ಗೆಲ್ಲುವ ಕುದುರೆಗೆ ಯಾವಾಗಲೂ ಗೆಲ್ಲುತ್ತದೆ, ಹಳ್ಳದ ಕಡೆಗೆ ನೀರು ಹರಿಯುತ್ತದೆ ಹಾಗೆಯೇ ಧನವಂತರು ಇರುವ ಕಡೆ ಹಣದ ಹೊಳೆಯೇ ಹರಿಯುತ್ತದೆ. ಈ ರೀತಿ ಯಾಕೆ ಆಗುತ್ತದೆ ಎಂದು ನಮಗೆ ಆಶ್ಚರ್ಯ ಆಗಬಹುದು ಇದರ ಗುಟ್ಟೇನೆಂದರೆ ಹಣಕ್ಕೆ ಹಣವನ್ನು ಆಕರ್ಷಿಸುವ ಶಕ್ತಿ ಇದೆ.
ನಾವು ಸ್ವಲ್ಪ ಹಣ ಸಂಪಾದನೆ ಮಾಡುವವರೆಗೂ ಕೂಡ ಬಹಳ ಕ’ಷ್ಟ ಪಡಬೇಕು ಆದರೆ ನಂತರ ಅದನ್ನು ದುಪ್ಪಟ್ಟಾಗಿಸುವುದು ಅಥವಾ ಇನ್ನಷ್ಟು ಹೆಚ್ಚಿಗೆ ಮಾಡುವುದು ಬಹಳ ಸುಲಭ. ಯಾಕೆಂದರೆ ಆ ಹಣವು ಮತ್ತಷ್ಟು ಹಣವನ್ನು ಆಕರ್ಷಣೆ ಮಾಡುತ್ತದೆ ಈ ರೀತಿ ಹಣದ ಆಕರ್ಷಣೆಯನ್ನು ಹೆಚ್ಚು ಮಾಡಲು ನಮ್ಮ ಸ್ವಂತ ಪ್ರಯತ್ನ ಗಳ ಜೊತೆ ಕೆಲವೊಂದು ಟ್ರಿಕ್ ಗಳನ್ನು ಕೂಡ ಫಾಲೋ ಮಾಡಬೇಕು.
ಈ ಒಂದು ಉಪಾಯಗಳು ವರ್ಕ್ ಆಗಿ ಹೆಚ್ಚು ಹಣ ಸೇರುವಂತಾಗುತ್ತದೆ ಅಂತಹದ್ದೇ ಒಂದು ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಹಣಕ್ಕೆ ಸಹಜವಾಗಿ ಆಕರ್ಷಣೆಯ ಗುಣ ಇದೆ. ಇದನ್ನು ಇನ್ನಷ್ಟು ಹೆಚ್ಚಿಗೆ ಮಾಡುವುದರಿಂದ ಇದರ ಪ್ರಭಾವ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಇರುತ್ತದೆ.
ನೀವೇನಾದರೂ ಬಹಳ ಹಣಕಾಸಿನ ತೊಂದರೆಯಲ್ಲಿ ಇದ್ದೀರ ಎಂದರೆ ನೀವು ಬೇಕಾದರೆ ನಾವು ಈಗ ಹೇಳುವ ಈ ಒಂದು ಪ್ರಯೋಗವನ್ನು ಮಾಡಿ ನೋಡಿ ಎಷ್ಟು ಪರಿಣಾಮಕಾರಿಯಾಗಿ ಇದು ಫಲ ನೀಡುತ್ತದೆ ಎನ್ನುವುದು ನಿಮಗೆ ಅರ್ಥ ಆಗುತ್ತದೆ.
ಇದನ್ನು ಮಾಡಲು ಯಾವುದೇ ಹಣ ಖರ್ಚು ಮಾಡುವ ಅಗತ್ಯ ಇಲ್ಲ, ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಬಹಳ ಭಕ್ತಿಯಿಂದ ಈ ಕಾರ್ಯವನ್ನು ಮಾಡಿದರೆ ಸಾಕು. ನೀವು ಯಾವುದೇ ದಿನ ಯಾವುದೇ ಸಮಯದಲ್ಲಿ ಬೇಕಾದರೂ ಇದನ್ನು ಮಾಡಬಹುದು. ಮಾಡುವ ಮುನ್ನ ಮಡಿಯುಟ್ಟು ಸಕಾರಾತ್ಮಕವಾದ ಮನಸ್ಸಿನಿಂದ ಮಾಡಬೇಕು ಅಷ್ಟೇ.
ಒಂದು ದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ, ದೇವರಿಗೆ ಪೂಜೆ ಮಾಡಿ ಮನಸ್ಸಿನಲ್ಲಿ ತಾಯಿ ಮಹಾಲಕ್ಷ್ಮಿ ತಾಯಿ ಸರಸ್ವತಿ ಹಾಗೂ ಜಗನ್ಮಾತೆ ಪಾರ್ವತಿಯ ಅನುಗ್ರಹಕ್ಕಾಗಿ ಪ್ರಾರ್ಥಿಸಿ. ನಿಮ್ಮ ಕುಲದೇವರು ಇಷ್ಟ ದೇವರನ್ನು ನೆನೆದು ಈ ಒಂದು ಉಪಾಯ ಮಾಡಿ. ನೀವು 10 ರೂಪಾಯಿ ನೋಟನ್ನು ತೆಗೆದುಕೊಳ್ಳಿ.
ಆ ನೋಟ್ ಎಲ್ಲೂ ಹರಿದಿರಬಾರದು, ಗಲೀಜು ಆಗಿರಬಾರದು ಅದರ ಮೇಲೆ ಏನನ್ನು ಬರೆದಿರಬಾರದು. ಸಾಧ್ಯವಾದರೆ ಒಂದು ಹೊಸ ನೋಟ್ ತೆಗೆದುಕೊಳ್ಳಿ ಇಲ್ಲವಾದರೆ ಚೆನ್ನಾಗಿರುವ ನೋಟ್ ತೆಗೆದುಕೊಳ್ಳಿ. ನೆನಪಿಡಿ 100 ರೂಪಾಯಿನೋಟ್ ಮೇಲೆ ಮಾತ್ರ ಈ ರೀತಿ ಬರೆಯಬೇಕು.
“ಸ್ತ್ರೀಂ, ಹ್ರೀಂ, ದುಂ” ಎಂದು ಬಿಳಿ ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಬರೆಯಿರಿ ಹಾಲು ಅಥವಾ ಎಕ್ಕದ ಹಾಲಿನಿಂದ ಅಥವಾ ಇನ್ಯಾವುದೇ ಬಿಳಿಯ ವಸ್ತುವಿನಿಂದ ಸ್ತ್ರೀಂ ಎಂದು ಬರೆಯಿರಿ ಇದು ಮಹಾಲಕ್ಷ್ಮಿಯ ಬೀಜಾಕ್ಷರ ಎಂದು ಹೇಳಲಾಗುತ್ತಿದೆ. ಹ್ರೀಂ ಎನ್ನುವುದನ್ನು ಅರಿಶಿಣದಲ್ಲಿ ಬರೆಯಿರಿ ಇದು ಕಾಳಿದೇವಿಯ ಬೀಜಾಕ್ಷರವಾಗಿದ್ದು ಕಾಳಿ ದೇವಿಯ ಅನುಗ್ರಹ ದೊರೆಯುತ್ತದೆ.
ದುಂ ಎನ್ನುವುದನ್ನು ಎಲ್ಲಾ ದೇವಾನು ದೇವತೆಗಳ ಅನುಗ್ರಹಕ್ಕಾಗಿ ಪ್ರಾರ್ಥಿಸುವ ಬೀಜಾಕ್ಷರವಾಗಿದ್ದು ಕುಂಕುಮದಲ್ಲಿ ಇದನ್ನು ಬರೆಯಿರಿ. ಇದು ಕೂಡ ಎಲ್ಲ ದೇವತೆಗಳ ಆಶೀರ್ವಾದವನ್ನು ಸಿಗುವಂತೆ ಮಾಡುತ್ತದೆ. ಹೀಗೆ ಬರೆದು ಸ್ವಲ್ಪ ಆರಲು ಬಿಟ್ಟು ನಂತರ ಅದಕ್ಕೆ ಧೂಪ ದೀಪ ಆರತಿಯನ್ನು ಮಾಡಿ ನಮಸ್ಕರಿಸಿ ನಿಮ್ಮ ಆಸೆಯನ್ನು ಹೇಳಿಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ಮುಂದುವರೆಯಿರಿ.
ಆದರೆ ಈ ನೋಟನ್ನು ಪೂಜೆ ಮಾಡಿದ ಮೇಲೆ ಮಡಚಬಾರದು, ಸಾಧ್ಯವಾದರೆ ಇದಕ್ಕೆ ಫ್ರೇಮ್ ಹಾಕಿ ಹಾಗೆ ದೇವರ ಮನೆಯಲ್ಲಿ ಇಟ್ಟುಕೊಳ್ಳಿ. ಪ್ರತಿದಿನವೂ ಕೂಡ ನೀವು ದೇವರ ಪೂಜೆ ಮಾಡುವಾಗ ಇದಕ್ಕೂ ಕೂಡ ಪೂಜೆ ಮಾಡಿ ಬಹಳ ಪರಿಣಾಮಕಾರಿಯಾಗಿ ನಿಮಗೆ ಫಲ ದೊರೆಯುತ್ತದೆ ಅದರಲ್ಲೂ ಹಣಕಾಸಿನ ವಿಚಾರದಲ್ಲಂತೂ ಬಹಳ ಏಳಿಗೆ ಕಾಣುತ್ತೀರಿ.