ಸ್ವತಂತ್ರ ನಂತರ ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳನ್ನು ಕೂಡ ಹಲವು ಬದಲಾವಣೆಗಳು ಆದವು. ಹಾಗೆ ನಮ್ಮ ದೇಶದ ಜನರ ಪ್ರಮುಖ ಕಸಬಾದ ಕೃಷಿ ಕ್ಷೇತ್ರದಲ್ಲಿ ಕೂಡ ಕೆಲ ಮಾರ್ಪಾಡು ಮಾಡಲಾಯಿತು. ಅದುವರೆಗೂ ಕೆಲವೇ ವರ್ಗದ ಪಾಲಾಗಿದ್ದ ಆಸ್ತಿಯನ್ನು ಹಂಚಿಕೆ ಮಾಡಿ ಎಲ್ಲರಿಗೂ ಕೂಡ ಕೃಷಿ ಭೂಮಿ ಸಿಗಲಿ ಎಂದು 1980 ರಲ್ಲಿ ಕೃಷಿ ಚಟುವಟಿಕೆಗೆ ಸಣ್ಣ ರೈತರಿಗೆ ಸರಕಾರದಿಂದ ಎರಡು ಎಕರೆ ಜಮೀನನ್ನು ಮಂಜೂರು ಮಾಡುವ ವ್ಯವಸ್ಥೆಯನ್ನು ಅಂದಿನ ಸರಕಾರ ಜಾರಿಗೆ ತಂದಿತು.
ಆದರೆ ಈ ಒಂದು ಯೋಜನೆ ಯಶಸ್ವಿಯಾಗಿ ಎಲ್ಲಾ ಭೂ ರಹಿತ ರೈತರಿಗೆ ತಲುಪಿಸಲು ಸರಕಾರದಿಂದ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಭೂಮಿ ಸಿಗದ ಭೂ ರಹಿತ ಕೃಷಿಕರು ತಮ್ಮ ಜೀವನ ನಡೆಸಲು ಸಿಕ್ಕ ಸಿಕ್ಕ ಜಾಗದಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಜಮೀನನ್ನು ಉಳುಮೆ ಮಾಡಿ ವ್ಯವಸಾಯ ಮಾಡಲಾರಂಭಿಸಿರು.
ಉಳುಮೆ ಮಾಡುತ್ತಾ ಆ ಭೂಮಿಯನ್ನು ಆ ರೈತರ ಕುಟುಂಬವು ಅವಲಂಬಿಸಿದ್ದರು ಅವರ ಹೆಸರಿನಲ್ಲಿ ಭೂಮಿ ಇರದ ಕಾರಣ ಯಾವುದೇ ಹಕ್ಕು ಪತ್ರಗಳು ಕೂಡ ಅವರ ಹತ್ತಿರ ಇರಲಿಲ್ಲ. ಇದರಿಂದ ರೈತರಿಗೆ ತಮ್ಮ ಕೃಷಿ ಭೂಮಿಗೆ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆಯಲಾಗುತ್ತಿರಲಿಲ್ಲ.
ಇದಕ್ಕಾಗಿ ಇಂತಹ ರೈತರಿಗೆ ಅವರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಅಥವಾ ಹಕ್ಕು ಪತ್ರವನ್ನು ನೀಡುವುದಕ್ಕಾಗಿ 1991ರಲ್ಲಿ ರಾಜ್ಯ ಸರಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1991ರಲ್ಲಿ ನಮೂನೆ 50 ಹಾಗೆ 1999ರಲ್ಲಿ ನಮೂನೆ 53 ಮತ್ತು 2018 ರಲ್ಲಿ ನಮೂನೆ 57 ರ ಈ ಮೂರು ಕಾಯಿದೆಗಳ ಅಡಿಯಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.
ಕಳೆದ 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈಗ ಅಕ್ರಮ ಸಕ್ರಮದಲ್ಲಿ ಅಂತಹ ರೈತರ ಹೆಸರಿಗೆ ಡಿಜಿಟಲ್ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದೆ ತಂತ್ರಜ್ಞಾನ ಬಳಸಿ ಈ ಸಾಗುವಳಿ ಪತ್ರ ನೀಡಲಾಗುತ್ತಿದೆ.
ಇದಕ್ಕೂ ಮೊದಲು ನಮೂನೆ 50, 53 ಮತ್ತು 57 ರಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ಅದನ್ನು ವಿಲೇವಾರಿ ಮಾಡುವ ಕೆಲಸ ಆಗುತ್ತಿತ್ತು, ಆದರೆ ಸಾಕಷ್ಟು ಅಕ್ರಮಗಳಿಗೆ ಅವಕಾಶ ಇದ್ದ ಕಾರಣದಿಂದಾಗಿ ಈಗ ಈ ಪ್ರಕ್ರಿಯೆಯನ್ನು ಸಂಪೂರ್ಣ ತಂತ್ರಜ್ಞಾನ ( Technology ) ಬಳಸಿ ವಿತರಣೆ ಮಾಡಲು ನಿರ್ಧರಿಸಲಾಗಿದೆ ಮತ್ತು ಈ ಕಾರ್ಯಕ್ಕಾಗಿ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದ್ದು, 6 ತಿಂಗಳಲ್ಲಿ ಎಲ್ಲಾ ಅರ್ಜಿ ವಿಲೇವಾರಿ ಆಗಲಿದೆ ಎಂದಿದ್ದಾರೆ.
ಇದರ ಸಂಬಂಧ 50 ತಾಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗ ಆದೇಶ ಬರಲಿದೆ, ಉಳಿದ ತಾಲೂಕುಗಳಲ್ಲಿಯೂ ಆದಷ್ಟು ಬೇಗ ಸಮಿತಿಗಳನ್ನು ರಚಿಸಿ ಬೇಗ ಎಲ್ಲ ಕಾರ್ಯ ಮುಗಿಸಲಾಗುವುದು ಎಂದು ಕಂದಾಯ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ. ಈ ಅಕ್ರಮ ಸಕ್ರಮ ಪ್ರಕ್ರಿಯೆಗೆ ಬಗರ್ ಹುಕುಂ ಎಂದು ಕೂಡ ಕರೆಯಲಾಗುತ್ತದೆ, ರಾಜ್ಯ ಸರ್ಕಾರ ಇದಕ್ಕಾಗಿ ಬಗರ್ ಹುಕುಂ ಆ್ಯಪ್ ಕೂಡ ಬಿಡುಗಡೆ ಮಾಡಿದೆ.
ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕಾಗಿ ಸರ್ಕಾರ ಈ ಬಗರ್ ಹುಕುಂ ಆ್ಯಪ್ ರೂಪಿಸಿದೆ. ಈ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ನೂತನ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ.
ಆದರೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾಶ ಬಳಸಿ ಅರ್ಜಿ ವಿಲೇ ಮಾಡಲಾಗುತ್ತದೆ, ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.