ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ, ಅದೇನೆಂದರೆ ಕಲಿಯುವ ಮಕ್ಕಳಿಗೆ ಶಾಲಾ ದಾಖಲಾತಿ ಶುಲ್ಕದಿಂದ ಹೇಳಿದ ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ವರ್ಷಪೂರ್ತಿ ಒಂದಲ್ಲ ಒಂದು ಖರ್ಚು ಇರುತ್ತದೆ.
ಕುಟುಂಬದ ಆರ್ಥಿಕ ಪರಿಸ್ಥಿತಿ ಸಮಸ್ಯೆ ಕಾರಣದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಾರದು ಎಂದು ಸರ್ಕಾರದ ವತಿಯಿಂದಾಗಿ ಉಚಿತ ಶಿಕ್ಷಣದಿಂದ ಹಿಡಿದು ಇನ್ನು ಅನೇಕ ಸೌಲಭ್ಯವನ್ನು ಒದಗಿಸಿಕೊಟ್ಟಿದೆ ಜೊತೆಗೆ ಸ್ಕಾಲರ್ಶಿಪ್ ಕೂಡ ನೀಡುತ್ತಿದೆ. ಸರ್ಕಾರ ಮಾತ್ರವಲ್ಲದೇ ಕೆಲ ಖಾಸಗಿ ಸಂಸ್ಥೆಗಳು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದೆ.
ಅದೇ ರೀತಿ 2023-24ನೇ ಸಾಲಿನಲ್ಲಿ SBI ಫೌಂಡೇಶನ್ 6ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆಶಾ SBI ಸ್ಕಾಲರ್ಶಿಪ್ ನಲ್ಲಿ ವಾರ್ಷಿಕವಾಗಿ 10,000 ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ಯಾರೆಲ್ಲ ಅರ್ಜಿ ಹಾಕಬಹುದು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಅರ್ಹತೆಗಳು:-
● ಈ ಶೈಕ್ಷಣಿಕ ವರ್ಷದಲ್ಲಿ 6 ರಿಂದ 12 ನೇ ತರಗತಿಯೊಳಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು.
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಳೆದ ತರಗತಿಯ ಪರೀಕ್ಷೆ ಫಲಿತಾಂಶದಲ್ಲಿ 75% ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
● ಅರ್ಜಿ ಹಾಕುವ ವಿದ್ಯಾರ್ಥಿಯ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ ವಾರ್ಷಿಕವಾಗಿ 3 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಹಿಂದಿನ ವರ್ಷದ ಪರೀಕ್ಷೆಯ ಅಂಕಪಟ್ಟಿ
● ಪ್ರಸಕ್ತ ಶಾಲೆಯಲ್ಲಿ ಶಾಲಾ ತರಗತಿಗೆ ದಾಖಲಾಗಿರುವ ಬಗ್ಗೆ ಪುರಾವೆಗಾಗಿ ಗುರುತಿನ ಚೀಟಿ ಅಥವಾ ಶುಲ್ಕದ ರಶೀದಿ
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರ
● ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
● ಆದಾಯ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲಿನ ಅರ್ಹತೆಗಳನ್ನು ಪೂರೈಸಿ, ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು https://www.buddy4study.com/page/sbi-asha-scholarship-program ಈ ಲಿಂಕ್ ಕ್ಲಿಕ್ ಮಾಡಿ.
● ಮುಖಪುಟದಲ್ಲಿ SBIF Asha Scholarship 2023 ಅಪ್ಲೈ ಮಾಡಲು ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ಅಪ್ಲೈ ಮಾಡಲು ಮೊದಲು ರಿಜಿಸ್ಟ್ರೇಷನ್ ಆಗಬೇಕು,
ವಿದ್ಯಾರ್ಥಿಯ ಹೆಸರು ಮೊಬೈಲ್ ಸಂಖ್ಯೆ ವಿವರ ನೀಡಿ ರಿಜಿಸ್ಟ್ರೇಷನ್ ಆಗಿ ನಂತರ ಲಾಗ್ ಐಡಿ ಪಡೆದು ಅರ್ಜಿ ಸಲ್ಲಿಸಿ.
● ಅರ್ಜಿ ಫಾರಂನಲ್ಲಿ ಮೊದಲಿಗೆ ವಿದ್ಯಾರ್ಥಿಗಳ ಎಲ್ಲಾ ವಿವರಗಳನ್ನು ಕೂಡ ಸರಿಯಾಗಿ ಭರ್ತಿ ಮಾಡಬೇಕು ನಂತರ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಪೂರ್ತಿ ಮಾಡಬೇಕು.
● ಅರ್ಜಿ ಸಬ್ಮಿಟ್ ಆದ ನಂತರ ತಪ್ಪದೆ ಅರ್ಜಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು ಮುಂದೆ ಇದು ನಿಮ್ಮ ಅರ್ಜಿ ಸ್ಟೇಟಸ್ ತಿಳಿದುಕೊಳ್ಳಲು ಮತ್ತು ಇನ್ನಿತರ ವಿಷಯಗಳಿಗೆ ಅನುಕೂಲಕ್ಕೆ ಬರುತ್ತದೆ.
● ಮೊಬೈಲ್ ನಲ್ಲಿ ಬಹಳ ಸರಳವಾಗಿ ಈ ಮೇಲೆ ತಿಳಿಸಿದ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದು, ಒಂದು ವೇಳೆ ಸಾಧ್ಯವಾಗದವರು ಹತ್ತಿರದಲ್ಲಿರುವ ಕಂಪ್ಯೂಟರ್ ಸೆಂಟರ್ ಗಳಲ್ಲಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ.
● ನಿಮ್ಮ ಅರ್ಜಿ ಪರಿಶೀಲನೆಯಾಗಿ ಸ್ಕಾಲರ್ಶಿಪ್ ಅನುಮೋದನೆಯಾದರೆ ನೀವು ನೀಡಿರುವ ಬ್ಯಾಂಕ್ ಖಾತೆಗೆ DBT ಮೂಲಕ ನೇರವಾಗಿ ಸ್ಕಾಲರ್ಶಿಪ್ ವರ್ಗಾವಣೆಯಾಗುತ್ತದೆ
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ನವೆಂಬರ್, 2023.