ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ (Bank account) ಹೊಂದಿರಲೇಬೇಕಾದದ್ದು ಅನಿವಾರ್ಯ. ಯಾಕೆಂದರೆ ಈಗ ಶಾಲೆಗೆ ಹೋಗುವ ಮಗುವಿಗೆ ಸಿಗುವ ವಿದ್ಯಾರ್ಥಿ ವೇತನದಿಂದ ಹಿಡಿದು ವೃದ್ಧರಿಗೆ ಸಿಕ್ಕಿರುವ ಪಿಂಚಣಿವರೆಗೆ ಎಲ್ಲವೂ ಕೂಡ ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತಿದೆ.

WhatsApp Group Join Now
Telegram Group Join Now

ಡಿಜೇಟಲಿಕರಣವನ್ನು ( Digitalization) ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ಲೆಸ್ ಕ್ಯಾಶ್ (less cash) ಧ್ಯೇಯದಡಿ ಹೆಚ್ಚಿನ ಹಣಕಾಸಿನ ವಹಿವಾಟು ಬ್ಯಾಂಕ್ ಖಾತೆ ಮೂಲಕವೇ ನಡೆಯುತ್ತಿದೆ. UPI ಆಧಾರಿತ ಆಪ್ ಗಳ ಬಳಕೆಗೂ ಬ್ಯಾಂಕ್ ಖಾತೆಗಳನ್ನು ಹೊಂದಿರಲೇಬೇಕು ಮತ್ತು ಸರ್ಕಾರದಿಂದ ಯಾವುದೇ ಯೋಜನೆಗಳ ಅನುದಾನ ಅಥವಾ ಸಹಾಯಧನ ಪಡೆಯಬೇಕೆಂದು ಕೂಡ ಈಗ ಆ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸೇರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿರಲೇಬೇಕು. ಬ್ಯಾಂಕ್ ಗಳ ವಿಚಾರವಾಗಿ ಹೇಳುವುದಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲಾ ಬ್ಯಾಂಕ್ ಗಳ ಮೇಲೆ ಸಾರ್ವಭೌಮತ್ವವನ್ನು ಹೊಂದಿದೆ. RBI ತನ್ನ ಅಧೀನದಲ್ಲಿರುವ ಬ್ಯಾಂಕ್ ಗಳಿಗೆ ಕೆಲವು ನೀತಿ ನಿಯಮಗಳನ್ನು ರೂಪಿಸುತ್ತದೆ ಮತ್ತು ಇದರ ಸಂಬಂಧಿತ ವ್ಯಾಜ್ಯಗಳನ್ನು ಕೂಡ ಬಗೆಹರಿಸುತ್ತದೆ.

ಪ್ರಮುಖವಾದ ವಿಷಯವೇನೆಂದರೆ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳು RBI ವ್ಯಾಪ್ತಿಗೆ ಸೇರುತ್ತವೆ. ಖಾಸಗಿ ವಲಯದ, ಸಹಕಾರಿ ವಲಯದ, ಸರ್ಕಾರಿ ವಲಯದ ಎಲ್ಲಾ ಬ್ಯಾಂಕ್ ಗಳು ಕೂಡ RBI ನಿಯಮದಡಿ ಕಾರ್ಯನಿರ್ವಹಿಸಬೇಕು. ಕಾಲಕಾಲಕ್ಕೆ ಬದಲಾಗುವ ನಿಯಮಗಳ ಅನುಸಾರವಾಗಿ ಪಡೆದುಕೊಳ್ಳಬೇಕು ಹೋದಲ್ಲಿ ಬ್ಯಾಂಕ್ ಗಳಿಗೆ ದಂಡ ವಿಧಿಸುವ ಅಥವಾ ಲೈಸೆನ್ಸ್ ಕ್ಯಾನ್ಸಲ್ ಆಗುವ ಶಿಕ್ಷೆ ನೀಡುವ ಅಧಿಕಾರ RBI ಗೆ ಇದೆ.

ಇದನ್ನೆಲ್ಲಾ ಹೊರತುಪಡಿಸಿ ಈಗ ಹೊಸತೊಂದು ಬದಲಾವಣೆ ಬಗ್ಗೆ ಚಿಂತನೆ ನಡೆಸುತ್ತಿದೆ, ಇದನ್ನು ಭಾರತದ ಪ್ರತಿಯೊಬ್ಬ ನಾಗರಿಕನು ತಿಳಿದುಕೊಳ್ಳಲು ಬೇಕಾಗಿದೆ. ಅದೇನೆಂದರೆ, ಈಗಾಗಲೇ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಮರ್ಜ್ (Merge) ಆಗಿರುವುದನ್ನು ನೀವು ಕೇಳಿರುತ್ತೀರಿ. ಕೆಲ ವರ್ಷಗಳ ಹಿಂದೆ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ನೊಂದಿಗೆ ಮರ್ಜ್ ಆಯಿತು. ಕೆಲ ತಿಂಗಳುಗಳ ಹಿಂದೆ HDFC ಬ್ಯಾಂಕ್ ಕೂಡ ಮರ್ಜ್ ಆಯಿತು.

ಈಗ ಮುಂದುವರೆದು ದೇಶದ ಸರ್ಕಾರಿ ವಲಯ ಬ್ಯಾಂಕುಗಳನ್ನು ಖಾಸಗಿ ಬ್ಯಾಂಕ್ ಗಳ ಜೊತೆ ಮರ್ಜ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಸಾರ್ವಜನಿಕ ಬ್ಯಾಂಕುಗಳಲ್ಲಿ ಗ್ರಾಹಕರ ಹಲವು ವ್ಯಾಜ್ಯಗಳು ಇನ್ನು ಬಗೆಹರಿಯದ ಕಾರಣ, ಸರ್ಕಾರಿ ಬ್ಯಾಂಕ್ ಗಳಿಗಿಂತ ಖಾಸಗಿ ಬ್ಯಾಂಕ್ ಗಳಲ್ಲಿ ಜನರು ಹೆಚ್ಚು ವಹಿವಾಟು ನಡೆಸುತ್ತಿರುವ ಕಾರಣ‌.

ಅವುಗಳಲ್ಲಿ ಉತ್ತಮ ಸೇವೆ ಸಿಗುತ್ತದೆ ಎನ್ನುವ ಅಭಿಪ್ರಾಯ ಗ್ರಾಹಕರಿಗೆ ಮೂಡಿರುವ ಕಾರಣ ಅಂತಹ ಬ್ಯಾಂಕುಗಳನ್ನ ಖಾಸಗೀಕರಣ ಮಾಡುವ ತೀರ್ಮಾನವನ್ನ ಮಾಡಲಾಗಿದೆ. ಆ ರೀತಿಯ ಬ್ಯಾಂಕುಗಳ ಪಟ್ಟಿ ಮಾಡಲು NITI ಮತ್ತು RBI ಗೆ ಸಲಹೆ ನೀಡಲಾಗಿದೆ.

ಇದರ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ (Minister Nirmala Sitharaman) ರವರು RBI ಮತ್ತು NITI ನೀಡಿರುವ ಸಲಹೆಯ ಪ್ರಕಾರ ದೇಶದ 12 ಸರ್ಕಾರೀ ಬ್ಯಾಂಕುಗಳನ್ನ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ, ಬ್ಯಾಂಕುಗಳ ಖಾಸಗೀಕರಣದಿಂದ ಸಾರ್ವಜನಿಕ ಬ್ಯಾಂಕುಗಳ ಪಟ್ಟಿ 27 ರಿಂದ 12 ಕ್ಕೆ ಇಳಿಕೆ ಆಗಲಿದೆ ಎಂದಿದ್ದಾರೆ.

ಈ ಪಟ್ಟಿಯಿಂದ ಹೊರಗ ಉಳಿದಿರುವ 12 ಬ್ಯಾಂಕುಗಳು:-
● ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
● ಪಂಜಾಬ್ ನ್ಯಾಷನಲ್ ಬ್ಯಾಂಕ್
● ಬ್ಯಾಂಕ್ ಆಫ್ ಬರೋಡ
● ಕೆನರಾ ಬ್ಬ್ಯಾಂಕ್
● ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
● ಇಂಡಿಯನ್ ಬ್ಯಾಂಕ್
● ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
● ಬ್ಯಾಂಕ್ ಆಫ್ ಇಂಡಿಯಾ
● ಬ್ಯಾಂಕ್ ಆಫ್ ಮಹಾರಾಷ್ಟ್ರ
● ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
● UCO ಬ್ಯಾಂಕ್.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now