ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರವಾದರೂ ಕಂಪ್ಯೂಟರ್ ಜ್ಞಾನ ಎನ್ನುವುದು ಬೇಸಿಕ್ ಆಗಿದೆ. ಶಾಲಾ ದಿನಗಳಲ್ಲೇ ಇದನ್ನು ಅಭ್ಯಾಸ ಮಾಡಿಸುವುದರಿಂದ ಮಕ್ಕಳು ಇನ್ನಷ್ಟು ಕ್ರಿಯೇಟಿವ್ ಆಗಿ ಕಲಿಯುತ್ತಾರೆ ಹಾಗೂ ಮುಂದಿನ ಜೀವನದಲ್ಲಿ ಅವರ ವೃತ್ತಿ ಬದುಕಿಗೆ ಇದು ಸಹಾಯ ಆಗುತ್ತದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ತಜ್ಞರ ಅಭಿಪ್ರಾಯವಾಗಿದೆ.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಕಂಪ್ಯೂಟರ್ ಶಿಕ್ಷಣವನ್ನು ಕಲಿಸುವ ಸಲುವಾಗಿ ಶಾಲಾ ದಿನಗಳಲ್ಲಿಯೇ ಕಂಪ್ಯೂಟರ್ ತರಗತಿಗಳನ್ನು ಮತ್ತು ಕಾಲೇಜು ಹಂತಕ್ಕೆ ಬರುತ್ತಿದ್ದಂತೆ ಇದಕ್ಕಾಗಿ ಕೆಲವು ಚಟುವಟಿಕೆಗಳನ್ನು ಕೂಡ ನೀಡಲಾಗುತ್ತದೆ. ಹಾಗಾಗಿ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಎನ್ನುವುದು ಒಂದು ಅಗತ್ಯ ವಸ್ತುವಾಗಿದೆ ಆದರೆ ಎಲ್ಲರ ಕುಟುಂಬಗಳಿಗೂ ಕೂಡ ತಮ್ಮ ಮಕ್ಕಳಿಗೆ ದುಬಾರಿ ಬೆಲೆಯ ಈ ಲ್ಯಾಪ್ ಟಾಪ್ ಗಳನ್ನು ಕೊಡಿಸುವ ಶಕ್ತಿ ಇರುವುದಿಲ್ಲ.
ಹಾಗಾಗಿ ಬಡತನದಲ್ಲಿರುವ ಮಕ್ಕಳು ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದುವ ಪ್ರತಿಭಾನ್ವಿತ ಕುಟುಂಬಗಳು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಈ ಸಮಸ್ಯೆ ಪಡಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಉಚಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ನೀಡಲು ಮುಂದಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಕಲಾಪದಲ್ಲಿ ಕೂಡ ಈ ವಿಚಾರ ಚರ್ಚೆಯಾಗಿದ್ದು ಸರ್ಕಾರವು ಇದಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯನ್ನು ಸಹ ನೀಡಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಸೌಲಭ್ಯ ಸಿಗುತ್ತಿದೆ.
ಇದನ್ನು ಇನ್ನಷ್ಟು ವಿಸ್ತರಿಸಿ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಉಚಿತ ಲ್ಯಾಪ್ಟಾಪ್ ಸೌಲಭ್ಯ ನೀಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಇರುವ ಪ್ರಮುಖ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಪ್ರಯೋಜನಗಳು:-
* ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ನೀಡುವುದು
* ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ ಟಾಪ್ ಪಡೆಯಲು ಸಾಧ್ಯವಾಗುವುದರಿಂದ ಡಿಜಿಟಲ್ ಅಭಿವೃದ್ಧಿಯನ್ನು ಸಹ ಖಚಿತ ಪಡಿಸಿದಂತಾಗುತ್ತದೆ.
* ದುರ್ಬಲ ಕುಟುಂಬಗಳ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಈ ಯೋಜನೆ ಲಾಭವನ್ನು ಪಡೆಯುತ್ತಾರೆ, ಈ ಮೂಲಕ ಆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಆಧಾರ್ ಕಾರ್ಡ್
* ಕಾಲೇಜು ಗುರುತಿನ ಚೀಟಿ
* ಕಾಲೇಜು ಪ್ರವೇಶ ಚೀಟಿ
* ಮೊಬೈಲ್ ಸಂಖ್ಯೆ
* ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:-
ರಾಜ್ಯ ಸರ್ಕಾರವು ಪ್ರಾರಂಭಿಸಿರುವ ಈ ಕಲ್ಯಾಣ ಯೋಜನೆಗೆ ಲ್ಯಾಪ್ಟಾಪ್ ಪಡೆಯಲು ಯಾವುದೇ ರೀತಿ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಸರ್ಕಾರ ಹೊಸ ಅಧಿವೇಶನದಲ್ಲಿ ತಿಳಿಸಿರುವ ಪ್ರಕಾರ ಕಾಲೇಜಿಗೆ ದಾಖಲಾಗುವ ಸಮಯದಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ನೀಡಲು ನಿರ್ಧರ ಮಾಡಿದೆ.
ಇದರಿಂದ ಯುವ ವಿದ್ಯಾರ್ಥಿಗಳು ಡಿಜಿಟಲ್ ಅಭಿವೃದ್ಧಿಯನ್ನು ಹೊಂದಬಹುದು ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು ಎನ್ನುವ ಉದ್ದೇಶದಿಂದಾಗಿ ಯಾವುದೇ ಅರ್ಜಿಯನ್ನು ಸ್ವೀಕರಿಸದೆ ಶಾಲೆಗೆ ದಾಖಲಾದ ಸಮಯದಲ್ಲಿಯೇ ವಿದ್ಯಾರ್ಥಿಗಳಿಗೆ ಈ ಲ್ಯಾಪ್ಟಾಪ್ ನೀಡಲು ನಿರ್ಧರಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ.