ಸರ್ಕಾರದ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ (Gruhajyothi) ಕಳೆದೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ಅನೇಕ ಕುಟುಂಬಗಳು ಕಡಿಮೆ ವಿದ್ಯುತ್ ಬಿಲ್ ಪಡೆದಿದ್ದರು, ಇನ್ನು ಕೆಲವರು ಶೂನ್ಯ ವಿದ್ಯುತ್ ಬಿಲ್ (Free Current) ಪಡೆದಿದ್ದರು. ಆದರೆ ಎರಡೇ ತಿಂಗಳಿಗೆ ಇದು ಉಲ್ಟ ಆಗಿ ಹೆಚ್ಚಿನ ವಿದ್ಯುತ್ ಪಡೆ ಬಿಲ್ ಪಾವತಿಸುವಂತೆ ಆಗಿದೆ.
ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯಡಿ 10 20 30 ಬಿಲ್ ಪಡೆದವರೆಲ್ಲ ಈಗ ದಿಢೀರೆಂದು ಅಕ್ಟೋಬರ್ ತಿಂಗಳಿನಲ್ಲಿ 200,300 ರಿಂದ 600 ವರೆಗೆ ಕರೆಂಟ್ ಬಿಲ್ (October month current bill) ಪಡೆದಿದ್ದಾರೆ. ಅಕ್ಟೋಬರ್ ತಿಂಗಳ ವಿದ್ಯುತ್ ಮಾಪನ ಎಲ್ಲರಿಗೂ ಇಂತಹದೊಂದು ಅಚ್ಚರಿ ಉಂಟು ಮಾಡಿದೆ ಇದಕ್ಕೆ ಕಾರಣ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹಿಂದೊಮ್ಮೆ ಇದೇ ರೀತಿ ವ್ಯತ್ಯಾಸವಾದ ಇಂಧನ ಇಲಾಖೆಯು ತಾಂತ್ರಿಕ ದೋಷದಿಂದ ಎದ್ದು ಸಬೂಬು ಕೊಟ್ಟಿತ್ತು. ಆದರೆ ಈ ಬಾರಿ ಸ್ಪಷ್ಟವಾಗಿ ಈ ಸಮಸ್ಯೆ ತಾಂತ್ರಿಕ ದೋಷದಿಂದ ಉಂಟಾಗಿಲ್ಲ ಎಂದು ತಿಳಿಸಿದೆ. ಹಾಗಿದ್ದರೆ ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣವೇನು ಎಂದು ನೋಡುವುದಾದರೆ ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ, ಬೇಸಿಗೆ ಕಾಲದಲ್ಲಿ ನಾವು ಎಸಿ ಫ್ಯಾನ್ ಎಂದು ಹೆಚ್ಚು ವಿದ್ಯುತ್ ಬಳಸುತ್ತೇವೆ.
ರಾಜ್ಯದಲ್ಲಿ ಈ ಬಾರಿ ಬಹಳ ಬೇಗ ಮಳೆಗಾಲ ಮುಗಿದು ಹೋಯಿತು. ಮಳೆ ಕೊರತೆಯಿಂದಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಕೂಡ ಬಿರು ಬೇಸಿಗೆಯನ್ನು ಅನುಭವಿಸುವಂತೆ ಆಗಿದೆ ಇದರ ಪರಿಣಾಮ ಮತ್ತು ಇದರ ಜೊತೆಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಇದೆ ಎನ್ನುವುದರಿಂದ ಹೆಚ್ಚಿನ ಎಲೆಕ್ಟ್ರಿಕಲ್ ಉಪಕರಣಗಳನ್ನು ಕೂಡ ಬಳಸಲು ಶುರು ಮಾಡಿದ್ದೇವೆ ಈ ಕಾರಣದಿಂದಾಗಿ ಸಹಜವಾಗಿ ಬಳಕೆ ಮಾಡಿರುವಷ್ಟು ವಿದ್ಯುತ್ ಗೆ ಅನುಗುಣವಾಗಿ ಬಿಲ್ ಬಂದಿದೆ.
ಅಕ್ಟೋಬರ್ 12ನೇ ತಾರೀಖಿನಿಂದ ರಾಜ್ಯದಾದ್ಯಂತ ವಿದ್ಯುತ್ ವಿತರಣೆ ನಡೆದಿದೆ. ಇದನ್ನು ನೋಡಿದ ಗ್ರಾಹಕರು ಹೌಹಾರಿದ್ದಾರೆ. ಅದಕ್ಕೀಗ ಸ್ಪಷ್ಟತೆ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಬಹುತೇಕ ಗ್ರಾಹಕರ ವಿದ್ಯುತ್ ಬಳಕೆ ಗೃಹ ಜ್ಯೋತಿಯ ಸರಾಸರಿ ಮಿತಿಯನ್ನು ಮೀರಿದೆ. ಹೆಸ್ಕಾಂ (HESCOM) ವ್ಯಾಪ್ತಿಯಲ್ಲಿ ಕೂಡ ಪ್ರತಿ ಯೂನಿಟ್‌ಗೆ 1.56 ರೂ. ವಿದ್ಯುತ್ ವೆಚ್ಚ ಮತ್ತು ಯುನಿಟ್ ಮೇಲೆ ಶೇ.9%ರಷ್ಟು GST ಸೇರುವುದರಿಂದ ಹೆಚ್ಚುವರಿ ಯೂನಿಟ್ ವೆಚ್ ತಲಾ 9 ರೂ. ವರೆಗೆ ಆಗಿದೆ.
ಗೃಹಜ್ಯೋತಿ ಯೋಜನೆಯಡಿ ವಾರ್ಷಿಕವಾಗಿ ಬಳಕೆ ಮಾಡಿದ ವಿದ್ಯುತ್ ಗಿಂತ 10% ಹೆಚ್ಚಿಗೆ ಉಚಿತವಾಗಿ ನೀಡಲಾಗುತ್ತಿದೆ. ಆ ಪ್ರಕಾರ ಸರಾಸರಿ 90 ಯೂನಿಟ್‌ವರೆಗೆ ಉಚಿತ ವಿದ್ಯುತ್‌ಗೆ ಅರ್ಹವಾಗಿದ್ದ ಮನೆಯೊಂದರಲ್ಲಿ ಸೆಪ್ಟೆಂಬರ್ ನಲ್ಲಿ ವಿದ್ಯುತ್ ಬಳಕೆ 130 ಯೂನಿಟ್ ಆಗಿದೆ. ಆ ಬಿಲ್ ವಿತರಣೆಯಾಗಿದ್ದು 90 ಯುನಿಟ್ ಉಚಿತ ಮಿತಿ ದಾಟಿದ ನಂತರ ಹೆಚ್ಚುವರಿ ಪ್ರತಿ ಯುನಿಟ್‌ಗೆ ತಲಾ 1 ರೂ. ಮತ್ತು ಶೇ.9% ರಷ್ಟು GST ಹಾಗೂ 1.56 ವಿದ್ಯುತ್ ವೆಚ್ಚ ಸೇರಿಸಿ ಹೆಚ್ಚುವರಿ 40 ಯುನಿಟ್‌ಗೆ ಬಳಕೆಗೆ 360 ರೂ. ಕರೆಂಟ್ ಬಿಲ್ ಬಂದಿದೆ ಎಂದು ಸ್ಪಷ್ಟತೆ ಕೊಡುತ್ತಿದ್ದಾರೆ ಹೆಸ್ಕಾಂ ಸಿಬ್ಬಂದಿ.
ಇದುವರೆಗೂ ಕೂಡ ಬಹುತೇಕ ಜನರು ಇಂತಹದೊಂದು ಸೂಕ್ಷ್ಮ ವಿಷಯದ ಬಗ್ಗೆ ಗಮನವೇ ಕೊಟ್ಟಿರಲಿಲ್ಲ, ಮಳೆಗಾಲದ ವಿದ್ಯುತ್ ಬಳಕೆ ಹಾಗೂ ಬೇಸಿಗೆಗಾಲದ ವಿದ್ಯುತ್ ಬಳಕೆ ಎಷ್ಟು ವ್ಯತ್ಯಾಸ ಮಾಡುತ್ತಿದೆ ಎಂದು ಈಗ ಜನರಿಗೆ ಮನವರಿಕೆಯಾಗುತ್ತಿದೆ.