ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ, ತಡ ಮಾಡಿದವರಿಗೆ 50 ಪಟ್ಟು ಹೆಚ್ಚು ಶುಲ್ಕ ವಿಧಿಸಿದ ಸರ್ಕಾರ.!

ಭಾರತದ ಕಾನೂನಿನ ಪ್ರಕಾರ ಜನನ ಹಾಗೂ ಮರಣ ನೋಂದಣಿ ಮಾಡಬೇಕಾದದ್ದು ನಾಗರಿಕರ ಕರ್ತವ್ಯ. ಹಾಗೆಯೇ ಅನೇಕ ಕಡೆಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಕಡ್ಡಾಯ ದಾಖಲೆಗಳಾಗಿವೆ.

WhatsApp Group Join Now
Telegram Group Join Now

ಒಂದು ಮಗುವನ್ನು ಶಾಲೆಗೆ ಸೇರಿಸುವಾಗ, ಮಗುವಿಗೆ ಆಧಾರ್ ಕಾರ್ಡ್ ಮಾಡಿಸುವಾಗ, ರೇಷನ್ ಕಾರ್ಡ್ ಗೆ ಸೇರಿಸುವಾಗ ಜನನ ಪ್ರಮಾಣ ಪತ್ರ ಬೇಕಾದರೆ ಮೃ.ತ ವ್ಯಕ್ತಿಯ ಆಸ್ತಿಯ ವಿಭಾಗ ಮಾಡಿಕೊಳ್ಳುವ ಸಂದರ್ಭದಲ್ಲಿ ಮತ್ತು ಆತನಿಗೆ ಸೇರಿದ ಹಣಕಾಸಿನ ವಹಿವಾಟುಗಳನ್ನು ನಾಮಿನಿ ನಿರ್ವಹಿಸಬೇಕಾದಾಗ ಮರಣ ಪ್ರಮಾಣ ಪತ್ರ ಬೇಕಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ನೊಂದಣಿ ಮಾಡಿಸಿಕೊಳ್ಳದೆ ತಡವಾಗಿ ಜನನ ಹಾಗೂ ಮರಣ ಪತ್ರ ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗಿದೆ.

ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ವಿಚಾರವಾಗಿ ಸರ್ಕಾರ ಒಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಆ ಪ್ರಕಾರ ಇನ್ನು ಮುಂದೆ ನೀವು ನಿಗದಿತ ಸಮಯದಲ್ಲಿ ಬಿಟ್ಟು ನಿಧಾನವಾಗಿ ಜನನ ಹಾಗೂ ಮ.ರಣ ನೋಂದಣಿ ಮಾಡಿದೆ ಪ್ರಮಾಣಪತ್ರ ಪಡೆಯುವುದಾದರೆ ಈವರೆಗೂ ವಿಧಿಸಿದ್ದ ಶುಲ್ಕಕ್ಕಿಂತ ಇನ್ನು ಹೆಚ್ಚಿನ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಕುರಿತಾದ ವರದಿ ಹೇಗಿದೆ ನೋಡಿ.

ಜನನ ಮತ್ತು ಮ.ರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ಮಾಡಿಸಬಹುದು. ಭಾರತ ಸರ್ಕಾರದ ಜನನ, ಮರಣಗಳ ನೋಂದಣಿ ಅಧಿನಿಯಮ 2023ಕ್ಕೆ ಅನುಗುಣವಾಗಿ ಕರ್ನಾಟಕದಲ್ಲಿ ಜನನ, ಮ.ರಣಗಳ ನೋಂದಣಿ ನಿಯಮ 9ಕ್ಕೆ, ತಿದ್ದುಪಡಿ ಮಾಡಿ, ಕರ್ನಾಟಕ ಜನನ, ಮ.ರಣ ನೋಂದಣಿ ನಿಯಮಗಳು 2023 ರನ್ನು ಉಲ್ಲೇಖ ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ.

ಅದರ ಪ್ರಕಾರವಾಗಿ ಇಷ್ಟೆಲ್ಲಾ ಅನುಕೂಲತೆ ಇದ್ದು ತಡವಾಗಿ ನೋಂದಾಯಿಸುವವರಿಗೆ ಈ ಅಧಿಸೂಚನೆಯನ್ವಯ ಹೆಚ್ಚು ಶುಲ್ಕ ಬೀಳಲಿದೆ. ಒಂದು ವರ್ಷದ ನಂತರ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಯವರ ಆದೇಶವನ್ನು ಪಡೆಯುವ ಬಗ್ಗೆ ಹಾಗೂ ವಿಳಂಬ ಶುಲ್ಕವನ್ನು ಕ್ರಮವಾಗಿ ನಿಯಮ 9(1) ಪಡೆಯಲು ರೂ.100 ಶುಲ್ಕ, 9(2) ಪಡೆಯಲು ರೂ.200 ಶುಲ್ಕ ಮತ್ತು 9(3) ಪಡೆಯಲು ರೂ.500‌ ಏರಿಕೆ ಮಾಡಲಾಗಿದೆ.

ಈ ಅಧಿಸೂಚನೆಯ ಕುರಿತು ಜನನ, ಮ.ರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಪ್ರಭಾರ ನಿರ್ದೇಶಕರು ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಜನನ, ಮರ.ಣ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆ ಆದೇಶ ಪ್ರತಿಯಲ್ಲಿ ಮುಖ್ಯವಾಗಿ ತಿಳಿಸಿರುವ ಮಾಹಿತಿ ಏನೆಂದರೆ ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಹಾಲಿ ಶುಲ್ಕ ರೂ.2ರಿಂದ ರೂ.100ಕ್ಕೆ ಹೆಚ್ಚಳ ಮಾಡಲಾಗಿದೆ.

ಹಾಗೂ ಜನನ, ಮರಣ ಘಟಿಸಿದ 30 ದಿನಗಳ ನಂತರ ಹಾಗೂ 1 ವರ್ಷದ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ರೂ.5 ರಿಂದ 200ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಜನನ, ಮ.ರಣ ಘಟಿಸಿದ 1 ವರ್ಷದ ನಂತರದ ವಿಳಂಬ ನೋಂದಣಿಶುಲ್ಕವನ್ನು ಹಾಲಿ ಇರುವ ರೂ.10ರಿಂದ ರೂ.500ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ನಿಯಮಗಳಿಗೆ ತಿದ್ದುಪಡಿ ಬಗ್ಗೆ ಚರ್ಚಿಸಲಾಗಿದೆ ಮತ್ತು ಮುಖ್ಯಮಂತ್ರಿಗಳೇ ಇದಕ್ಕೆ ಸಹಿ ಕೂಡ ಮಾಡಿ ಅನುಮೋದಿಸಿದ್ದಾರೆ.

ಅದರ‌‌‌ ಪ್ರಕಾರ ಅಧಿಕೃತವಾಗಿ ವಿಳಂಬ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನ ನಿಧಾನವಾಗಿ ಪಡೆದುಕೊಳ್ಳೋಣ ಅಥವಾ ಅಗತ್ಯ ಬಿದ್ದಾಗ ನೋಡಿಕೊಳ್ಳೋಣ ಎಂದು ನಿರ್ಲಕ್ಷಿಸುವಂತಿಲ್ಲ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now