ಆದಾಯ ತೆರಿಗೆ ಇಲಾಖೆಯು (Income Tax Department) ಅನೇಕ ರೀತಿಯ ನಿಯಮಗಳನ್ನು ಹೊಂದಿದೆ. ಇವುಗಳ ಉಲ್ಲಂಘನೆ ಆದಾಗ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಗೆ ಒಬ್ಬ ವ್ಯಕ್ತಿಯ ಹಣಕಾಸಿನ ವಹಿವಾಟಿನ ಮೇಲೆ ಅನುಮಾನ ಮೂಡಿದಾಗ ರೈಡ್ (Income tax ride) ಕೂಡ ಆಗಬಹುದು.
ನಾವು ಪ್ರತಿನಿತ್ಯ ಮಾಧ್ಯಮಗಳಲ್ಲಿ ಈ ವಿಷಯವನ್ನು ಓದುತ್ತಾ ಇರುತ್ತೇವೆ. ಅದೇ ರೀತಿಯ ವಿಷಯಕ್ಕೆ ಸಂಬಂಧಪಟ್ಟ ಒಂದು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಅದೇನೆಂದರೆ, ಆದಾಯ ತೆರಿಗೆ ಇಲಾಖೆಯು ಒಬ್ಬ ವ್ಯಕ್ತಿ ಎಷ್ಟು ಖಾತೆ ಹೊಂದಿರಬಹುದು ಮತ್ತು ಆತನ ಖಾತೆಯಲ್ಲಿ ನಡೆಯುವ ಆರ್ಥಿಕ ವಹಿವಾಟಿನ ಗರಿಷ್ಠ ಮಿತಿ ಏನು ಎನ್ನುವುದರ ಬಗ್ಗೆ ಕೂಡ ನಿಯಮ ಹೇರಿದೆ.
ಭ್ರ’ಷ್ಟಾ’ಚಾ’ರ ಹಾಗೂ ಕಪ್ಪು ಹಣದ ಹರಿಯುವಿಕೆಯನ್ನು ತಡೆಗಟ್ಟುವ ಸಲುವಾಗಿ ಇಂತಹ ಒಂದು ಕಠಿಣ ನಿಯಮವನ್ನು ಆದಾಯ ತೆರಿಗೆ ಇಲಾಖೆಯು ಅನುಸರಿಸುತ್ತಿದೆ. ಇದರ ಪ್ರಕಾರವಾಗಿ ಎಲ್ಲಾ ಬ್ಯಾಂಕುಗಳು ಕಾರ್ಪೊರೇಟ್ ಕಂಪನಿಗಳು ಅಂಚೆ ಕಚೇರಿಗಳು NBFC ಗಳು ಈ ನಿಯಮವನ್ನು ಪಾಲಿಸಬೇಕು ಮತ್ತು ಇವುಗಳಲ್ಲಿ ಖಾತೆ ತೆರೆಯುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ನಿಯಮಗಳು ಅನ್ವಯವಾಗುತ್ತವೆ.
ಈ ಪ್ರಕಾರವಾಗಿ ಇರುವ ಒಂದು ನಿಯಮವೇನೆಂದರೆ ಖಾತೆ ತೆರೆಯುವ ವಿಚಾರದಲ್ಲಿ ಯಾವುದೇ ತಕರಾರು ಇಲ್ಲದೆ ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಎಷ್ಟು ಬೇಕಾದರೂ ಬ್ಯಾಂಕ್ ಖಾತೆ ಹೊಂದಿರಬಹುದು ಮತ್ತು ತನ್ನ ಇಚ್ಛೆಯ ಯಾವುದೇ ಬ್ಯಾಂಕ್ ನಲ್ಲಿ ಬೇಕಾದರೂ ಆತ ಖಾತೆ ತೆರೆಯಬಹುದು. ಆ ವ್ಯಕ್ತಿಯು ತಮ್ಮ ಬ್ಯಾಂಕ್ ನಲ್ಲಿ ಖಾತೆ ತೆರೆಯುವುದಕ್ಕೆ ಯಾವ ಅರ್ಹತೆಗಳನ್ನು ಹೊಂದಿರಬೇಕು ಅಥವಾ ಏನು ದಾಖಲೆಗಳನ್ನು ಸಲ್ಲಿಸಬೇಕು ಎನ್ನುವ ನಿಯಮವನ್ನು ಬ್ಯಾಂಕ್ ಗಳು ಮಾಡುತ್ತವೆ.
ಆದರೆ ಆದಾಯ ತೆರಿಗೆ ಇಲಾಖೆಯು ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಯಲ್ಲಿ ವಹಿವಾಟು ಮಾಡಬಹುದಾದ ಮಿತಿಗೆ ಟ್ಯಾಕ್ಸ್ ವಿಧಿಸುತ್ತದೆ ಮತ್ತು ಒಂದೇ ಬಾರಿಗೆ ಒಬ್ಬ ವ್ಯಕ್ತಿಯು 10 ಲಕ್ಷಗಳ ವಹಿವಾಟು ನಡೆಸಿದಾಗ ಆತನಿಗೆ ನೋಟಿಸ್ ಬರುತ್ತದೆ. ಒಬ್ಬ ವ್ಯಕ್ತಿಯು ತನ್ನ ಖಾತೆಯಲ್ಲಿ ಎಷ್ಟು ಬೇಕಾದರೂ ಹಣ ಹೊಂದಿರಬಹುದು ಆದರೆ ಒಂದು ಆರ್ಥಿಕ ವರ್ಷದಲ್ಲಿ ಒಂದೇ ಬಾರಿಗೆ 10 ಲಕ್ಷ ಹಣವನ್ನು ಆತನ ಖಾತೆಗೆ ಹಾಕುವಂತಿಲ್ಲ.
ಒಂದು ವೇಳೆ ಹಾಕಿದರೂ ಕೂಡ ಅದರ ಮೂಲ ಏನು ಎನ್ನುವುದರ ದಾಖಲೆಯನ್ನು ಆ ವ್ಯಕ್ತಿ ಭದ್ರಪಡಿಸಿಕೊಳ್ಳಬೇಕು. ಯಾಕೆಂದರೆ ಈ ರೀತಿ ಖಾತೆಗೆ ಹಣ ಬಿದ್ದ ತಕ್ಷಣ ಆ ಹಣಕಾಸು ಸಂಸ್ಥೆಗಳು ವಹಿವಾಟಿನ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸುತ್ತವೆ. ಇದು ಸರ್ಕಾರದಿಂದ ಹಣಕಾಸು ಸಂಸ್ಥೆಗಳಿಗೆ ಸೂಚಿಸಿರುವ ಕಡ್ಡಾಯ ನಿಯಮವಾಗಿದೆ.
ಈ ವಿವರಗಳನ್ನು ಪರಿಶೀಲಿಸಿ, ಆದಾಯ ತೆರಿಗೆ ಇಲಾಖೆ ನೋಟೀಸ್ ಕಳಿಸುತ್ತದೆ ಅದನ್ನು ಒಂದು ತಿಂಗಳಲ್ಲಿ ಕಳಿಸಬಹುದು ಅಥವಾ 10 ವರ್ಷಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಕಳುಹಿಸಬಹುದು. ಒಂದು ವೇಳೆ ಇನ್ಕಮ್ ಟ್ಯಾಕ್ಸ್ ರೈಡ್ ಕೂಡ ಆಗಬಹುದು, ನೀವು ಅದಕ್ಕೆ ತಯಾರಿರಬೇಕಾಗುತ್ತದೆ. ನಿಮ್ಮ ವಹಿವಾಟು ಕಾನೂನು ಬದ್ಧವಾಗಿದ್ದರೆ ನೀವು ನಿಮ್ಮ ಹಣಕಾಸಿನ ಮೂಲದ ವಿವರವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ನೀಡಿದರೆ ನಿಮ್ಮ ಮೇಲೆ ಯಾವುದೇ ರೀತಿಯ ಕ್ರಮಗಳು ಜರುಗುವುದಿಲ್ಲ.