ರತಿಷ್ಠೆಯಾಗಿ ಹಾಗೂ ಫ್ಯಾಷನ್ ಆಯ್ತು.
ಈಗ ವಾಚ್ ಬರಿ ವಾಚ್ ಹಾಗೆ ಉಳಿಯದೆ ಅದರಲ್ಲೊಂದು ಮಿನಿ ಪ್ರಪಂಚವೇ ಸೇರಿದೆ ಎಂದರೆ ತಪ್ಪಾಗಲಾರದು ನಮ್ಮ ಹಾರ್ಟ್ ಬೀಟ್ ರೇಟ್ ಅಳೆಯುವ ನಮ್ಮ ಸ್ಟೆಪ್ಸ್ ಕೌಂಟ್ ಮಾಡುವ ಎಕ್ಸಸೈಜ್ ಎಕ್ವಿಪ್ಮೆಂಟ್ ಆಗಿ ಸ್ಮಾರ್ಟ್ ಫೋನ್ ಬದಲಾಗಿದೆ ನಿಜಕ್ಕೂ ಇದರಲ್ಲಿ ಕೊಡುವ ಮಾಹಿತಿಯು ಅಷ್ಟು ಬದ್ಧವಾಗಿದೆಯೇ ಎಂದರೆ ಅಂದಾಜು ಅಷ್ಟೇ ಕಡಾ ಖಂಡಿತವಾಗಿ ಹೀಗಿಲ್ಲ ಎನ್ನುತ್ತಾರೆ ಡಾಕ್ಟರ್.
ಒಬ್ಬ ವ್ಯಕ್ತಿ ವೈದ್ಯರ ಅಣತಿ ಮೇರೆಗೆ ಬಾಡಿ ಚೆಕಪ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋದಾಗ ಆತನ ಮಾಹಿತಿ ಸಂಗ್ರಹಣೆಗೆ ವೈದ್ಯರಿಗೆ ಹೆಚ್ಚು ಕಡಿಮೆ ಒಂದು ದಿನದಷ್ಟು ಸಮಯ ಹಿಡಿಯುತ್ತದೆ, ಹಾಗಿದ್ದಲ್ಲಿ ಯಾವುದೇ ಒಂದು ಸಾಧನ ಇದನ್ನು ಸಾಧಿಸುತ್ತದೆ ಎಂದರೆ ಅದನ್ನು ನಂಬುವವರು ಶತದಡ್ಡರು ಎಂದೇ ಹೇಳಬಹುದು.
ಇದೊಂದು ಇಲ್ಯೂಷನ್ ಆಗಿ ಹೋಗಿದೆ. ನಿಖರ ಮಾಹಿತಿ ಅಲ್ಲದೆ ಒಂದು ಅಂದಾಜನ್ನು ನಂಬಿಕೊಂಡು ನಾವು ನಮ್ಮ ಟೆನ್ಶನ್ ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಬ್ಲೂಟೂತ್, ಏರ್ ಬಡ್ಸ್, ಏರ್ ಫೋನ್ ಗಳ ಅಭ್ಯಾಸದ ಬಗ್ಗೆ ಹೇಳುವುದಾದರೆ ಅದು ಕೂಡ ಇದಕ್ಕಿಂತಲೂ ಡೇಂಜರ್ ಎನ್ನುತ್ತಾರೆ ವೈದ್ಯರು.
ಯಾಕೆಂದರೆ ಅವುಗಳಲ್ಲೂ ಕೂಡ ರೇಡಿಯೇಶನ್ ಇರುತ್ತದೆ ಇವುಗಳ ಬಳಕೆಯಿಂದ ಮೆದುಳಿನ ನರಗಳ ಆರೋಗ್ಯದ ಮೇಲೆ ಹಾಗೂ ಕಣ್ಣು ಕಿವಿ ಹಲ್ಲುವಿನ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀಳುತ್ತದೆ. ಅದರಲ್ಲೂ ವಯರ್ಲೆಸ್ ಸಾಧನೆಗಳ ಬಳಕೆಯನ್ನು ಕಡಿಮೆ ಮಾಡುವುದೇ ಉತ್ತಮ ಎನ್ನುತ್ತಾರೆ.
ವೈದ್ಯರು ಹಾಗು ಅನಿವಾರ್ಯ ಸಂದರ್ಭದಲ್ಲಿ ಬಳಸಲೇಬೇಕಾದ ಅವಶ್ಯಕತೆ ಇದ್ದರೆ ವೈರ್ ಜೊತೆ ಕನೆಕ್ಷನ್ ಇರುವ ಏರ್ ಫೋನ್ ಅಥವಾ ಹೆಡ್ ಸೆಟ್ ಹಾಕಿಕೊಳ್ಳುವುದು ಇಯರ್ ಬಡ್ಸ್, ಬ್ಲೂ ಟೂತ್ ಈ ರೀತಿಯ ಕಿವಿ ಒಳಗೆ ಹಾಕಿಕೊಳ್ಳುವ ಸಾಧನಕ್ಕಿಂತ ತಕ್ಕಮಟ್ಟಿಗೆ ಪರಿಹಾರ.
ಆದರೆ ಕಡಿಮೆ ಬೆಲೆಗೆ ಸಿಗುವ ಲೋಕಲ್ ಸಾಧನೆಗಳನ್ನು ಬಳಸುವುದರ ಬದಲು ಒಳ್ಳೆ ಬ್ರಾಂಡೆಡ್ ಬಳಸಬೇಕು ಇಲ್ಲವಾದಲ್ಲಿ ಅದರ ಅಭ್ಯಾಸ ಬಿಡುವುದೇ ಒಳ್ಳೆಯದು. ಸ್ಮಾರ್ಟ್ ಫೋನ್ ಗಳು ಮಾತ್ರವಲ್ಲದೆ ಈ ರೀತಿಯ ಅದಕ್ಕೆ ಸಂಬಂಧಿಸಿದವು ಕೂಡ ಅತಿ ಹೆಚ್ಚು ರೇಡಿಯೇಶನ್ ಗಳನ್ನು ಉತ್ಪತ್ತಿ ಮಾಡಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇಂದಿನಿಂದಲೇ ಇವುಗಳನ್ನು ಬಿಟ್ಟುಬಿಡಿ.