ಕಾಮಾಲೆ ರೋಗವನ್ನು ಕೇವಲ 21 ದಿನಗಳಲ್ಲಿ ಸಂಪೂರ್ಣವಾಗಿ ಗುಣ ಮಾಡುವ ಮನೆ ಮದ್ದು.!

 

WhatsApp Group Join Now
Telegram Group Join Now

ಕಾಮಾಲೆ ರೋಗವನ್ನು ಜಾಂಡಿಸ್, ಹೆಪಟೈಟಿಸ್ ಬಿ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ. ಹಳದಿ ಕಾಮಾಲೆ, ಬಿಳಿಕಾಮಾಲೆ ಎಂದು ಹೇಳಲಾಗುವ ಇದನ್ನು ಹೆಪಟೈಟಿಸ್ ಬಿ ಹೆಪಟೈಟಿಸ್ ಸಿ ಇನ್ನು ಮುಂತಾಗಿ ಕರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಲಿವರ್ ಆರೋಗ್ಯ ಸುಧಾರಿಸಿದರೆ ಖಂಡಿತವಾಗಿಯೂ ಜಾಂಡಿಸ್ ಕಾಯಿಲೆ ಗುಣವಾಗುತ್ತದೆ.

ಆದರೆ ಇದಕ್ಕೆ ಇಂಗ್ಲಿಷ್ ಮೆಡಿಸನ್ ಮೊರೆ ಹೋಗುವುದರ ಬದಲು ಆಯುರ್ವೇದ ಔಷಧಿಯನ್ನು ಬಳಸುವುದು ಅತ್ಯಂತ ಉತ್ತಮ ಮತ್ತು ಇದು ತೀಕ್ಷ್ಣವಾಗಿ ಗುಣಮಾಡುತ್ತದೆ ಎನ್ನುವುದು ಅನೇಕ ಬಾರಿ ಪರೀಕ್ಷೆಗೆ ಒಳಪಟ್ಟು ದೃಢ ಪಟ್ಟಿದೆ. ಆಯುರ್ವೇದದಲ್ಲಿ ಯಾವ ರೀತಿ 21 ದಿನಗಳಲ್ಲಿ ಜಾಂಡಿಸ್ ಕಾಯಿಲೆಯನ್ನು ಸಂಪೂರ್ಣವಾಗಿ ಗುಣ ಮಾಡಬಹುದು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೂರ್ಯೋದಯದ ಸಮಯದಲ್ಲಿ ಅಂದರೆ ಬೆಳಗ್ಗೆ 5 ರಿಂದ 6 ಗಂಟೆ ಒಳಗೆ ನೆಲನೆಲ್ಲಿ ಕಾಯಿ ಗಿಡದ ಕಷಾಯವನ್ನು ಕುಡಿಯಬೇಕು. ಇದನ್ನು ಹೇಗೆ ತಯಾರಿಸುವುದು ಎಂದರೆ ನೆಲನೆಲ್ಲಿಕಾಯಿಯನ್ನು ಭೂಮಿ ಆಮ್ಲ ಎಂದು ಕೂಡ ಕರೆಯುತ್ತಾರೆ. ಇದನ್ನು ಬೇರು ಹೂವು ಕಾಯಿ ಸಮೇತಕಿತ್ತು ಚೆನ್ನಾಗಿ ಅರೆದು ಆ ರಸವನ್ನು ಮಜ್ಜಿಗೆಗೆ ಹಾಕಿ 21 ದಿನಗಳು ತಪ್ಪದೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಇದಾದ ಬಳಿಕ ಬೆಳಗ್ಗೆ ಹಾಗೂ ರಾತ್ರಿ ಸಮಯ ಊಟ ಮಾಡುವುದಕ್ಕೂ 15 ರಿಂದ 20 ನಿಮಿಷಗಳ ಮೊದಲು ಮತ್ತೊಂದು ಔಷಧಿಯನ್ನು ಸೇವಿಸಬೇಕು. ಅದು ಯಾವುದೆಂದರೆ, ಜಾಲಿ ಮರದ ಚಿಗುರು ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಗಿದು ನುಂಗಬೇಕು.

ಇದು ಸಾಧ್ಯವಾಗದೆ ಇದ್ದವರು ಇಂಗಳದ ಕಾಯಿ ಸಿಪ್ಪೆ ತೆಗೆದು ಒಳಗೆ ಇರುವ ಹಣ್ಣನ್ನು ಕಡಲೆಕಾಯಿ ಗಾತ್ರಕ್ಕೆ ಉಂಡೆಗಳಾಗಿ ಮಾಡಿಕೊಂಡು ಈ ಮೇಲೆ ತಿಳಿಸಿದ ರೀತಿ ಊಟ ಆಗುವ 15 ರಿಂದ 20 ನಿಮಿಷಗಳ ಮೊದಲು ತಿನ್ನಬೇಕು. 21 ದಿನಗಳು ನಿರಂತರವಾಗಿ ತಪ್ಪದೇ ಈ ರೀತಿ ಮಾಡುವುದರಿಂದ ಕಡಾ ಖಂಡಿತವಾಗಿಯೂ ಜಾಂಡೀಸ್ ಗುಣವಾಗುತ್ತದೆ.

ಸಾಮಾನ್ಯವಾಗಿ ಜಾಂಡಿಸ್ ಕಾಯಿಲೆ ಬಂದವರಿಗೆ ಮಲ ವಿಸರ್ಜನೆಗೆ ಕಷ್ಟ ಆಗುತ್ತದೆ ಹಾಗಾಗಿ ಅವರಿಗೆ ಭೇದಿ ಆಗುವ ರೀತಿ ಮಾಡಬೇಕು. ಹೀಗಾಗಬೇಕು ಎಂದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಶುದ್ಧವಾದ ಹರಳೆಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು. ಆಗ ಹೊಟ್ಟೆ ಶುದ್ದಿಯಾಗಿ ಕಲ್ಮಶಗಳು ಆಚೆ ಬರುತ್ತದೆ. ಅವರಿಗೆ ಗುಣವಾಗಲು ಸಹಕಾರಿಯಾಗುತ್ತದೆ.

ಇಲ್ಲವಾದಲ್ಲಿ, ಸ್ವಲ್ಪ ಶುಂಠಿಯನ್ನು ಚೆನ್ನಾಗಿ ಚಚ್ಚಿ ಅದನ್ನು ನೀರಿಗೆ ಹಾಕಿ ಸೈಂಧವ ದ್ರಾವಣವನ್ನು ಹಾಕಿ ಕುದಿಸಿ ಅದನ್ನು ಕುಡಿಯಲು ಕೊಡಬೇಕು ಇದರಿಂದಲೂ ಕೂಡ ಅವರ ಲಿವರ್ ಕ್ಲೀನ್ ಆಗುತ್ತದೆ. ನೂರರಲ್ಲಿ 90% ಭಾಗ ಜನರಿಗೆ ಈ ಮೇಲೆ ತಿಳಿಸಿದ ಕ್ರಮಗಳಿಂದಲೇ ಇದು ಸಂಪೂರ್ಣವಾಗಿ ಗುಣವಾಗುತ್ತದೆ.

ಒಂದು ವೇಳೆ ತೀರಾ ಆರೋಗ್ಯ ಹದಗೆಟ್ಟಿದೆ ಎನ್ನುವುದಾದರೆ ಅವರಿಗೆ ಆಯುರ್ವೇದದಲ್ಲಿ ನೀಡಲಾಗುವ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಮತ್ತು ಆಯುರ್ವೇದ ಔಷಧಿ ಯಾದ ಪಂಚಭೂತ ಶುದ್ದಿ ಔಷಧಿಯನ್ನು ನೀಡಬೇಕು. ಇಷ್ಟು ಮಾಡಿದರೆ ಸಾಕು ಅವರು ಸಂಪೂರ್ಣವಾಗಿ ಹೊಸ ವ್ಯಕ್ತಿಯಂತೆ ಹೊಸ ಚೈತನ್ಯದೊಂದಿಗೆ ತಯಾರಾಗುತ್ತಾರೆ. ಬಹಳ ಉಪಯುಕ್ತವಾದ ಮಾಹಿತಿ ಇದಾಗಿದ್ದು ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.

https://youtu.be/HREXZ-suQTg?si=G8Q2hSDLacs9hQo9

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now