ಹೆಣ್ಣಾಗಲಿ ಗಂಡಾಗಲಿ ಸೌಂದರ್ಯದ ಹೆಚ್ಚು ಕಾಳಜಿ ಮಾಡುತ್ತಾರೆ. ಮುಖ ಹಾಗೂ ಕೈಕಾಲುಗಳ ಚರ್ಮ ಹೊಳಪಿನಿಂದ ಇರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಬಣ್ಣ ಕಡಿಮೆ ಇದ್ದರೂ ಆರೋಗ್ಯವಾಗಿದ್ದರೆ ಸಾಕು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಕೆಲ ಕಾರಣಗಳಿಂದಾಗಿ ಬಿಳಿತೊನ್ನು, ಬಿಳಿ ಮಚ್ಚೆ ಶ್ವೇತ ಚರ್ಮ ಮುಂತಾದ ಕಾಯಿಲೆಗಳು ಬರುತ್ತವೆ.
ಇದು ಮುಖದ ಅಥವಾ ಕೈಕಾಲುಗಳ ಕುತ್ತಿಗೆಯ ಭಾಗದಲ್ಲಿ ಕಾಣಿಸಿಕೊಂಡಾಗ ನೋಡಲು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಅನೇಕರು ಡಿಪ್ರೆಶನ್ ಗೆ ಒಳಗಾಗುತ್ತಾರೆ. ಆಗ ಇದು ಚರ್ಮದ ಸಮಸ್ಯೆ ಮಾತ್ರವಲ್ಲದೆ ಮಾನಸಿಕ ಸಮಸ್ಯೆಯಾಗಿ ಕೂಡ ಕಾಡಲು ಶುರುಮಾಡುತ್ತದೆ. ಆದರೆ ಇದರ ಬಗ್ಗೆ ಬಹಳ ಭಯ ಬೀಳುವ ಅಗತ್ಯ ಇಲ್ಲ ಯಾಕೆಂದರೆ ಎಲ್ಲಾ ಆರೋಗ್ಯ ಸಮಸ್ಯೆಗೂ ಕೂಡ ಚಿಕಿತ್ಸೆ ಇದ್ದೇ ಇದೆ.
ಮೊದಲಿಗೆ ಕಾಯಿಲೆಗೆ ಕಾರಣ ಏನು ಎಂದು ತಿಳಿದುಕೊಂಡರೆ, ಅರ್ಧ ಈ ಸಮಸ್ಯೆ ಪರಿಹಾರ ಅದಂತೆ. ಈ ಮೇಲೆ ತಿಳಿಸಿದಂತೆ ಬಿಳಿ ತೊನ್ನು, ಬಿಳಿ ಮಚ್ಚೆ, ಚರ್ಮ ಬೆಳ್ಳಗಾಗುವುದು ಅಥವಾ ಕಪ್ಪಗಾಗುವುದು ಈ ರೀತಿ ಆಗಲು ಕಾರಣ ನಮ್ಮ ವಾತ ಹಾಗೂ ಪಿತ್ತ ವಿಕಾರಗಳು. ಈ ರೀತಿ ವಾತ ಹಾಗೂ ಪಿತ್ತ ವಿಕಾರಗಳು ಹೆಚ್ಚಾದಾಗ ರಕ್ತ ಧಾತುಗಳು ದೂಷಿತವಾಗುತ್ತವೆ.
ಹೀಗೆ ರಕ್ತ ಕೆಟ್ಟು ಹೋದಾಗ ಅಲರ್ಜಿ ಮಾತ್ರವಲ್ಲದೆ ಈ ಮೇಲೆ ತಿಳಿಸಿದ ಇನ್ನೂ ಅನೇಕ ಚರ್ಮದ ಕಾಯಿಲೆಗಳು ಬರುತ್ತವೆ. ಈ ವಿಕಾರಗಳನ್ನು ಸರಿಪಡಿಸಿಕೊಂಡರೆ ನಿಧಾನವಾಗಿ ಕಾಯಿಲೆ ನಿಯಂತ್ರಣವಾಗುತ್ತದೆ. ಇದರ ಜೊತೆಗೆ ತಪ್ಪದೆ ಮೂರು ತಿಂಗಳುಗಳ ಕಾಲ ಈಗ ನಾವು ಹೇಳುವ ಈ ಮನೆ ಮದ್ದುಗಳನ್ನು ಪಾಲಿಸಿ.
* ಪ್ರತಿದಿನವೂ ಕೂಡ ಸ್ನಾನ ಮಾಡುವ ಮುನ್ನ ಹರಳೆಣ್ಣೆ ಸಾಸಿವೆ ಎಣ್ಣೆ ಹಾಗೂ ಎಳ್ಳೆಣೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಹಚ್ಚಿ. ಇದೆಲ್ಲವೂ ದೇಹಕ್ಕೆ ಚೆನ್ನಾಗಿ ಹಿಡಿಯುವವರೆಗೂ ಕೂಡ ಇದ್ದು ಸ್ನಾನ ಮಾಡಿ. ಮೂರು ತಿಂಗಳುಗಳ ಕಾಲ ನಿತ್ಯವೂ ಈ ರೀತಿ ಮಾಡಬೇಕು. ಸ್ನಾನ ಮಾಡುವಾಗ ಯಾವುದೇ ಕಾರಣಕ್ಕೂ ಕೆಮಿಕಲ್ ಇಂದ ಮಾಡಿರುವ ಸೋಪು ಶಾಂಪೂ ಇತ್ಯಾದಿಗಳನ್ನು ಬಳಸಬಾರದು. ಕಡಲೆ ಹಿಟ್ಟು ಅಥವಾ ಸೀಗೆಕಾಯಿ ಇವುಗಳನ್ನು ಬಳಸಿ ಸ್ನಾನ ಮಾಡಬೇಕು.
* ಒಂದು ಲೀಟರ್ ಹರಳೆಣ್ಣೆಗೆ 100 ಗ್ರಾಂ ನಷ್ಟು ಉತ್ರಾಣಿ ಬೇರಿನ ಪುಡಿಯನ್ನು ಹಾಕಿ ಸ್ವಲ್ಪ ಪಚ್ಚೆ ಕರ್ಪೂರವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ರಾತ್ರಿ ಹೊತ್ತು ಮಲಗುವ ಮುನ್ನ ಈ ರೀತಿಯಾಗಿ ಬಿಳಿತೊನ್ನು ಅಥವಾ ಶ್ವೇತ ಚರ್ಮ, ಬಿಳಿ ಮಚ್ಚೆ ಆಗಿರುವ ಕಡೆ ಹಚ್ಚಿ ಮಲಗಬೇಕು. ಮರುದಿನ ಇದನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ಕೂಡ ಇದು ಪರಿಹಾರವಾಗುತ್ತದೆ.
* ಒಂದು ಲೀಟರ್ ಎಳ್ಳೆಣ್ಣೆಗೆ 100 ಗ್ರಾಂ ನಷ್ಟು ನಿತ್ಯ ಪುಷ್ಪದ ಎಲೆ ಹಾಗೂ ಹೂವು, ಉತ್ರಾಣಿಯ ಹೂವು ಮತ್ತು ಸ್ವಲ್ಪ ಪಚ್ಚಕರ್ಪೂರ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಎಣ್ಣೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂಡ ಮೂರು ತಿಂಗಳುಗಳ ಕಾಲ ಚರ್ಮ ಸಮಸ್ಯೆ ಉಂಟಾಗಿರುವ ಕಡೆಗಳಿಗೆ ಹಚ್ಚಿ ಸ್ನಾನ ಮಾಡಬೇಕು.
ಈ ರೀತಿ ಮನೆ ಮದ್ದುಗಳನ್ನು ಮಾಡಿ ಸಾಕಷ್ಟು ಜನರು ಈ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಶೇಕಡ 95% ಜನರಿಗೆ ಈ ಮನೆ ಮದ್ದುಗಳಲ್ಲಿ ಪರಿಹಾರ ಸಿಗುತ್ತದೆ ಆಗದಿದ್ದವರು ಆಯುರ್ವೇದದಲ್ಲಿ ಹೇಳಲಾಗುವ ಪಂಚಕರ್ಮ ಚಿಕಿತ್ಸೆ ತೆಗೆದುಕೊಂಡರೆ ಖಂಡಿತ ಗುಣವಾಗುತ್ತಾರೆ.