1839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ.! PUC ಪಾಸ್ ಆದವರಿಗೆ ಭರ್ಜರಿ ಅವಕಾಶ.! ವೇತನ 42,500/-

 

WhatsApp Group Join Now
Telegram Group Join Now

ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವುದು ಅನೇಕರ ಕನಸು. ಶಾಲೆಯಲ್ಲಿ ಓದುತ್ತಿರುವಾಗಲೇ ಅನೇಕರು ಇದಕ್ಕಾಗಿ ತಮ್ಮ ಸಮಯ ಹಾಗೂ ಶ್ರಮ ವ್ಯರ್ಥ ಮಾಡಿ ತಯಾರಾಗುತ್ತಿರುತ್ತಾರೆ. ‌‌‌‌ಅಂತಹ ಆಕಾಂಕ್ಷಿಗಳಿಗೆ ಈಗ ಸರ್ಕಾರದಿಂದ ಸರ್ಕಾರಿ ಹುದ್ದೆ ನೇಮಕಾತಿ ಕುರಿತು ಸಿಹಿ ಸುದ್ದಿ ಸಿಕ್ಕಿದೆ.

ಅದೇನೆಂದರೆ ಕೋವಿಡ್ ಆದ ನಂತರ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ, ಈಗ ನೂತನ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಡಿಸೆಂಬರ್ 6ರಂದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಕೂಡ ವಿವರಿಸಿದ್ದಾರೆ.

ಆ ಪ್ರಕಾರವಾಗಿ ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾವಾರು ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದರ ಪಟ್ಟಿ ಕೂಡ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ದ್ವಿತೀಯ PUC ಪರೀಕ್ಷೆಯಲ್ಲಿ ಪಡೆದ ಹೆಚ್ಚು ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಸಾಕಷ್ಟು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವುದರಿಂದ ಬಹುತೇಕ ಎಲ್ಲ ವಿದ್ಯಾರ್ಥಿಗಳ ಫಲಿತಾಂಶ ಅಂಕವು ಹೆಚ್ಚಾಗಿರುವುದರಿಂದ ಈ ಪ್ರಕ್ರಿಯೆಯಲ್ಲಿ ಗೊಂದಲಗಳಾಗುತ್ತಿವೆ.

ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಕೊಂಡಿರುವ ಹೊಸ ನೇಮಕಾತಿ ನಿಯಮದ ಬಗ್ಗೆ ಕೂಡ ವಿಷಯ ಹಂಚಿಕೊಂಡಿದ್ದಾರೆ. ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಎಂದು ಇದ್ದ ಈ ಹುದ್ದೆಯ ಹೆಸರನ್ನು ಈಗ ಗ್ರಾಮ ಆಡಳಿತಾಧಿಕಾರಿ ಎಂದು ಬದಲಾಯಿಸಲಾಗಿದೆ.

ದ್ವಿತೀಯ PUC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸಿ ನಂತರ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಜೊತೆ ಸೂಕ್ತರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಮತ್ತು ಗ್ರಾಮ ಲೆಕ್ಕಾಧಿಕಾರಿ ಎನ್ನುವ ಪದನಾಮವನ್ನು ಗ್ರಾಮ ಆಡಳಿತ ಕಾರ್ಯ ಎಂದು ಬದಲಾಯಿಸಿ ಆದೇಶ ಹೊರಡಿಸಿದ್ದಾರೆ.

ಈ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯು ಶೀಘ್ರವೇ ಆರಂಭವಾಗಲಿದ್ದು ಸದ್ಯದಲ್ಲೇ ಅಧಿಕೃತ ಅಧಿಸೂಚನೆ ಕೂಡ ಸರ್ಕಾರದಿಂದ ಹೊರ ಬೀಳಲಿದೆ. ಹಾಗಾಗಿ ಈಗಿನಿಂದಲೇ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವುದು ಉತ್ತಮ. ಗ್ರಾಮ ಆಡಳಿತಕಾರಿ ಹುದ್ದೆ ನೇಮಕಾತಿ ಕುರಿತು ಆಗಿರುವ ಬದಲಾವಣೆಗಳಲ್ಲಿ ಕೆಲ ಪ್ರಮುಖ ಮಾಹಿತಿಗಳು, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಸಲ್ಲಿಸುವ ದಿನಾಂಕ ಈ ಕುರಿತದ ಮಾಹಿತಿ ಹೀಗಿದೆ ನೋಡಿ.

ಒಟ್ಟು ಹುದ್ದೆಗಳ ಸಂಖ್ಯೆ: 1839

ವಿದ್ಯಾರ್ಹತೆ:- ದ್ವಿತೀಯ PUC
ಜಿಲ್ಲಾವಾರು ಪಟ್ಟಿ:-
* ಬೆಂಗಳೂರು ನಗರ – 56
* ಬೆಂಗಳೂರು ಗ್ರಾಮಾಂತರ – 70
* ರಾಮನಗರ – 92
* ತುಮಕೂರು – 129
* ಚಿಕ್ಕಮಗಳೂರು – 41
* ಮೈಸೂರು – 112
* ಚಿಕ್ಕಬಳ್ಳಾಪುರ – 47
* ಮಂಡ್ಯ – 108
* ಚಾಮರಾಜನಗರ – 99
* ಹಾಸನ – 96
* ಕೊಡಗು – 8
* ದಕ್ಷಿಣ ಕನ್ನಡ – 90
* ಉಡುಪಿ – 40
* ಬೆಳಗಾವಿ – 116
* ವಿಜಯಪುರ – 11
* ಬಾಗಲಕೋಟೆ – 46
* ಧಾರವಾಡ – 29
* ಗದಗ – 54
* ಹಾವೇರಿ – 61
* ಉತ್ತರ ಕನ್ನಡ – 14
* ಬೀದರ್ – 44
* ರಾಯಚೂರು – 23
* ಕಲ್ಬುರ್ಗಿ – 121
* ಕೊಪ್ಪಳ – 33
* ಯಾದಗಿರಿ – 18
* ಬಳ್ಳಾರಿ – 34
* ವಿಜಯನಗರ – 24

ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 21,000 ದಿಂದ ರೂ. 42,500 ವೇತನ ನಿಗದಿ ಆಗಿರುತ್ತದೆ * ಎಲ್ಲಾ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.

ವಯೋಮಿತಿ ಸಡಿಲಿಕೆ:-
* SC/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ
* OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now