ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿದೆ. ಇದಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲು ಸರ್ಕಾರವು ಕೂಡ ತಾನು ನೀಡುವ ಎಲ್ಲ ಗುರುತಿನ ಚೀಟಿಗಳನ್ನೂ ಸ್ಮಾರ್ಟ್ ಕಾರ್ಡ್ (Smartcard) ರೂಪದಲ್ಲಿ ನೀಡಲು ಚಿಂತಿಸುತ್ತಿದೆ ಮತ್ತು ಈಗಾಗಲೇ ವೋಟರ್ ಐಡಿ ಇನ್ನಿತರ ದಾಖಲೆಗಳನ್ನು ಸಾಂಪ್ರದಾಯಕ ಪದ್ಧತಿ ಬದಲಾಗಿ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ವಿತರಿಸುತ್ತಿದೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಾರಿಗೆ ಇಲಾಖೆಯಲ್ಲೂ ಕೂಡ ಈ ಬದಲಾವಣೆ ತರಲು ಆದೇಶವನ್ನು ಹೊರಡಿಸಿದೆ.
ಈ ನಿಟ್ಟಿನಲ್ಲಿ ದೇಶದಲ್ಲಿ ಡಿಎಲ್ ( Driving Liecence ) ಹಾಗೂ ಆರ್ ಸಿ ( registration Card) ಕಾರ್ಡ್ ಗಳು ಒಂದೇ ರೀತಿ ಇರಬೇಕು ಎಂಬುವುದು ಸರ್ಕಾರದ ಆಶಯವಾಗಿದೆ. ಅದಕ್ಕಾಗಿ ವಾಹನ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಇರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಸರಿ ಪಡಿಸಬೇಕು ಎಂದು ನಿರ್ಧರಿಸಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ಕಾರ್ಡ್ ಗಳನ್ನು ಸ್ಮಾರ್ಟ್ ಕಾರ್ಡ್ ಮಾಡಲು ನಿರ್ಧರಿಸಿದೆ. ಈಗಾಗಲೇ ಸರ್ಕಾರ ವಿತರಿಸಿರುವ DL ಹಾಗೂ RC ಕಾರ್ಡ್‌ಗಳಲ್ಲಿ ಚಿಪ್ ( Chip ) ಇದೆ, ಆದರೆ ಈಗ ಸರ್ಕಾರ ನೀಡಲಿಚ್ಚಿಸಿರುವ ಸ್ಮಾರ್ಟ್ ಕಾರ್ಡ್ ನಲ್ಲಿ ಇದೆಲ್ಲದರ ಜೊತೆ QR Code ಕೂಡಾ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.
ಆದರೆ ಈಗ ಜಾರಿಗೆ ತರಲು ಸಿದ್ಧಗೊಳಿಸಿರುವ ಈ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್‌ಗಳಲ್ಲಿ QR ಕೋಡ್ ಕೂಡ ಇರುವುದು ವಿಶೇಷವಾಗಿದೆ. ಈ QR Code ನಿಂದ ಪೊಲೀಸರು ಅಥವಾ ಆರ್‌ಟಿಒ ( RTO ) ತಪಾಸಣೆ ವೇಳೆ ವಾಹನದ ದೃಢೀಕರಣ ಹಾಗೂ ವಾಹನ ಮಾಲೀಕರ ಎಲ್ಲ ಮಾಹಿತಿಯನ್ನು ಒಂದೇ ಫಾರ್ಮ್ ನಲ್ಲಿ ನೋಡಲು ಅನುಕೂಲವಾಗುತ್ತದೆ.
ಈ ನೂತನ ಮಾದರಿಯ ಡ್ರೈವಿಂಗ್ ಲೈಸೆನ್ಸ್ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ರಕ್ತದ ಗುಂಪು ಸೇರಿದಂತೆ ಹಲವು ವೈಯುಕ್ತಿಕ ವಿವರಗಳು ಇರುತ್ತವೆ. ಹಾಗೆಯೇ ಹಿಂಭಾಗದಲ್ಲಿ ಆ ವ್ಯಕ್ತಿಯ ಮೊಬೈಲ್ ನಂಬರ್ ಮತ್ತು ಎಮರ್ಜೆನ್ಸಿ ಕಾಂಟಾಕ್ಟ್ ನಂಬರ್ ಹಾಗೂ ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಆತನಿಗೆ ಅನುಮತಿ ಇದೆ ಎನ್ನುವ ವಿವರ ಇರುತ್ತದೆ. ಈ ಎಲ್ಲಾ ವಿಷಯಗಳೂ ಚಿಪ್‌ಗಳಲ್ಲಿ ಕೂಡ ಇರುತ್ತದೆ ಅದರ ಜೊತೆ QR Code ನಲ್ಲೂ ಇರಲಿದೆ.
ಹಾಗೆಯೇ ಹೊಸ RC ಕಾರ್ಡ್ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ಆದ ದಿನಾಂಕ, ಕಾರ್ಡ್ ಅಂತ್ಯ ಆಗುವ ದಿನಾಂಕ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಜೊತೆಯಲ್ಲೇ ವಾಹನಗಳ ಟ್ರ್ಯಾಕಿಂಗ್ ಸಿಸ್ಟಂ ಕೂಡಾ ಅಳವಡಿಕೆ ಮಾಡಲಾಗಿರುತ್ತೆ. ಈ RC ಕಾರ್ಡ್‌ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ.
ಪೊಲೀಸರು ಅಥವಾ RTO ಸಿಬ್ಬಂದಿ DL ಸ್ಮಾರ್ಟ್ ಕಾರ್ಡ್ ನ್ನು ತಮ್ಮ ಮೊಬೈಲ್‌ನಲ್ಲಿ ಒಮ್ಮೆ ಸ್ಕ್ಯಾನ್ ಮಾಡಿದ ಕೂಡಲೇ ಆ ವ್ಯಕ್ತಿಯ ಎಲ್ಲ ಮಾಹಿತಿ ಅವರಿಗೆ ಲಭ್ಯವಾಗುತ್ತದೆ. ಈ ಒಂದು ಮುಖ್ಯ ಕಾರಣದಿಂದಲೇ ಸ್ಮಾರ್ಟ್ ಕಾರ್ಡ್‌ನಲ್ಲಿ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅತಿ ಶೀಘ್ರವಾಗಿ ಇವುಗಳನ್ನು ವಿತರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.